ಕನ್ನಡ ಟೆಲಿವಿಷನ್ ಕ್ಷೇತ್ರದಲ್ಲಿ ಜಿಆರ್‌ಪಿ ಅಂದ್ರೆ “ಗ್ರಾಸ್ ರೇಟಿಂಗ್ ಪಾಯಿಂಟ್ ” ಲೆಕ್ಕಾಚಾರದಲ್ಲಿ ಮತ್ತೊಮ್ಮೆ ಕಲರ್ಸ್ ಕನ್ನಡ ವಾಹಿನಿ ನಂಬರ್ 1 ಸ್ಥಾನಕ್ಕೇರಿದೆ.. SD + HD ವರ್ಶನ್‌ಗಳ ಒಟ್ಟಾರೆ ಲೆಕ್ಕದಲ್ಲಿ 46ನೇ ವಾರದಲ್ಲಿ ಕಲರ್ಸ್ ಕನ್ನಡ 672 ಜಿಆರ್‌ಪಿ ದಾಖಲಿಸಿ ಟಾಪ್ ಸ್ಥಾನ ಪಡೆದಿದೆ. ಜೀ ಕನ್ನಡ ವಾಹಿನಿ 655 ಜಿಆರ್‌ಪಿಯೊಂದಿಗೆ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಈ ಸಾರಿ ಕಲರ್ಸ್ ಕನ್ನಡ ಟಾಪ್‌ಗೆ ಏರಲು ಪ್ರಮುಖ ಕಾರಣ ‘ಬಿಗ್ ಬಾಸ್ ಕನ್ನಡ 12’. ಕಿಚ್ಚ ಸುದೀಪ್ ಹೋಸ್ಟ್ ಆಗಿರುವ ಈ ಶೋ ಆರಂಭವಾದ ಕ್ಷಣದಿಂದಲೇ ಟಿವಿಆರ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ವಾರದ ರಿಯಾಲಿಟಿ ಎಪಿಸೋಡ್‌ಗಳು, ವಾರಾಂತ್ಯದ ಸುದೀಪ್ ವಿಶೇಷ ಮತ್ತು ಸೂಪರ್ ಸಂಡೆ , all together ಚಾನಲ್‌ಗೆ ಭಾರೀ ಪುಷ್ ನೀಡಿ ಜಿಆರ್‌ಪಿಯನ್ನ ಬಲಪಡಿಸಿವೆ.
‘ಬಿಗ್ ಬಾಸ್’ ವಾರದ ರಿಯಾಲಿಟಿ ಸಂಚಿಕೆಗಳು ಅರ್ಬನ್ + ರೂರಲ್‌ನಲ್ಲಿ 7.8, ಅರ್ಬನ್‌ನಲ್ಲಿ 9.1 ಟಿವಿಆರ್ ದಾಖಲಿಸಿವೆ. ‘ವಾರದ ಕಥೆ ಕಿಚ್ಚನ ಜೊತೆ’ ಎಪಿಸೋಡ್ ಅರ್ಬನ್ + ರೂರಲ್ 9.5, ಅರ್ಬನ್ 10.1 ಟಿವಿಆರ್ ಅಂದ್ರೆ ಟೆಲಿವಿಷನ್ ವೀವರ್ಶಿಪ್ ರೇಟಿಂಗ್” ಅನ್ನ ಪಡೆದರೆ, ‘ಸೂಪರ್ ಸಂಡೆ ವಿತ್ ಸುದೀಪ್’ ಸಂಚಿಕೆ 10.1 ಮತ್ತು 11.7 ಟಿವಿಆರ್ ದಾಖಲಿಸಿದೆ. 46ನೇ ವಾರದ ಬಾರ್ಕ್ ರಿಪೋರ್ಟ್ ಪ್ರಕಾರ ವಾರಾಂತ್ಯದ ಸುದೀಪ್ ಎಪಿಸೋಡ್‌ಗಳು 12.6 ಟಿವಿಆರ್‌ನ ಹೊಸ ರೆಕಾರ್ಡ್ ಸೃಷ್ಟಿಸಿವೆ.
ಮತ್ತೊಂದು ವಿಶೇಷ ಅಂಶ ಅಂದ್ರೆ , ರೂರಲ್ ಪ್ರದೇಶದಲ್ಲೂ ‘ಬಿಗ್ ಬಾಸ್ ಕನ್ನಡ 12’ ಅದ್ಭುತ ಪ್ರದರ್ಶನ ನೀಡ್ತಿದೆ ಅನ್ನುವವಂತದ್ದು, ಶನಿವಾರದ ‘ಕಿಚ್ಚನ ಜೊತೆ’ ರೂರಲ್ ಟಿವಿಆರ್ 9.2, ಭಾನುವಾರದ ‘ಸೂಪರ್ ಸಂಡೆ’ ರೂರಲ್ ಟಿವಿಆರ್ 9.8 ದಾಖಲಾಗಿ 2+ ರೂರಲ್ ಸರಾಸರಿ 9.5ಕ್ಕೆ ತಲುಪಿದೆ. ಇದು ಕನ್ನಡ ಟೆಲಿವಿಷನ್ ರಿಯಾಲಿಟಿ ಶೋಗಳಲ್ಲಿ ಗಮನಾರ್ಹ ಸಾಧನೆ….
ಕಲರ್ಸ್ ಕನ್ನಡ ಧಾರಾವಾಹಿಗಳೂ ಉತ್ತಮ ಪ್ರದರ್ಶನ ನೀಡುತ್ತಿವೆ. ನಂದಗೋಕುಲ 6.8, ಮುದ್ದು ಸೊಸೆ ಮತ್ತು ಪ್ರೇಮಕಾವ್ಯ ತಲಾ 6.5 ಟಿವಿಆರ್ ಪಡೆದಿವೆ. ಸಂಜೆ 6.30ರ ಸ್ಲಾಟ್‌ನಲ್ಲಿ ಪ್ರಸಾರವಾಗುವ ‘ಪ್ರೇಮ ಕಾವ್ಯ’ 6.5 ಟಿವಿಆರ್‌ದೊಂದಿಗೆ ಸ್ಪಷ್ಟ ಸ್ಲಾಟ್ ಲೀಡರ್ ಆಗಿದೆ. ಭಾಗ್ಯಲಕ್ಷ್ಮೀ, ಭಾರ್ಗವಿ LLB, ಶ್ರೀ ಗಂಧದ ಗುಡಿ ಕೂಡ ಚಾನಲ್‌ನ ಒಟ್ಟಾರೆ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿವೆ.
ಇದೇ ವೇಳೆ ಜೀ ಕನ್ನಡ ವಾಹಿನಿಯೂ ತನ್ನ ಧಾರಾವಾಹಿಗಳಿಂದ ಬಲ ಪ್ರದರ್ಶನ ಮಾಡುತ್ತಿದೆ. ಅಣ್ಣಯ್ಯ ಕರ್ಣ ಮಹಾಸಂಗಮ 9.8, ಅಮೃತಧಾರೆ 9.1 ಟಿವಿಆರ್‌ನ್ನು ದಾಖಲಿಸಿದೆ. ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಗ್ರ್ಯಾಂಡ್ ಓಪನಿಂಗ್ ಅರ್ಬನ್ + ರೂರಲ್‌ನಲ್ಲಿ 9.0 ಟಿವಿಆರ್ ಪಡೆದಿದ್ದು, SD+HD 2+ ಲೆಕ್ಕಾಚಾರದಲ್ಲಿ 10 ಟಿವಿಆರ್ ತಲುಪಿ ಉತ್ತಮ ಆರಂಭ ಪಡೆದಿದೆ…
ವರದಿ : ಗಾಯತ್ರಿ ಗುಬ್ಬಿ

