ಬ್ರೇಕ್ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಕಾವೇರಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಮೊದಲು ಸಿದ್ದರಾಮಯ್ಯ ಮಾತನಾಡಿದ್ರು.
ಅನಗತ್ಯವಾಗಿ ಕೆಲವು ಗೊಂದಲ ನಿರ್ಮಾಣವಾಗಿದೆ. ನಮ್ಮ ಉದ್ದೇಶ 2028ರ ಚುನಾವಣೆ. ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಇಲ್ಲ. ಮುಂದೆಯೂ ಯಾವುದೇ ವ್ಯತ್ಯಾಸಗಳು ಇರಲ್ಲ. ನಾವಿಬ್ಬರು ಒಟ್ಟಿಗೆ ಹೋಗ್ತೀವಿ ಎಂದು ಸುದ್ದಿಗೋಷ್ಠಿಯಲ್ಲಿ ಡಿಕೆಶಿ ಎದುರು ಸಿದ್ದರಾಮಯ್ಯ ಹೇಳಿದ್ದಾರೆ.
ನಾವಿಬ್ಬರು ಹೈಕಮಾಂಡ್ ಏನ್ ಹೇಳ್ತಾರೋ ಅದನ್ನೇ ಕೇಳ್ತೀವಿ. ಸುಳ್ಳು ಅಪವಾದ ಬಿಜೆಪಿ, ಜೆಡಿಎಸ್ನವರ ಚಾಳಿ. ಅವರ ಸುಳ್ಳು ಆರೋಪಗಳನ್ನು ಸಮರ್ಥವಾಗಿ ಎದುರಿಸುತ್ತೇವೆ. ಅವರಿಬ್ಬರು ಸೇರಿದ್ರೂ 82 ಆಗಬಹುದೇ ಹೊರತು ಜಾಸ್ತಿ ಆಗಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ರು.
ನಾನು ರೀಶಫಲ್ ಮಾಡ್ತೀವಿ ಅಂತಾ ಹೇಳಿದ್ದಕ್ಕಾಗಿ ಕೆಲವು ಶಾಸಕರು ಕೇಂದ್ರಕ್ಕೆ ಹೋಗಿರಬಹುದು. ಕೆಲವರು ಬಂದು ನನ್ನ ಜೊತೆ ಮಾತನಾಡಿದ್ದಾರೆ. ಒಟ್ಟಾರೆ ನಾವು ಹೈಕಮಾಂಡ್ ನಿರ್ಧಾರ, ಸೂಚನೆಯಂತೆ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ರು.




