ಕೊಟ್ಟ ಮಾತಿಗೆ ತಪ್ಪಿ ನಡೆದರೆ ಪರಮಾತ್ಮ ಮೆಚ್ಚುವುದಿಲ್ಲ. ಉಳಿದ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಕೊಡಬೇಕು ಎಂದು ನಂಜಾವಧೂತ ಸ್ವಾಮೀಜಿಗಳು ಡಿಕೆಶಿ ಪರವಾಗಿ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕುರ್ಚಿ ಗೊಂದಲದ ಬಗ್ಗೆ ಮಾತನಾಡಿದ ಅವರು— ಸಿದ್ದರಾಮಯ್ಯ ಈಗ ಉತ್ತಮ ಆಡಳಿತ ಮಾಡುತ್ತಿದ್ದಾರೆ, 5 ಗ್ಯಾರಂಟಿಗಳನ್ನು ಸಕ್ರಿಯಗೊಳಿಸಿ ಜನರಿಗೆ ಲಾಭವಾಗುವಂತೆ ಮುಂದೂಡುತ್ತಿದ್ದಾರೆ. ಯಾವುದೇ ದೊಡ್ಡ ಆರೋಪಗಳಿಲ್ಲ, ಸರ್ಕಾರ ಚೆನ್ನಾಗಿ ಸಾಗುತ್ತಿದೆ. ಆದರೆ ಸಿದ್ದರಾಮಯ್ಯ ಈಗಾಗಲೇ 7.5 ವರ್ಷ ಸಿಎಂ ಆಗಿ ಸೇವೆ ನೀಡಿದವರು. 2ನೇ ಬಾರಿ ಸಿಎಂ ಆಗುವ ಮುನ್ನ, ಆ ನ್ಯಾಯ ಪ್ರಕಾರ ಎರಡನೇ ಅವಧಿ ಡಿಕೆ ಶಿವಕುಮಾರ್ ಅವರಿಗೆ ನೀಡಬೇಕು ಎಂದುಕೊಂಡಿದ್ದೇವೆ ಎಂದು ಹೇಳಿದರು.
ಹೈಕಮಾಂಡ್ ಮಾತು ಕೊಟ್ಟಿದ್ದರೆ ಅದನ್ನು ಮರೆಯಬಾರದು, ಅದಕ್ಕೆ ಬದ್ಧರಾಗಿರಬೇಕು. ಕೊಟ್ಟ ಮಾತು ತಪ್ಪಬೇಡಿ, ಉಳಿದ ಅವಧಿಯನ್ನು ಡಿಕೆಶಿ ಅವರಿಗೆ ನೀಡಿ ಎಂದು ಪಕ್ಷದ ಹಿರಿಯರಿಗೆ ಸಮುದಾಯದ ಪರವಾಗಿ ಮನವಿ ಮಾಡಿದ್ದಾರೆ.
ಇನ್ನು ಉದಾಹರಣೆ ನೀಡಿದ ಸ್ವಾಮೀಜಿ— ದೇವೇಗೌಡರು ಸಿಎಂ ಆಗಲು ಎಷ್ಟೋ ಸವಾಲು ಎದುರಿಸಿದರು, ಆದರೆ ನಂತರ ಸಿಎಂ ಆಗಿ, ನಂತರ ಪ್ರಧಾನಿ ಆಗಿ, ಪರಿಣಾಮಕಾರಿ ಆಡಳಿತ ನಡೆಸಿದರು. ಎಸ್.ಎಂ. ಕೃಷ್ಣ, ಸದಾನಂದ ಗೌಡ ಮತ್ತು ಕುಮಾರಸ್ವಾಮಿ— ಇವರೂ ಆಡಳಿತ ನಡೆಸಿದರು, ಕೆಲವರು ಕಡಿಮೆ ಅವಧಿಯಲ್ಲೇ ಕೆಳಗಿಳಿದರು. ಈಗ ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರು, 16–17 ಜಿಲ್ಲೆಗಳ ಸಮುದಾಯ ಬೆಂಬಲ ಅವರ ಹಿಂದೆ ಇದೆ. “ಡಿಕೆಶಿಗೆ ಸಿಎಂ ಸ್ಥಾನ ಕೊಡಬೇಕು” ಎಂದು ಅವರ ಪರವಾಗಿ ನಾವು ನಿಂತಿದ್ದೇವೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

