ಮಾಂಟುವಾ ಬಳಿಯ ಬೊರ್ಗೊ ವರ್ಜಿಲಿಯೋ ನಿವಾಸಿಯಾದ 56 ವರ್ಷದ ವ್ಯಕ್ತಿಯೊಬ್ಬ, ಕೆಲ ವರ್ಷಗಳ ಹಿಂದೆ ಮೃತಪಟ್ಟ ತನ್ನ ತಾಯಿಯ ಪಿಂಚಣಿ ಹಣವನ್ನು ಪಡೆಯಲು ಆಕೆಯಂತೆ ವೇಷ ತೊಟ್ಟು ಸರ್ಕಾರಿ ಕಚೇರಿಗೆ ಹೋಗಿದ್ದಾನೆ. 2022ರಲ್ಲಿ ತಾಯಿ ಸಾವನ್ನಪ್ಪಿದ್ದರೂ, ಆತ ಈ ಮಾಹಿತಿಯನ್ನು ಎಲ್ಲರಿಂದ ಮರೆಮಾಚಿ, ತಾಯಿಯ ಶವವನ್ನು ಮನೆಯಲ್ಲಿ ಲಾಂಡ್ರಿ ಕೋಣೆಯಲ್ಲಿ ಅಡಗಿಸಿದ್ದ.
ಈ ತಿಂಗಳ ಆರಂಭದಲ್ಲಿ ತಾಯಿಯ ಗುರುತಿನ ಚೀಟಿ ಅವಧಿ ಮುಗಿದಾಗ, ಆತ ಗಾಢ ಕಂದು ಬಣ್ಣದ ವಿಗ್, ಲಿಪ್ಸ್ಟಿಕ್, ಉಗುರುಬಣ್ಣ, ಆಭರಣಗಳು ಮತ್ತು ಮಹಿಳಾ ವಸ್ತ್ರ ಧರಿಸಿ ಕಚೇರಿಗೆ ಹಾಜರಾಗಿದ್ದ. ಸ್ಟಾಫ್ ನಡುವೆ ಆತನ ಧ್ವನಿ ಮತ್ತು ವರ್ತನೆ ಅನುಮಾನ ಹುಟ್ಟಿಸಿದ್ದರಿಂದ ಪೊಲೀಸರು ಮಾಹಿತಿ ಪಡೆದರು.
ಪೊಲೀಸರು ಪರಿಶೀಲನೆ ನಡೆಸಿ, ನಿಜವಾದ ಮಹಿಳೆಯ ಫೋಟೊ ಮತ್ತು ಆತನ ರೂಪವನ್ನು ಹೋಲಿಸಿ ನೋಡಿದರು. ಬಳಿಕ ಮನೆಯನ್ನು ಪರಿಶೀಲಿಸಿದಾಗ ತಾಯಿಯ ಶವ ಮರೆಮಾಡಿರುವುದು ಪತ್ತೆಯಾಯಿತು. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಸಾವಿಗೆ ಸಹಜ ಕಾರಣವೇ ಕಾರಣ ಎಂದು ತಿಳಿದುಬಂದಿದೆ.
ಪಿಂಚಣಿ ಮತ್ತು ತಾಯಿಯ ಆಸ್ತಿಗಳ ಆದಾಯದಿಂದ ಆತ ವರ್ಷಕ್ಕೆ ಸುಮಾರು ₹50 ಲಕ್ಷ ಗಳಿಸುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶವ ಕೊಳೆಯದಂತೆ ದೇಹದಿಂದ ದ್ರವಗಳನ್ನು ಹೊರತೆಗೆದ ಆರೋಪವೂ ಆತನ ವಿರುದ್ಧ ದಾಖಲಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

