ನಾಯಕತ್ವ ಬದಲಾವಣೆ ವಿಚಾರ ಹೈಕಮಾಂಡ್ ಅಂಗಳ ತಲುಪಿದ್ದು, ಕ್ಲೈಮ್ಯಾಕ್ಸ್ ಇನ್ನೂ ಸಸ್ಪೆನ್ಸ್ ಆಗೇ ಉಳಿದುಕೊಂಡಿದೆ. ಕಗ್ಗಂಟು ಬಿಡಿಸಲು ವರಿಷ್ಠರು ಸರ್ಕಸ್ ಮಾಡ್ತಿದ್ದಾರೆ. ಈ ಮಧ್ಯೆ ರಾಜ್ಯ ಕಾಂಗ್ರೆಸ್‌ನಲ್ಲಿ ಆಗುತ್ತಿರುವ ಚಟುವಟಿಕೆಗಳ ವರದಿಯನ್ನು, ರಾಹುಲ್ ಗಾಂಧಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ಸಲ್ಲಿ ಸಿದ್ದರಾಮಯ್ಯ ವರ್ಚಸ್ಸು ಜಾಸ್ತಿ ಇದೆ. ಡಿಕೆಶಿ ಪಕ್ಷದ ನಿಷ್ಠಾವಂತ.
ಹೀಗಾಗಿ ನಾಯಕತ್ವ ವಿಚಾರದಲ್ಲಿ ಅಳೆದುತೂಗಿ ಲೆಕ್ಕಾಚಾರ ಮಾಡ್ತಿದ್ದಾರೆ. ಯಾರ ಪರವಾಗಿ ಅಥವಾ ವಿರುದ್ಧವಾಗಿ ನಿರ್ಧಾರ ಕೈಗೊಂಡ್ರೆ, ಉಂಟಾಗುವ ಪರಿಣಾಮಗಳ ಬಗ್ಗೆ ಚಿಂತೆ ಮಾಡ್ತಿದ್ದಾರೆ. ನಿನ್ನೆ ಪ್ರಿಯಾಂಕ್ ಖರ್ಗೆ ಭೇಟಿ ವೇಳೆಯೂ ಜಾತಿವಾರು ಅಂಕಿ ಅಂಶಗಳ ಬಗ್ಗೆ ಚರ್ಚೆಯೂ ನಡೆದಿದೆ. ಪ್ರಬಲ ಜಾತಿಗಳು ಮತ್ತು ನಿರ್ಣಾಯಕ ಜಾತಿಗಳ ಮಾಹಿತಿ ಸಂಗ್ರಹಿಸಿ ರಿಪೋರ್ಟ್ ಪಡೆದಿದ್ದಾರೆ.
ಈ ಮಧ್ಯೆ ರಾಹುಲ್ ಗಾಂಧಿ ಜೊತೆ ಡಿಕೆಶಿ ಫೋನ್, ಮೆಸೇಜ್‌ಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಸದ್ಯ, ಡಿಕೆಶಿಗೆ ರಾಹುಲ್ ಗಾಂಧಿ ಸಂದೇಶವೊಂದನ್ನ ಕಳಿಸಿದ್ದಾರೆ. ದಯವಿಟ್ಟು ಕಾಯಿರಿ, ನಾನೇ ನಿಮಗೆ ಫೋನ್ ಮಾಡ್ತೇನೆ ಎಂದು ಮೆಸೇಜ್ ಮಾಡಿದ್ದಾರಂತೆ. ಒಟ್ನಲ್ಲಿ ರಾಹುಲ್ ಗಾಂಧಿಗೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿನ ಸಮಸ್ಯೆ ಭಾರೀ ತಲೆನೋವು ಉಂಟು ಮಾಡಿದೆ.

