‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಈ ವಾರ ಗೆಸ್ಟ್‌ಗಳ ಎಂಟ್ರಿ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಉಗ್ರಂ ಮಂಜು, ಕಂಟೆಸ್ಟೆಂಟ್ ಗಿಲ್ಲಿಯ ಗಡ್ಡವನ್ನ ಬೋಳಿಸಿ ಹೊಸ ಲುಕ್ ಕೊಟ್ಟ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. “ಅತಿಥಿಗಳು ಹೀಗೆ ಮಾಡೋದು ಸರಿಯೇ?” ಎಂದು ಪ್ರೇಕ್ಷಕರು ಪ್ರಶ್ನೆ ಎತ್ತಿದ್ದಾರೆ.
ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಪ್ರವೇಶಿಸಿದ ದಿನದಿಂದಲೇ ಮಂಜು ಮತ್ತು ರಜತ್ ಗಿಲ್ಲಿಯನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋ ಅಭಿಪ್ರಾಯ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ರಜತ್ ಗಿಲ್ಲಿಗೆ ಶೂ ಬಿಚ್ಚಿ ನಡೆಯಲು ಹೇಳಿದ್ದು, ಬಾಯಿಗೆ ಆಲೂಗಡ್ಡೆ ಹಾಕಿ ತಮಾಷೆ ಮಾಡಿಸಿದ್ದು, ಇವೆಲ್ಲಾ ಕ್ಲಿಪ್‌ಗಳು ವೈರಲ್ ಆಗುತ್ತಿವೆ. ಇದೀಗ ಅದಕ್ಕೆ ಗಡ್ಡ ಬೋಳಿಸಿದ ಸನ್ನಿವೇಶ ಕೂಡ ಸೇರ್ಪಡೆಯಾಗಿದೆ.
ಗಿಲ್ಲಿ ಎಲ್ಲವನ್ನೂ ಶಾಂತವಾಗಿಯೇ ಫೇಸ್ ಮಾಡ್ತಿದ್ದರೂ , ಗೆಸ್ಟ್‌ಗಳ ಕೆಣಕಾಟ ಮಾತ್ರ ಕಡಿಮೆಯಾಗಿಲ್ಲ. “ಇವರು ಅತಿಥಿಗಳಾ? ಅಥವಾ ಮನೆಯ ಮಾಲೀಕರಾ?” ಎಂಬ ಪ್ರಶ್ನೆಗಳು ಈಗ ವೀಕ್ಷಕರಿಂದ ಎದ್ದಿವೆ. ಗಡ್ಡ ಬೋಳಿಸಿದಾಗಲೂ ಗಿಲ್ಲಿ ಒಂದು ಮಾತು ಕೂಡ ಆಡದೆ ಸ್ಪೋರ್ಟೀವ್ ಆಗಿರೋದು ಜನರನ್ನು ಇನ್ನಷ್ಟು ಸೆಳೆಯುತ್ತಿದೆ….
ಗಿಲ್ಲಿ ನೀರಿನಂತೆ ಸೈಲೆಂಟ್‌ನೆಸ್ ಮೆಂಟೈನ್ ಮಾಡ್ತಿರುವುದು, ಅವರ ಪರ್ಸನಾಲಿಟಿಯ ಭಾಗ ಅಂತ ಅಭಿಮಾನಿಗಳು ಹೇಳ್ತಿದ್ದಾರೆ. “ಕನ್ನಡಿಯಲ್ಲಿ ತಮನ್ನೇ ನೋಡುವವರು ಸೌಂದರ್ಯ ಹುಡುಕುತ್ತಾರೆ, ಜಗತ್ತನ್ನೇ ನೋಡುವವರು ಟ್ಯಾಲೆಂಟ್ ತೋರಿಸುತ್ತಾರೆ” ಎಂದು ಕಾಮೆಂಟ್‌ಗಳು ಹರಿದು ಬರುತ್ತಿವೆ. ಅತಿಥಿಗಳು ಗಡ್ಡ ಟ್ರಿಮ್ ಮಾಡೋದ್ರಲ್ಲಿ ಮಜಾ ಪಡೆದರೂ, ವೀಕ್ಷಕರು ಗಿಲ್ಲಿಗೆ ಸಪೋರ್ಟ್ ನೀಡಿ ನಿಂತಿದ್ದಾರೆ.
“ಯಾವ ರೆಸಾರ್ಟ್‌ನಲ್ಲಿ ಗೆಸ್ಟ್‌ಗಳು ಸೇವಕರಿಗೆ ಗಡ್ಡ ಟ್ರಿಮ್ ಮಾಡ್ತಾರೆ ಹೇಳಿ?” ಎಂಬ ಪ್ರೇಕ್ಷಕರ ಪ್ರಶ್ನೆಗಳು ಈಗ ಬಿಗ್ ಬಾಸ್ ತಂಡಕ್ಕೂ ತಲುಪಿವೆ. “ಗಿಲ್ಲಿ ತಪ್ಪು ಮಾಡಿದ್ರೂ ತಿದ್ದಿಕೊಂಡಿದ್ದಾರೆ, ನಾವು ನಿಮ್ಮೊಂದಿಗಿದ್ದೀವಿ” ಎಂಬ ಅಭಿಮಾನಿಗಳಕೂಗು ಅವರು ಪಡೆದಿರುವ ಬೆಂಬಲದ ಪ್ರಮಾಣ ಹೇಳುತ್ತಿವೆ.ಗಿಲ್ಲಿ ಗಡ್ಡ ಟ್ರಿಮ್ ಮಾಡಿದ ಮಂಜಣ್ಣಂಗೆ ನಾನ್ ಏನು ಅಂತ ತೋರಿಸ್ತೀನಿ ಅಂತಿದ್ರಿ, ಅದು ಇದೇನಾ ಅಂತಿದ್ದಾರೆ ನೋಡುಗರು …
ವರದಿ : ಗಾಯತ್ರಿ ಗುಬ್ಬಿ

