ಇಂದು ಬೆಳ್ಳಂಬೆಳಗ್ಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ತಿಪಟೂರು ನಗರದ ವಿವಿಧ ಸ್ಥಳಗಳಿಗೆ ಅಚಾನಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಪಿಎಂಸಿ ತರಕಾರಿ ಮಾರುಕಟ್ಟೆ, ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್, ಬಾಲಕರ ವಿದ್ಯಾರ್ಥಿ ವಸತಿಗೃಹ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅವರು ಪರಿಸ್ಥಿತಿ ನೇರವಾಗಿ ಅವಲೋಕಿಸಿದರು.
ತರಕಾರಿ ಮಾರುಕಟ್ಟೆ ಪರಿಶೀಲನೆಯ ವೇಳೆ, ದಲ್ಲಾಳಿಗಳ ಕಮಿಷನ್ ಹಾವಳಿ ಕುರಿತು ರೈತರು ಮಾಡಿದ್ದ ದೂರನ್ನು ಗಮನಿಸಿದ ಉಪ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಅದೇ ಸಮಯದಲ್ಲಿ, ಮಾರುಕಟ್ಟೆಯಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ಮೂಲಭೂತ ಸೌಲಭ್ಯಗಳ ಕೊರತೆ ಕಂಡು ಬೇಸರ ವ್ಯಕ್ತಪಡಿಸಿದರು. ಸ್ಮಾರ್ಟ್ ನಗರದ ಭಾಗವಾದ ತಿಪಟೂರಿನಲ್ಲಿ ರೈತರು, ಪ್ರಯಾಣಿಕರು ಮತ್ತು ಶಾಲಾ ಮಕ್ಕಳ ದಿನನಿತ್ಯದ ಸಮಸ್ಯೆಗಳನ್ನು ಆಲಿಸಿ, ಅವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

