ರಾಜ್ಯ ಕಾಂಗ್ರೆಸ್ ನಲ್ಲಿ ಪವರ್ ಶೇರಿಂಗ್ ಗದ್ದಲ ಜೋರಾಗಿದೆ. ಈ ಮಧ್ಯೆ ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬ್ರೇಕ್ಫಾಸ್ಟ್ ಮೀಟಿಂಗ್ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಇದೇ ವೇಳೆ, ಸುಮಾರು 10 ಶಾಸಕರು ರೆಸಾರ್ಟ್ನಲ್ಲಿ ಪ್ರತ್ಯೇಕ ಸಭೆ ಸೇರಿದ್ದು, ಈ ಬೆಳವಣಿಗೆಗಳು ಮುಂದಿನ ರಾಜಕೀಯ ನಡೆಗಳ ಬಗ್ಗೆ ಚರ್ಚೆಗೆ ಕಾರಣವಾಗಿವೆ. ನಿನ್ನೆ ರಾತ್ರಿ ಡಿಕೆಶಿ ಬಣದ ಶಾಸಕರು ಸಭೆ ನಡೆಸಿದ್ದಾರೆ.
ಹಾಗಾಗಿ ಶಾಸಕರ ನಡೆ ಏನಾಗ್ತಿದೆ ಎಂಬುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಸಿಎಂ, ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ಕನ್ಫರ್ಮ್ ಆಗ್ತಿದ್ದಂತೆ ಸಭೆ ಬಗ್ಗೆ ಚರ್ಚಿಸಿದ್ದಾರೆ.
ಮಾಗಡಿ ಶಾಸಕ ಬಾಲಕೃಷ್ಣ, ಕುಣಿಗಲ್ ರಂಗನಾಥ್, ನಾರಾ ಭರತ್ ರೆಡ್ಡಿ, ಮಹೇಂದ್ರ ತಮ್ಮಣ್ಣನವರ್, ಎಚ್ಡಿ ತಮ್ಮಯ್ಯ, ಅಶೋಕ್ ಮನಗೊಳಿ ಸೇರಿದಂತೆ ಸುಮಾರು ಹತ್ತು ಮಂದಿ ಶಾಸಕರು ಡಿನ್ನರ್ ಮೀಟಿಂಗ್ನಲ್ಲಿ ಭಾಗಿಯಾಗಲಿದ್ದಾರಂತೆ. ಡಿಕೆಶಿ-ಸಿಎಂ ಬ್ರೇಕ್ಫಾಸ್ಟ್ ಖಚಿತವಾಗ್ತಿದ್ದಂತೆ ರಾತ್ರಿಯೇ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ ಎನ್ನಲಾಗಿದೆ.
ವರದಿ : ಲಾವಣ್ಯ ಅನಿಗೋಳ

