Friday, November 28, 2025

Latest Posts

ಒಂದಾದ ಟಾಸ್ಕ್ ಮಾಸ್ಟರ್ಸ್: ಮತ್ತೆ ಕ್ಯಾಪ್ಟನ್ ಆದ ಧನುಷ್ ಗೌಡ !

- Advertisement -

‘ಬಿಗ್ ಬಾಸ್‌’ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ರೇಸ್‌ ಸಂಪೂರ್ಣವಾಗಿ ಎಂಟರ್ಟೈನ್ಮೆಂಟ್‌, ಟಾಸ್ಕ್‌, ಟಿಪ್ಸ್‌ ಮತ್ತು ಗೆಸ್ಟ್‌ಗಳ ಸಂಭ್ರಮದಿಂದ ಕಂಗೊಳಿಸಿತು. ಅತಿಥಿಗಳಿಂದ ಹೆಚ್ಚು ಟಿಪ್ಸ್‌ ಪಡೆಯುವ ಸ್ಪರ್ಧಿಗಳಿಗೆ ಮಾತ್ರ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಸಿಕ್ಕ ಕಾರಣ, ಸೂರಜ್‌, ಧನುಷ್‌, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್‌ ಟಾಪ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡರು. ಅಂತಿಮವಾಗಿ, ಟಾಸ್ಕ್‌ ಅನ್ನು ಗೆದ್ದು ಧನುಷ್‌ ಎರಡನೇ ಬಾರಿಗೆ ಕ್ಯಾಪ್ಟನ್‌ ಪಟ್ಟವನ್ನ ಅಲಂಕರಿಸಿದರು…

ಈ ವಾರದ ಟಾಸ್ಕ್‌ ಕಂಟೆಂಟ್‌ ತುಂಬಾ ಡಿಫರೆಂಟ್‌. ಉಗ್ರಂ ಮಂಜು ಅವರ ಬ್ಯಾಚುಲರೇಟ್‌ ಪಾರ್ಟಿಯನ್ನು ‘ಬಿಬಿ ಪ್ಯಾಲೇಸ್‌’ನಲ್ಲಿ ಗ್ರ್ಯಾಂಡ್ ಆಗಿ ಅರೇಂಜ್ ಮಾಡಲಾಗಿತ್ತು. ಜೊತೆಗೆ ತ್ರಿವಿಕ್ರಮ್‌, ಮೋಕ್ಷಿತಾ ಪೈ, ರಜತ್ ಹಾಗೂ ಚೈತ್ರಾ ಕುಂದಾಪುರ ಗ್ಲಾಮರ್ ಎಂಟ್ರಿ ಕೊಟ್ಟರು. ಅತಿಥಿಗಳಿಗೆ ಆತಿಥ್ಯ ಕೊಟ್ಟು, ಅವರಿಂದ ಟಿಪ್ಸ್‌ ಗಳಿಸುವ ಸ್ಪರ್ಧಿಗಳಿಗೇ ಕ್ಯಾಪ್ಟನ್ಸಿ ಚಾನ್ಸ್‌ ಸಿಗುತ್ತದೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದ ಕ್ಷಣದಿಂದಲೇ ಮನೆಯಲ್ಲಿ ಹೊಸ ಎನರ್ಜಿ ಶುರುವಾಯಿತು.

ಕ್ಯಾಪ್ಟನ್ಸಿ ಟಾಸ್ಕ್‌ನ ಎರಡನೇ ಹಂತದಲ್ಲಿ ಐದು ಸ್ಪರ್ಧಿಗಳೂ ತಮ್ಮ ಪರವಾಗಿ ಆಡಲು ಐದು ಗೆಸ್ಟ್‌ಗಳನ್ನು ಮನವೊಲಿಸಲು ಬಿಗ್ ಬಾಸ್ ಚಾಲೆಂಜ್ ಹಾಕಿದರು. ಧನುಷ್‌ ಜೊತೆಗೆ ತ್ರಿವಿಕ್ರಮ್‌, ಅಭಿಷೇಕ್‌ ಜೊತೆ ಚೈತ್ರಾ ಕುಂದಾಪುರ, ರಘು ಜೊತೆ ಮೋಕ್ಷಿತಾ ಪೈ, ಸ್ಪಂದನಾ ಜೊತೆಗೆ ರಜತ್‌, ಸೂರಜ್‌ ಜೊತೆ ಉಗ್ರಂ ಮಂಜು ಟಾಸ್ಕ್‌ಗೆ ಕೈ ಜೋಡಿಸಿದರು. ಪ್ರತಿಯೊಬ್ಬರೂ ತಮ್ಮ ಸ್ಪರ್ಧಿಯನ್ನು ಗೆಲ್ಲಿಸಲು ಜೋರಾಗಿ ಸಪೋರ್ಟ್ ನೀಡಿದರು.

ಕ್ಯಾಪ್ಟನ್ಸಿ ಫೈನಲ್ ಟಾಸ್ಕ್‌ ಬ್ಯಾಲೆನ್ಸಿಂಗ್‌. ಜೋರಾಗಿ ಹೋರಾಟ ನಡೆದ ಈ ಟಾಸ್ಕ್‌ನಲ್ಲಿ ಸೂರಜ್ ಮತ್ತೆ ಬ್ಯಾಲೆನ್ಸ್ ಕಳೆದುಕೊಂಡರು, ರಘು ಎಣಿಕೆಯಲ್ಲಿ ತಪ್ಪು ಮಾಡಿದರು. ಆದರೆ ಧನುಷ್ ಮಾತ್ರ ಸಂಪೂರ್ಣ ಫೋಕಸ್ ಕಾಪಾಡಿಕೊಂಡು ಬ್ಯಾಲೆನ್ಸ್ ಅನ್ನು ಪರಿಪೂರ್ಣವಾಗಿ ಮಾಡಿದರು. ಅವರ ಸ್ಟೇಬಿಲಿಟಿ, ಕಾನ್ಸಿಸ್ಟೆನ್ಸಿ ಮತ್ತೊಮ್ಮೆ ಹೈಲೈಟ್ ಆಗಿ, ಕ್ಯಾಪ್ಟನ್ ಪಟ್ಟ ಅವರ ಕೈಗೆ ಬಿತ್ತು…

ವೀಕ್ಷಕರ ಪ್ರತಿಕ್ರಿಯೆ ಕೂಡ ಸಖತ್ ಪಾಸಿಟಿವ್‌. “ಉಗ್ರಂ ಮಂಜು ಸೂಪರ್ ಫಾಸ್ಟ್”, “ಧನುಷ್ ಮತ್ತೆ ಟಾಸ್ಕ್ ಮಾಸ್ಟರ್ ಎನ್ನುವುದನ್ನು ತೋರಿಸಿದ್ದಾರೆ”, “ಇದು ಕಠಿಣ ಟಾಸ್ಕ್, ಧನುಷ್ ಚೆನ್ನಾಗಿ ಮಾಡಿದರು” ಎಂಬ ಕಾಮೆಂಟ್‌ಗಳು ಟ್ರೆಂಡ್ ಆಗುತ್ತಿವೆ. ಸೀಸನ್ 11ರ ಟಾಸ್ಕ್ ಮಾಸ್ಟರ್ ತ್ರಿವಿಕ್ರಮ್ ಈ ಬಾರಿ ಧನುಷ್‌ಗೆ ಭರ್ಜರಿ ಸಪೋರ್ಟ್ ನೀಡಿದುದು ಕೂಡ ಗಮನ ಸೆಳೆದಿದೆ….

ವರದಿ : ಗಾಯತ್ರಿ ಗುಬ್ಬಿ

- Advertisement -

Latest Posts

Don't Miss