ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ನಟಿ ಅಂದ್ರೆ ಡಿಂಪಲ್ ಕ್ವೀನ್ ರಚಿತಾರಾಮ್ .. ಲಾಕ್ ಡೌನ್ ಬಳಿಕ ಮೊದಲ ಬಾರಿಗೆ ರಚಿತಾ ಅವರ ಹೊಸ ಸಿನಿಮಾವೊಂದು ಲಾಂಚ್ ಆಗಿದೆ.. ರಚಿತಾ ನಟನೆಯ ಹೊಸಚಿತ್ರಕ್ಕೆ ಕಸ್ತೂರಿ ನಿವಾಸ ಅನ್ನೋ ಟೈಟಲ್ ಫಿಕ್ಸ್ ಆಗಿದೆ.. ಈ ಹೆಸರು ಕೇಳ್ತಿದ್ದ ಹಾಗೆ ನಮಗೆ ಮೊದಲು ನೆನಪಾಗೋದೇ ಅಣ್ಣಾವ್ರ ಕಸ್ತೂರಿ ನಿವಾಸ ಸಿನಿಮಾ.. ಆದ್ರೆ ಡಾ.ರಾಜ್ ಕುಮಾರ್ ಅವರ ಆ ಚಿತ್ರಕ್ಕೂ ರಚಿತಾ ಅವರ ನಟನೆಯಲ್ಲಿ ಮೂಡಿಬರ್ತಿರುವ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಅನ್ನೋದನ್ನ ಚಿತ್ರತಂಡ ಸ್ಪಷ್ಟಪಡಿಸಿದೆ.. ವಿಶೇಷ ಅಂದ್ರೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ದಿನೇಶ್ ಬಾಬು ಅವರ ನಿರ್ದೇಶನದ 50 ನೇ ಸಿನಿಮಾ ಇದು.. ಕಸ್ತೂರಿ ನಿವಾಸ ಚಿತ್ರದ ಮುಹೂರ್ತ ಇಂದು ನೆರವೇರಿದೆ..
ರಚಿತಾ ರಾಮ್ ಅವರ ಈ ಚಿತ್ರಕ್ಕೆ ಇದೇ ಟೈಟಲ್ ನ್ನ ಇಡಲು ಕಾರಣ ಚಿತ್ರದ ಕಥೆ ಅಂತೆ.. ಸಿನಿಮಾದಲ್ಲಿ ಮನೆಯೊಂದರ ಹೆಸರೇ ಕಸ್ತೂರಿ ನಿವಾಸ.. ಆ ಮನೆಯಲ್ಲಿ ನಡೆಯುವ ಘಟನೆಯೇ ಈ ಚಿತ್ರದ ಮುಖ್ಯ ಕಥಾವಸ್ತು, ಹಾಗಾಗಿ ಈ ಚಿತ್ರಕ್ಕೆ ಕಸ್ತೂರಿ ನಿವಾಸ ಅನ್ನೋ ಟೈಟಲ್ ಇಡಲಾಗಿದ್ಯಂತೆ.. ಕಸ್ತೂರಿ ನಿವಾಸ ಫ್ಯಾಮಿಲಿ ಓರಿಯೆಂಟೆಡ್ ಹಾಗೂ ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ.. ದಿನೇಶ್ ಬಾಬು ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಬಹಳ ಖುಷಿಯಾಗ್ತಿದೆ ಅಂದ ನಟಿ ರಚಿತಾ ರಾಮ್ ಅವರು ಈ ಚಿತ್ರದಲ್ಲಿ ಇದುವರೆಗೂ ಮಾಡಿರದ ಒಂದು ವಿಭಿನ್ನ ಪಾತ್ರದಲ್ಲಿ ನಟಿಸ್ತಿರೋದಾಗಿ ತಿಳಿಸಿದ್ರು.. ಇಲ್ಲಿ ಹೆಚ್ಚಾಗಿ ಟ್ರೆಡಿಶನಲ್ ಲುಕ್ ನಲ್ಲೇ ಕಾಣಿಸಿಕೊಳ್ಳಲಿದ್ದಾರಂತೆ ರಚಿತಾ.. ಈ ಸಿನಿಮಾ ಜೊತೆಗೆ ಕನ್ನಡದ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ರಚಿತಾ ನಟಿಸ್ತಿದ್ದಾರೆ.. ಕೇವಲ ಕನ್ನಡ ಸಿನಿಮಾಗಳಷ್ಟೇ ಅಲ್ಲದೆ ತೆಲುಗಿನ ಸೂಪರ್ ಮಚ್ಚಿ ಅನ್ನೋ ಚಿತ್ರದಲ್ಲೂ ರಚಿತಾ ಅಭಿನಯಿಸ್ತಿದ್ದಾರೆ..
ಇನ್ನೂ ಕಸ್ತೂರಿ ನಿವಾಸ ಸಿನಿಮಾದಲ್ಲಿ ರಚಿತಾ ಜೊತೆಗೆ ನಟ ಸ್ಕಂದ ನಾಯಕರಾಗಿ ಅಭಿನಯಿಸಲಿದ್ದಾರೆ.. ಜೊತೆಗೆ ಬಿಗ್ ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.. ಅಂದಹಾಗೆ ಈ ರಚಿತಾ ಅವರ ಕಸ್ತೂರಿ ನಿವಾಸ ಸಿನಿಮಾ ಲಾಂಚ್ ಕಾರ್ಯಕ್ರಮಕ್ಕೆ ನಟ ರಿಷಿ ಅವರು ಅತಿಥಿಯಾಗಿ ಆಗಮಿಸಿದ್ರು.. ಟೈಟಲ್ ಬಗ್ಗೆ ಮಾತನಾಡಿ ಬಹಳ ಖುಷಿಯಾಗ್ತಿದೆ, ಕಸ್ತೂರಿ ನಿವಾಸ ಕೇವಲ ಒಂದು ಟೈಟಲ್ ಮಾತ್ರವಲ್ಲ, ಒಂದು ಎಮೋಶನ್ ಅಂತ ಹೇಳಿದ್ರು.. ಈಗ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನ ನಿರ್ಮಾಪಕರು ಬರ್ತಿದ್ದಾರೆ.. ಹೊಸ ನಿರ್ಮಾಪಕರು ಬರ್ತಿದ್ದಾರೆ ಅಂದ್ರೆ ಎಲ್ರಿಗೂ ಒಳ್ಳೆಯದಾಗುತ್ತೆ ಅಂದ್ರು.. ದಿನೇಶ್ ಬಾಬು ಅವರಂತಹ ಅದ್ಭುತ ನಿರ್ದೇಶಕರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರ್ತಿದೆ.. ರಚಿತಾ ರಾಮ್ ಅದ್ಭುತ ನಟಿ.. ಅವರೂ ಈ ಚಿತ್ರದಲ್ಲಿ ನಟಿಸ್ತಿದ್ದಾರೆ.. ಇಡೀ ಸಿನಿಮಾ ಬಗ್ಗೆ ಬಹಳ ಖುಷಿಯಾಗ್ತಿದೆ ಅಂತ ಹೇಳಿ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ರು..
\
ಇನ್ನೂ ಕಸ್ತೂರಿ ನಿವಾಸ ಚಿತ್ರವನ್ನ ರವೀಶ್ ಆರ್.ಸಿ ಹಾಗೂ ರುಬಿನ್ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.. ಇಂದು ಚಿತ್ರದ ಮುಹೂರ್ತ ನೆರವೇರಿಸಿರುವ ಚಿತ್ರತಂಡ ಸೆಪ್ಟೆಂಬರ್ 25 ರಿಂದ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿದ್ಯಂತೆ.. ಒಟ್ಟಾರೆ ನಟಿ ರಚಿತಾ ರಾಮ್ ಅವರ ಹೊಸ ಸಿನಿಮಾ ಲಾಂಚ್ ಆಗಿರೋದು ಅವರ ಅಭಿಮಾನಿಗಳಿಗೆ ಬಹಳ ಸಂತಸ ತಂದಿದೆ..
ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ