ಸಿಎಂ, ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ಶಾಸಕ ಶಿವಗಂಗಾ ಪ್ರತಿಕ್ರಿಯಿಸಿದ್ದು, ಇದೊಂದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ನಾವೆಲ್ಲಾ ಯಾವಾಗಲೂ ಒಗ್ಗಟ್ಟಾಗಿದ್ದೇವೆ ಎಂದು, ಸಿದ್ದು-ಡಿಕೆಶಿ ಮಾತನ್ನೇ ಪುನರುಚ್ಚರಿಸಿದ್ದಾರೆ. ಅವರವರ ವೈಯಕ್ತಿಕ ಕೆಲಸಗಳ ಮೇಲೆ ದೆಹಲಿಗೆ ಹೋಗ್ತಾರೆ. ಕೆಲವರು ಮುಖ್ಯಮಂತ್ರಿಗಳ ಮನೆಗೆ ಹೋಗ್ತಾರೆ. ಇನ್ನೂ ಕೆಲವರು ಉಪಮುಖ್ಯಮಂತ್ರಿಗಳ ಮನೆಗೆ, ಮಂತ್ರಿಗಳ ಮನೆಗೆ ಹೋಗ್ತಾರೆ. ಕೆಲಸಗಳು ಎಲ್ಲಿದೆಯೋ ಅಲ್ಲಿಗೆ ಹೋಗ್ತಾರೆ.
ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಗುಂಪುಗಾರಿಕೆ ಇರುವುದು ಬಿಜೆಪಿಯಲ್ಲಿ. ಯತ್ನಾಳ್ ಒಂದ್ ಹೇಳಿಕೆ, ಜಾರಕಿಹೊಳಿ ಒಂದ್ ಹೇಳಿಕೆ, ದಾವಣಗೆರೆಯಲ್ಲೇ ಎರಡ್ಮೂರು ಹೇಳಿಕೆಗಳು, ಎರಡ್ಮೂರು ಟೀಂ ಇದೆ.
ನಮ್ಮಲ್ಲಿ ಸಣ್ಣಪುಟ್ಟ ತಪ್ಪುಗಳಾದ ನೋಟಿಸ್ ಕೊಟ್ಟಿದ್ದಾರೆ. ಬಳಿಕ ಎಲ್ಲವೂ ಸ್ಟಾಪ್ ಆಗಿವೆ. ಆದ್ರೆ ಬಿಜೆಪಿಯಲ್ಲಿ ಹೇಳಿಕೊಳ್ಳೋಕೆ ಆಗದಷ್ಟು ಗುಂಪುಗಾರಿಕೆ ಆಗಿವೆ. ನಮ್ಮಲ್ಲಿ ಯಾವುದೇ ಬಣ ಇಲ್ಲ. ನಮ್ಮದು ಕಾಂಗ್ರೆಸ್ ಬಣ. ದಿಲ್ಲಿಗೆ ವೈಯಕ್ತಿಕ ಕೆಲಸಗಳ ಮೇಲೆ ಹೋಗಿದ್ದೆ. ನನ್ ಮಕ್ಕಳು ಅಲ್ಲೇ ಓದುತ್ತಿದ್ದಾರೆ. ಹಾಗಾಗಿ ಹೋಗಿದ್ದೇನೆ. ಎಲ್ಲರೂ ಅವರವರ ಕೆಲಸಗಳಿಗಾಗಿ ಹೋಗಿದ್ದಾರೆ.
ನವೆಂಬರ್ ಮುಗಿದು ಹೋಗಿದೆ. ಯಾವುದೇ ಪವರ್ ಶೇರಿಂಗ್ ಇಲ್ಲ. ಈಗ ನಾವೆಲ್ಲಾ ಚೆನ್ನಾಗಿದ್ದೇವೆ. ಗೊಂದಲ ಇದ್ದಿದ್ರೆ ಒಂದೇ ಮನೆಯಲ್ಲಿ ತಿಂಡಿ ಮಾಡ್ತಿದ್ರಾ?. ನಾವೆಲ್ಲಾ ಹೈಕಮಾಂಡ್ ಮತ್ತು ಕಾಂಗ್ರೆಸ್ ಪರವಾಗಿದ್ದೇವೆ. ಜನವರಿ ಬರಲಿ ಮಾತಾಡೋಣ. ಸಂದರ್ಭಕ್ಕೆ ತಕ್ಕಂತೆ ಮಾತುಕತೆಗಳು ನಡೆಯುತ್ತಿರುತ್ತವೆ.
ಕುರ್ಚಿ ಖಾಲಿ ಇದ್ದಾಗ ಪವರ್ ಶೇರಿಂಗ್ ಮಾತುಗಳು. ಸದ್ಯಕ್ಕೆ ಕುರ್ಚಿ ಖಾಲಿ ಇಲ್ಲ. ಸುಸೂತ್ರವಾಗಿ ಎಲ್ಲವೂ ನಡೆದುಕೊಂಡು ಹೋಗುತ್ತಿದೆ. ಹೀಗಾಗಿ ನಾನು ಮಾತನಾಡುವುದು ಅನವಶ್ಯಕ ಎಂದು ಶಾಸಕ ಶಿವಗಂಗಾ ಹೇಳಿದ್ರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




