ಇದೇ ಡಿಸೇಂಬರ್ ೧೨ಕ್ಕೆ ದರ್ಶನ್ ಅಭಿಮಾನಿಗಳ ಬಹು ನಿರೀಕ್ಷೆಯ ಸಿನಿಮಾ ” ದಿ ಡೆವಿಲ್ ” ಬಿಡುಗಡೆಯಾಗ್ತಿದೆ, ಈ ಹಿನ್ನೆಲೆ , ಡಿ.12ಕ್ಕೆ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ದರ್ಶನ್ ಫ್ಯಾನ್ಸ್ಗಾಗಿ ವಿಶೇಷ ಪಂಕ್ತಿ ಊಟದ ವ್ಯವಸ್ಥೆ ಮಾಡಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಡೆವಿಲ್ ಜಾತ್ರೆಗೆ ಅಭಿಮಾನಿಗಳು ಭರ್ಜರಿಯಾಗಿ ತಯಾರಾಗಿದ್ದಾರೆ. ದರ್ಶನ್ ಅಭಿನಯದ ‘ದಿ ಡೆವಿಲ್’ ಕುರಿತಾಗಿ ಈಗಾಗಲೇ ಭಾರೀ ಕ್ರೇಜ್ ಮತ್ತು ನಿರೀಕ್ಷೆ ನಿರ್ಮಾಣವಾಗಿದೆ. ಅಭಿಮಾನಿಗಳ ಭಕ್ತಿ, ಹುಮ್ಮಸ್ಸು, ಉತ್ಸಾಹ ಎಲ್ಲವೂ ಸಿನಿಮಾ ಬಿಡುಗಡೆಯ ಮುನ್ನವೇ ಸದ್ದು ಮಾಡುತ್ತಿದೆ.
ನಟ ದರ್ಶನ್ ತೂಗುದೀಪ ಅಭಿನಯದ ‘ದಿ ಡೆವಿಲ್’ ಗೆಲುವಿಗಾಗಿ ಅಭಿಮಾನಿಗಳು ನಾಡದೇವತೆ ಮೊರೆಹೋಗಿರುವುದು ವಿಶೇಷ. ಡೀ.11ರಂದು ರಾಜ್ಯಾದ್ಯಂತ ರಿಲೀಸ್ ಆಗಲಿರುವ ಈ ಚಿತ್ರದ ಪ್ರಚಾರಕಾರ್ಯಕ್ಕೆ ದರ್ಶನ್ ಸ್ವತಃ ಹಾಜರಾಗಲು ಸಾಧ್ಯವಾಗುತ್ತಿಲ್ಲ, ಏಕೆಂದರೆ ಅವರು ಸದ್ಯ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಕಾರಣಕ್ಕೆ, ಚಿತ್ರದ ಸಂಪೂರ್ಣ ಪ್ರಚಾರ ಜವಾಬ್ದಾರಿಯನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೊತ್ತುಕೊಂಡಿದ್ದಾರೆ.
ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾವನ್ನು ಮಾಧ್ಯಮಗಳಿಂದ ದೂರವಿಟ್ಟು, ಅಭಿಮಾನಿಗಳ ಮಾಧ್ಯಮದ ಮೂಲಕವೇ ಪ್ರಚಾರ ಮಾಡಲಾಗುತ್ತಿದೆ. ಹಿಂದೆಯೂ ಇದೇ ತಂತ್ರವನ್ನು ಕ್ರಾಂತಿ ಸಿನಿಮಾಗೆ ಬಳಸಲಾಗಿತ್ತು. ಅಂದು ನಟ ದರ್ಶನ್ ಕೂಡ ಪ್ರಚಾರದಲ್ಲಿ ಸಕ್ರಿಯರಾಗಿದ್ದರು. ಆದರೆ ಈ ಬಾರಿ ಅಭಿಮಾನಿಗಳು ಮತ್ತು ಕುಟುಂಬವೇ ಪ್ರಮುಖ ಜವಾಬ್ದಾರಿ ಹೊತ್ತುಕೊಂಡಿದೆ. ಇತ್ತೀಚೆಗೆ ವಿಜಯಲಕ್ಷ್ಮೀ, ದಿನಕರ್ ತೂಗುದೀಪ, ನಿರ್ದೇಶಕ ಪ್ರಕಾಶ್ ವೀರ್ ಸೇರಿದಂತೆ ಆಪ್ತರು ಸಭೆ ನಡೆಸಿ ಅಭಿಮಾನಿ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದರು.
ಡಿಸೆಂಬರ್ 11ರಂದು ತೆರೆಕಾಣಲಿರುವ ಚಿತ್ರಕ್ಕಾಗಿ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಭವ್ಯ ಕಾರ್ಯಕ್ರಮಗಳನ್ನೂ ರೂಪಿಸಲಾಗಿದೆ. ಡಿ.10ರಂದು ಚಾಮುಂಡೇಶ್ವರಿ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಡಿ.11ರಂದು ಐದು ಶೋಗಳ ಅಭಿಮಾನಿಗಳಿಗಾಗಿ ಅನ್ನದಾನ ಕಾರ್ಯಕ್ರಮ ಇದೆ. ಈ ಎಲ್ಲ ವ್ಯವಸ್ಥೆಗಳು ಡೆವಿಲ್ ಸಿನಿಮಾ ಬಿಡುಗಡೆಯನ್ನು ಒಂದು ಉತ್ಸವದಂತೆ ಮಾಡಲು ಸಜ್ಜಾಗಿವೆ.
ಸಿ.12ರಂದು ಭವ್ಯ ಪಂಕ್ತಿಊಟದೊಂದಿಗೆ ಮೂರು ದಿನಗಳ ಡೆವಿಲ್ ಜಾತ್ರೆ ಆಚರಿಸಲು ಅಭಿಮಾನಿಗಳು ಸಿದ್ಧರಾಗಿದ್ದಾರೆ. ದರ್ಶನ್ ಗೈರುಹಾಜರಿದ್ದರೂ, ಸಿನಿಮಾ ಬಗ್ಗೆ ಇರುವ ಅಪಾರ ಕ್ರೇಜ್ ಮತ್ತು ಬಿರುದಿನ ನಿರೀಕ್ಷೆ ಕಡಿಮೆಯಾಗಿಲ್ಲ. ಬಿಡುಗಡೆಯವರೆಗೆ ಇನ್ನೂ ಸಮಯವಿದ್ದು, ನಡುವಿನ ದಿನಗಳಲ್ಲಿ ಏನು ಬದಲಾವಣೆಗಳು ಆಗುತ್ತವೆ ಎಂಬುದು ಕುತೂಹಲ. ಇಂತಿ, ಡೆವಿಲ್ ಬಿಡುಗಡೆಯ ಮುನ್ನ ಅಭಿಮಾನಿಗಳ ಸಂಭ್ರಮ, ಸಜ್ಜು, ಮಾತುಕತೆಗಳು ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿವೆ…
ವರದಿ : ಗಾಯತ್ರಿ ಗುಬ್ಬಿ

