Wednesday, November 26, 2025

Latest Posts

ಡಿಕೆಶಿ – ಸತೀಶ್‌ ಜಾರಕಿಹೊಳಿ ಭೇಟಿಯಾಗಿದ್ದೇಕೆ?

- Advertisement -

ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟದ ನಡುವೆ, ಮಹತ್ವದ ಬೆಳವಣಿಗೆಗಳು ನಡೀತಿವೆ. ಸಿದ್ದು ಬಣದಲ್ಲಿ ಗುರುತಿಸಿಕೊಂಡ ನಾಯಕರನ್ನು ಡಿಕೆ ಶಿವಕುಮಾರ್‌ ಭೇಟಿಯಾಗ್ತಿದ್ದಾರೆ. ಕೆ.ಜೆ. ಜಾರ್ಜ್‌, ಜಮೀರ್‌ ಅಹಮದ್‌, ಪ್ರಿಯಾಂಕ್‌ ಖರ್ಗೆ, ಮುನಿಯಪ್ಪ ಭೇಟಿ ಆಯ್ತು. ಜೊತೆಗೆ ನಿನ್ನೆ ರಾತ್ರಿ ಸತೀಶ್‌ ಜಾರಕಿಹೊಳಿ ಜೊತೆಯೂ ರಹಸ್ಯ ಸಭೆ ನಡೆಸಿದ್ದಾರಂತೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಿನ್ನೆ ತಡರಾತ್ರಿ ಮೀಟಿಂಗ್‌ ನಡೆದಿದ್ದು, 1 ಗಂಟೆಗೂ ಹೆಚ್ಚು ಕಾಲ ಗಂಭೀರ ಚರ್ಚೆ ಮಾಡಿದ್ದಾರೆ. ಸತೀಶ್‌ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಜೊತೆಗೆ 2028ರಲ್ಲಿ ಸಿಎಂ ಆಗುವ ಆಕಾಂಕ್ಷೆಯನ್ನು ಹೊರಹಾಕಿದ್ರು.

ಇನ್ನು, ಸತೀಶ್‌ ಜಾರಕಿಹೊಳಿ ಒಂದೇ ಒಂದು ಫೋನ್‌ ಕಾಲ್‌ ಮಾಡಿದ್ರೆ, 20ರಿಂದ 25 ಮಂದಿ ಶಾಸಕರು ಒಂದುಗೂಡ್ತಾರೆ. ಅಷ್ಟೊಂದು ಸಾಮರ್ಥ್ಯ, ಪ್ರಭಾವ ಹೊಂದಿರುವ ವ್ಯಕ್ತಿ ಸತೀಶ್‌ ಜಾರಕಿಹೊಳಿ. ಹೀಗಾಗಿ ಸತೀಶ್‌ ನಡೆ ಭಾರೀ ಮಹತ್ವ ಪಡೆದುಕೊಂಡಿದೆ.

ಸತೀಶ್‌ ಜಾರಕಿಹೊಳಿ-ಡಿಕೆಶಿ ಭೇಟಿಗೆ ಹಲವು ಅರ್ಥಗಳನ್ನು ನೀಡಲಾಗ್ತಿದೆ. ಡಿಕೆಶಿ ತನ್ನ ಎದುರಾಳಿಗಳನ್ನು ಮಣಿಯಲು, ಅವರ ಸಾಮರ್ಥ್ಯ-ಶಕ್ತಿಯನ್ನು ಕುಂದಿಸಲು ಸ್ಟ್ರ್ಯಾಟಜಿ ಮಾಡ್ತಿದ್ದಾರೆ ಎನ್ನಲಾಗ್ತಿದೆ. ತನ್ನ ಹಾದಿಯನ್ನು ಸುಗಮ ಮಾಡಿಕೊಳ್ಳಲು ಡಿಕೆ ಶಿವಕುಮಾರ್‌ ಶತಪ್ರಯತ್ನ ಮಾಡ್ತಿದ್ದಾರೆ.

ಇನ್ನು, ಸತೀಶ್‌ ಜಾರಕಿಹೊಳಿ ಮನೆಯಲ್ಲಿ ಇಂದು ನಿಗದಿಯಾಗಿದ್ದ ಡಿನ್ನರ್‌ ಮೀಟಿಂಗ್‌ ದಿಢೀರ್‌ ರದ್ದಾಗಿದೆ. ಡಿಕೆಶಿ ಭೇಟಿಯಾದ ಬೆನ್ನಲ್ಲೇ ಸಭೆ ರದ್ದಾಗಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ.

- Advertisement -

Latest Posts

Don't Miss