ರಾಜ್ಯದ ರಾಜಕೀಯದಲ್ಲಿ ನಡೆಯುತ್ತಿರುವ ಅಧಿಕಾರ ಪೈಪೋಟಿ ಇನ್ನೂ ಎರಡು–ಮೂರು ತಿಂಗಳು ಮುಂದುವರಿಯಲಿದೆ ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ವ್ಯಂಗ್ಯ ಚಾಟಿ ಹಾರಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರಾಜ ಅರಸು ಅವರ ರೆಕಾರ್ಡ್ ಬ್ರೇಕ್ ಮಾಡಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಅದೇ ಸಮಯದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ‘ನನ್ನ ರೆಕಾರ್ಡ್ ಹೇಗೆ ಬ್ರೇಕ್ ಮಾಡ್ತೀರೋ ನೋಡುತ್ತೇನೆ’ ಎನ್ನುವ ರೀತಿಯಲ್ಲಿ ಸ್ಪರ್ಧೆ ಶುರುವಾಗಿದೆ ಎಂದು ಹೇಳಿದರು.
ಎರಡೂವರೆ ವರ್ಷ ಯಾವಾಗ ಆಗುತ್ತದೆ ಎಂದು ಡಿಕೆಶಿ ಟವಲ್ ಹಾಕಿ ಕಾಯುತ್ತಿದ್ದರು. ಎರಡೂವರೆ ವರ್ಷಗಳು ಕಳೆದ ಕೂಡಲೇ ಕೆಲವುವರನ್ನು ದೆಹಲಿ, ಮುಂಬೈ ಮತ್ತು ವಿವಿಧ ರೆಸಾರ್ಟ್ಗಳಿಗೆ ಡಿನ್ನರ್ಗೆ ಕಳುಹಿಸಿದ್ದಾರೆ.
ಇವತ್ತಿಗೆ ಬಂದರೆ ಡಿಸಿಎಂ ಅವರೇ ಸಿಎಂ ಮನೆಗೆ ಹೋಗಿ ಬ್ರೇಕ್ಫಾಸ್ಟ್ ಮಾಡಿ ಬಂದಿದ್ದಾರೆ ಎಂದು ಟೀಕಿಸಿದರು. ರಾಜ್ಯ ಸರ್ಕಾರದ ನೇತೃತ್ವ ಪ್ರಶ್ನೆಯಾಗಿದೆ ಎಂಬ ಸನ್ನಿವೇಶದಲ್ಲಿ ಶಾಸಕರ ಈ ಮಾತುಗಳು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ವರದಿ : ಲಾವಣ್ಯ ಅನಿಗೋಳ

