Friday, November 28, 2025

Latest Posts

ದಲಿತ ಮುಖ್ಯಮಂತ್ರಿಯ ಸಮಯ ಬಂದಿದೆ: ಸಂಜಯ್ ಕುಮಾರ್ ಶ್ರೀ ಒತ್ತಾಯ!

- Advertisement -

ಕರ್ನಾಟಕದಲ್ಲಿ ದಲಿತರನ್ನ ಸಿಎಂ ಮಾಡ್ಲಿ ಅಂತ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಿಡಗಲ್ ಸಂಸ್ಥಾನ ಪೀಠದ ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಮಾತನಾದ್ದಾರೆ. ರಾಜ್ಯದಲ್ಲಿ ದಲಿತ ಸಮುದಾಯದಿಂದಲೇ ಮುಖ್ಯಮಂತ್ರಿ ಆಗಬೇಕೆಂದು ಒತ್ತಾಯಿಸಿದರು.

ಮಾಜಿ ಸಹಕಾರ ಸಚಿವ ಕೆ.ಎನ್. ರಾಜಣ್ಣರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ‘ಅವರೇ ಸಿಎಂ ಆಗಬೇಕು’ ಎಂದು ನಾನು ಹೇಳಿಲ್ಲ. ಆದರೆ ದಲಿತ ಸಮುದಾಯಕ್ಕೆ ಅವಕಾಶ ನೀಡುವುದು ಅಗತ್ಯ ಎಂದು ಸ್ವಾಮೀಜಿ ಹೇಳಿದರು.

ದೇವರಾಜ ಅರಸು ಅವರ ಕಾಲದಲ್ಲೇ ದಲಿತ ಸಿಎಂ ಆಗಬೇಕಿತ್ತು, ಆದರೆ ಆಗ ಸಾಧ್ಯವಾಗಲಿಲ್ಲ. ಜನರ ಪರ ಕೆಲಸ ಮಾಡಿದ ರಾಜಣ್ಣ ಅವರ ಸೇವೆಯನ್ನು ಹೈಕಮಾಂಡ್ ಗುರುತಿಸಿ ಸಚಿವ ಸ್ಥಾನ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss