ಒನ್ ಮ್ಯಾನ್ ಆರ್ಮಿ ಗಿಲ್ಲ: ಮಾಜಿ ಸ್ಪರ್ಧಿಗಳು v/s ಗಿಲ್ಲಿ

ಬಿಗ್ ಬಾಸ್ ಮನೆಗೆ ಮಾಜಿ ಸ್ಪರ್ದಿಗಳು ಬಂದ್ಮೇಲೆ ಕಂಪ್ಲೀಟ್ ಎಪಿಸೋಡ್ಸ್ ಗಿಲ್ಲಿ ವರ್ಸಸ್ ಮಾಜಿ ಸ್ಪರ್ದಿಗಳು ಅನ್ನೋ ಹಾಗಾಗಿದೆ, ಗಿಲ್ಲಿಯನ್ನ ಅದೆಷ್ಟು ಕುಗ್ಗಿಸೋಕೆ ಸಾಧ್ಯವೋ ಅಷ್ಟೂ ಪ್ರಯತ್ನವನ್ನ ಮಾಜಿ ಸ್ಪರ್ದಿಗಳು ಮಾಡ್ತಿದ್ದಾರೆ, ಆದ್ರೆ ಗಿಲ್ಲಿ ಮಾತ್ರ ಅವ್ರನ್ನ ತಮ್ಮದೇ ರೀತಿಯಲ್ಲಿ ಎದುರಿಸುತ್ತಿದ್ದಾರೆ, ಯಾರ್ ಎಷ್ಟೇ ಕುಗ್ಗಿಸೋಕೆ ಪ್ರಯತ್ನ ಮಾಡಿದ್ರೂ ಗಿಲ್ಲಿ ಮಾತ್ರ ಕುಗ್ಗುತ್ತಿಲ್ಲ, ಆದ್ರೆ ಬಿಗ್ ಬಾಸ್ ನೋಡ್ತಾ ಇರೋ ಜನಕ್ಕೆ ಮಾತ್ರ ಯಾಕಪ್ಪ ಇವ್ರೆಲ್ಲ ಬಂದ್ರು ಅನ್ನೋ ಹಾಗಾಗಿದೆ….

ಅಥಿತಿಯಾಗಿ ಬಂದಂತ ಸ್ಪರ್ದಿಗಳು, ಅದ್ರಲ್ಲೂ ರಜತ್ ಹಾಗು ಉಗ್ರಂ ಮಂಜು ತಾವು ಯುದ್ಧಕ್ಕೆ ಬಂದಿದ್ದೀವಿ ಅನ್ನೋ ಫೀಲಿಂಗ್ ಅಲ್ಲಿ ಇದ್ದಾರೆ, ಅವರ ಉದ್ದೇಶ ಏನು ಅನ್ನೋದೇ ಗೊತ್ತಾಗ್ತಿಲ್ಲ , ಅಥಿತಿಯಾಗಿ ಯಾರೋ ಬಂದ್ರು ಅಂದಾಗ ಅಲ್ಲಿರೋವರಲ್ಲಿ ಹೊಸ ಹುರುಪು ಬರೆಬೇಕಿತ್ತು ಆದ್ರೆ ಅಲ್ಲಿರೋ ಸ್ಪರ್ದಿಗಳಿಗೆ ಇವ್ರು ಯಾಕಪ್ಪಾ ಬಂದ್ರು, ಅದ್ಯಾವಾಗ ತೋಳುಗ್ತಾರೋ ಅನ್ನೋ ಹಾಗಾಗಿದೆ, ಅದ್ರಲ್ಲೂ ಗಿಲ್ಲಿ ಅಭಿಮಾನಿಗಳು ಮಂಜು ಹಾಗು ರಜತ್ ವಿರುಧ್ಧ ದಿನೇ ದಿನೇ ಕೆಂಡ ಕಾರ್ತಿದ್ದಾರೆ….

ಗಿಲ್ಲಿ ಗೆದ್ದೇ ಗೆಲ್ತಾನೆ ಅಂತ ಇದಾಗಲೇ ಕರುನಾಡ ಜನತೆ ಫಿಕ್ಸ್ ಆಗಿದ್ದಾರೆ , ಇದೆಲ್ಲವನ್ನ ತಿಳ್ಕೊಂಡು ಮನೆ ಒಳಗೆ ಹೋಗಿರೋ ಮಾಜಿ ಸ್ಪರ್ದಿಗಳು ಹೇಗಾದ್ರು ಮಾಡಿ ಇವನನ್ನ ಕುಗ್ಗಿಸಬೇಕು, ನಮಗೆ ಸಿಗದ ಗೆಲುವು ಇವ್ನಿಗೆ ಸಿಗೋಕೆ ಬಿಡಬಾರ್ದು ಅನ್ನೋ ಜಿದ್ದನ್ನ ತುಂಬಿಕೊಂಡಿರೋ ಹಾಗೆ ಕಾಣಿಸ್ತಿದೆ , ಆದ್ರೆ ಗಿಲ್ಲಿ ಮಾತ್ರ ಅದೆಷ್ಟೇ ತನ್ನನ್ನ ಕುಗ್ಗಿಸೋ ಪ್ರಾಯ್ತ್ನಗಳು ನಡೆದ್ರೂ ಗಿಲ್ಲಿ ಮಾತ್ರ ಒನ್ ಮ್ಯಾನ್ ಆರ್ಮಿ ಅನ್ನೋ ಹಾಗೆ ಅವ್ರ ವಿರುದ್ಧ ಹೋರಾಡಿ ಮತ್ತಷ್ಟು ಜನತೆಯ ಮನಸ್ಸನ್ನ ಗೆಲ್ಲುತ್ತಿದ್ದಾರೆ., ರಜತ್, ಮಂಜು ಅಂತ ಹತ್ತು ಜನ ಬಂದ್ರು ಗೆಲ್ಲೊ ತಾಕತ್ತು ಗಿಲ್ಲಿಗಿದೆ ಅನ್ನೋದನ್ನ ಪ್ರೂವ್ ಮಾಡ್ತಿದ್ದಾರೆ …

ವರದಿ : ಗಾಯತ್ರಿ ಗುಬ್ಬಿ

About The Author