ಪ್ರಸಿದ್ಧ ಟೆಕ್ ಕಂಪನಿ ‘ನಥಿಂಗ್’ ಭಾರತದಲ್ಲಿ ತನ್ನ ಹೊಸ ಬಜೆಟ್ ಸ್ಮಾರ್ಟ್ಫೋನ್ ನಥಿಂಗ್ ಫೋನ್ 3a ಲೈಟ್ ಅನ್ನು ಬಿಡುಗಡೆ ಮಾಡಿದೆ. ಕಾರ್ಲ್ ಪೀ ನೇತೃತ್ವದ ಕಂಪನಿಯಿಂದ ಬಂದಿರುವ ಇದು 3a ಸರಣಿಗೆ ಇತ್ತೀಚಿನ ಸೇರ್ಪಡೆ. ಕಡಿಮೆ ಬೆಲೆಯಲ್ಲಿಯೇ ಪ್ರೀಮಿಯಂ ಲುಕ್ ಹಾಗೂ ದಕ್ಷತೆಯ ಸಂಯೋಜನೆಯನ್ನು ತೆಗೆದುಕೊಂಡು ಬರುತ್ತಿರುವ ಈ ಹ್ಯಾಂಡ್ಸೆಟ್ ಈಗಾಗಲೇ ಟೆಕ್ ಪ್ರಿಯರ ಗಮನ ಸೆಳೆದಿದೆ.
ಭಾರತದಲ್ಲಿ ನಥಿಂಗ್ ಫೋನ್ 3a ಲೈಟ್ ಬೆಲೆ 20,999 ರೂ.ಗಳಿಂದ ಪ್ರಾರಂಭವಾಗುತ್ತದೆ. 8GB RAM + 128GB ಸ್ಟೋರೇಜ್ ಇರುವ ಬೇಸ್ ಮಾದರಿ ಈ ದರದಲ್ಲಿ ಲಭ್ಯ, ಮತ್ತು 256GB ಸ್ಟೋರೇಜ್ ವೇರಿಯಂಟ್ಗೆ 22,999 ರೂ. ನಿಗದಿ ಮಾಡಲಾಗಿದೆ. ತನ್ನ ಸೆಗ್ಮೆಂಟ್ನಲ್ಲಿ ಸ್ಪರ್ಧಾತ್ಮಕ ಬೆಲೆ ಬಾಳುವ ಈ ಸ್ಮಾರ್ಟ್ಫೋನ್, ಉತ್ತಮ ಫೀಚರ್ಸ್ ಹುಡುಕುತ್ತಿರುವ ಬಳಕೆದಾರರಿಗೆ ಆಕರ್ಷಕ ಆಯ್ಕೆ ಆಗಿದೆ.
ಫೀಚರ್ಸ್ ಕಡೆ ನೋಡಿದರೆ, 6.77-ಇಂಚಿನ ಫುಲ್ HD+ AMOLED ಡಿಸ್ಪ್ಲೇ ಈ ಫೋನಿನ ಪ್ರಮುಖ ಹೈಲೈಟ್. ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ ಚಿಪ್ಸೆಟ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತಿದ್ದು, 8GB RAM ಮತ್ತು 256GB ವರೆಗಿನ ಸ್ಟೋರೇಜ್ ಜೊತೆ ಸುಗಮ ಮಲ್ಟಿಟಾಸ್ಕಿಂಗ್ ಹಾಗೂ ಲ್ಯಾಗ್-ಫ್ರೀ ಅನುಭವ ನೀಡುತ್ತದೆ. ಹಿಂಭಾಗದಲ್ಲಿ OIS + EIS ಒಳಗೊಂಡ 50MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಮತ್ತು ಮೂರನೇ ಸಹಾಯಕ ಸೆನ್ಸರ್ ಇದ್ದು, ಸೆಲ್ಫಿಗಾಗಿ 16MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ.
ಸೆಕ್ಯುರಿಟಿ, ಕನೆಕ್ಟಿವಿಟಿ ಮತ್ತು ಬ್ಯಾಟರಿ ವಿಚಾರದಲ್ಲೂ ನಥಿಂಗ್ ಕಂಪನಿ ಯಾವುದೇ ಬ್ಯಾಡ್ ನೇಮ್ ಮಾಡಿಲ್ಲ. Wi-Fi 6, Bluetooth 5.3, GPS/GLONASS ಸೇರಿದಂತೆ ಅನೇಕ ಉಪಗ್ರಹ ಸಂಪರ್ಕಗಳು ಇದರಲ್ಲಿ ಸಿಕ್ಕುತ್ತವೆ. 5,000mAh ಬ್ಯಾಟರಿಯೊಂದಿಗೆ 33W ಫಾಸ್ಟ್ ಚಾರ್ಜಿಂಗ್ ಹಾಗೂ 5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಇದೆ. ಒಟ್ಟಾರೆ, ಬಜೆಟ್ ಸೆಗ್ಮೆಂಟ್ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ಮತ್ತು ಸ್ಟೈಲಿಶ್ ಲುಕ್ ಹುಡುಕುವವರಿಗೆ ಇದು ಪರ್ಫೆಕ್ಟ್ ಆಯ್ಕೆ.
ವರದಿ : ಗಾಯತ್ರಿ ಗುಬ್ಬಿ




