ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷದಲ್ಲಿ ಡಬಲ್ ಗುಡ್ ನ್ಯೂಸ್. ಈಗ BMRCL ಯೋಜನೆ ಪ್ರಕಾರ, ಈ ಮಾರ್ಗದಲ್ಲಿ ಪ್ರತೀ 8–10 ನಿಮಿಷಕ್ಕೊಂದು ರೈಲು ಸಂಚರಿಸುವಂತಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಅತ್ಯಂತ ಚರ್ಚೆಯಾದ ಮಾರ್ಗ ಎಂದರೆ ಯೆಲ್ಲೋ ಲೈನ್. ಕಾಮಗಾರಿ ಆರಂಭದಿಂದಲೇ ಹಲವಾರು ಅಡಚಣೆ, ಮಾರ್ಗ ಆರಂಭವಾದ ಮೇಲೂ ಅದೇ ಸಮಸ್ಯೆ. ಆದರೂ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಜನ ಈ ಲೈನ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ತಿಂಗಳುಗಳೇ ಕಳೆದರೂ ಪೂರ್ಣ ರೈಲುಗಳ ಲಭ್ಯತೆ ಇಲ್ಲದೆ ಪ್ರಯಾಣಿಕರು 15 ನಿಮಿಷ ಗ್ಯಾಪ್‌ಗೆ ಹೊಂದಿಕೊಳ್ಳಬೇಕಾಯಿತು.
ಪ್ರಸ್ತುತ ಮಾರ್ಗದಲ್ಲಿ ಕೇವಲ 5 ಸೆಟ್ ರೈಲುಗಳು ಸಂಚರಿಸುತ್ತಿವೆ. ಒಂದು ಟ್ರೈನ್ ಮಿಸ್ ಆದರೆ ಮುಂದಿನದಕ್ಕೆ 15 ನಿಮಿಷ ಕಾಯಬೇಕಾಗಿದೆ. ಪೀಕ್ ಅವರ್‌ನಲ್ಲಿ ಈ ಸಮಸ್ಯೆ ಇನ್ನೂ ತೀವ್ರವಾಗುತ್ತದೆ. ಪ್ರಯಾಣಿಕರ ಈ ಕಿರಿಕಿರಿಗೆ ಶೀಘ್ರದಲ್ಲೇ ಫುಲ್ ಸ್ಟಾಪ್ ಬೀಳಲಿದೆ. ಕೋಲ್ಕತ್ತಾ ಟಿಟಾಗರ್‌ನಿಂದ ಬಂದ 6 ಹೊಸ ರೈಲುಗಳು ಈಗಾಗಲೇ ಬೆಂಗಳೂರಿನತ್ತ ರವಾನೆಯಾಗಿವೆ. ಇವು ಮುಂದಿನ ವಾರ ನಗರ ತಲುಪಿ, ಪರೀಕ್ಷೆ ಪೂರ್ಣಗೊಳಿಸಿದ ಬಳಿಕ ಡಿಸೆಂಬರ್ ಅಂತ್ಯದೊಳಗೆ ಟ್ರ್ಯಾಕ್‌ಗೆ ಇಳಿಯಲಿವೆ. ಡಿಸೆಂಬರ್‌ನಲ್ಲಿ ಮತ್ತೊಂದು ಸೆಟ್ ಸೇರಲಿದೆ ಮತ್ತು 7ನೇ ರೈಲು ಜನವರಿ ಅಂತ್ಯಕ್ಕೆ ಸಂಚಾರಕ್ಕೆ ಲಭ್ಯ ಆಗಲಿದೆ.
ಈ ಹೊಸ ರೈಲುಗಳು ಜೋಡಣೆಯಾಗುತ್ತಿದ್ದಂತೆ, 15 ನಿಮಿಷಗಳ ಗ್ಯಾಪ್ ಕಡಿಮೆಯಾಗಿಸಿ 8–10 ನಿಮಿಷಕ್ಕೆ ಇಳಿಸುವ ಯೋಜನೆ ಇದೆ. ಇದರಿಂದ ಯೆಲ್ಲೋ ಲೈನ್‌ನಲ್ಲಿ ಪ್ರಯಾಣಿಸುವವರಿಗೆ ದೊಡ್ಡ ಅನುಕೂಲ ದೊರೆಯಲಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

