Thursday, December 4, 2025

Latest Posts

ಮಾಧ್ಯಮ, ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸಿದ್ರಾ ಸಿದ್ದರಾಮಯ್ಯ!?

- Advertisement -

ರಾಜ್ಯ ಕಾಂಗ್ರೆಸ್‌ನಲ್ಲಿ ದಿನಗಳಿಂದ ಜೋರಾಗಿದ್ದ ಅಧಿಕಾರ ಹಂಚಿಕೆ ಗೊಂದಲಗಳಿಗೆ ತೆರೆ ಎಳೆಯಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡೆಸಿದ ಬ್ರೇಕ್‌ಫಾಸ್ಟ್‌ ಮೀಟಿಂಗ್ ಹಾಗೂ ಜಂಟಿ ಪತ್ರಿಕಾಗೋಷ್ಠಿ ಹೊಸ ಪ್ರಶ್ನೆಗಳನ್ನು ಹುಟ್ಟಿಸಿವೆ. ಗೊಂದಲ ನಿವಾರಣೆಗಾಗಿ ಕರೆದ ಪತ್ರಿಕಾಗೋಷ್ಠಿಯಲ್ಲೇ ಇಬ್ಬರು ನಾಯಕರು ಹಲವು ಅನುಮಾನಗಳನ್ನು ಹಾಗೆಯೇ ಉಳಿಸಿ ಹೋಗಿದ್ದಾರೆ.

ಶನಿವಾರ ಬೆಳಿಗ್ಗೆ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಇಬ್ಬರು ನಾಯಕರು ಬ್ರೇಕ್‌ಫಾಸ್ಟ್‌ ಮೀಟಿಂಗ್ ನಡೆಸಿದರು. ಹೈಕಮಾಂಡ್ ಸೂಚನೆ ಮೇರೆಗೆ ನಡೆದಿದ್ದ ಈ ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿ ಮೂಲಕ ಇಬ್ಬರೂ ಒಗ್ಗಟ್ಟು ಪ್ರದರ್ಶಿಸಿದರು. ಆದರೆ ಮಾಧ್ಯಮ ಪ್ರತಿನಿಧಿಗಳ ಕುಶಲ ಪ್ರಶ್ನೆಗಳಿಗೆ ಅವರು ನೀಡಿದ ಪ್ರತಿಕ್ರಿಯೆಗಳು ಗೊಂದಲದ ಹೊಗೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಅಧಿಕಾರ ಹಂಚಿಕೆ ಗೊಂದಲ ಸೃಷ್ಟಿಯಾಗಲು ಪ್ರತಿಪಕ್ಷಗಳು ಮತ್ತು ಮಾಧ್ಯಮಗಳನ್ನ ದೂರಿದ್ದ ಸಿಎಂ ಸಿದ್ದರಾಮಯ್ಯ, ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವುದೇ ಗೊಂದಲ ಇಲ್ಲ, ಮುಂದೆಯೂ ಇರುವುದು ಇಲ್ಲ ಎಂದರು. ಆದರೆ ಅದಕ್ಕೂ ಮುನ್ನ, ಗೊಂದಲ ನಿವಾರಣೆಗೆ ಹೈಕಮಾಂಡ್ ಸೂಚನೆ ಮೇರೆಗೆ ಸಭೆ ಮಾಡಿದೆವು ಎಂದು ಹೇಳಿದ್ದು ಪ್ರಶ್ನೆಗಳು ಹೆಚ್ಚುವಂತೆ ಮಾಡಿತು.

ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಒಪ್ಪಂದ ಕುರಿತು ಡಿಕೆ ಶಿವಕುಮಾರ್ ಎಕ್ಸ್‌ನಲ್ಲಿ ಮಾಡಿದ ‘ಕೊಟ್ಟ ಮಾತು ದೊಡ್ಡ ಶಕ್ತಿ’ ಎಂಬ ಪೋಸ್ಟ್ ಮತ್ತು ನಂತರ ಸಿದ್ದರಾಮಯ್ಯ ಮಾಡಿದ ‘ಜನತೆಗೆ ಕೊಟ್ಟ ಮಾತೇ ನಮ್ಮ ಜಗತ್ತು’ ಎಂಬ ಟಾಕ್ ವಾರ್ ಇವೆರಡೂ ದೊಡ್ಡ ಚರ್ಚೆಗೆ ಕಾರಣವಾಗಿದ್ದವು.

ಈ ಕುರಿತು ಸ್ಪಷ್ಟನೆ ಕೇಳಿದಾಗ, ಇಬ್ಬರೂ ನಾಯಕರೂ ಉತ್ತರ ತಪ್ಪಿಸಿದರು.
ಸಿದ್ದು ಕೇವಲ, ನಾವು ಹೇಳಿದ್ದನ್ನು ಮೊದಲು ಕೇಳಿ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದಷ್ಟೇ ಹೇಳಿದರು. ಒಟ್ಟಾರೆಯಾಗಿ ನಾಯಕತ್ವ ಬದಲಾವಣೆಯ ರಹಸ್ಯ, ಎರಡೂವರೆ ವರ್ಷದ ಒಪ್ಪಂದ, ಎಕ್ಸ್ ವಾರ್ನಿಂಗ್ ಪೋಸ್ಟ್‌ಗಳು ಇವುಗಳ ಬಗ್ಗೆ ಸ್ಪಷ್ಟ ಉತ್ತರ ಸಿಗದ ಕಾರಣ ಅನುಮಾನಗಳು ಹಾಗೆಯೇ ಉಳಿದಿವೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss