Wednesday, December 3, 2025

Latest Posts

ಮದುವೆ ಸೀಸನ್ ಶಾಕ್: ಗಗನಕ್ಕೇರಿದ ಚಿನ್ನ-ಬೆಳ್ಳಿ ದರ!

- Advertisement -

ಬೆಂಗಳೂರಿನ ಚಿನ್ನದ ಮಾರುಕಟ್ಟೆಯಲ್ಲಿ ದರ ಏರಿಕೆ ಮುಂದುವರಿದಿದ್ದು, ಸತತ ಎರಡನೇ ದಿನವೂ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಮದುವೆ ಹಾಗೂ ಹಬ್ಬದ ಸೀಸನ್‌ ಹಿನ್ನೆಲೆಯಲ್ಲಿ ದರ ಏರಿಕೆಯ ಪರಿಣಾಮ ಗ್ರಾಹಕರು ಒತ್ತಡಕ್ಕೆ ಒಳಗಾಗಿದ್ದಾರೆ.

ನವೆಂಬರ್ 29ರಂದು 22 ಕ್ಯಾರೆಟ್ ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ 125 ರೂ. ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ 136 ರೂ.ಗಳಷ್ಟು ಹೆಚ್ಚಳವಾಗಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಕಳೆದ 10 ದಿನಗಳಲ್ಲಿ ಒಂದೇ ದಿನ ಇಳಿಕೆ ಕಂಡಿದ್ದ ಚಿನ್ನವು ಮತ್ತೆ ಏರಿಕೆಯಲ್ಲಿ ಮುಂದುವರಿಯುತ್ತಿದೆ.

ನವೆಂಬರ್ 28 ಮತ್ತು 29ರಂದು ಸತತವಾಗಿ ದರ ಹೆಚ್ಚಾಗಿದೆ. ಆಭರಣ ಪ್ರಿಯರಿಗೆ ಶಾಕ್ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಅಸ್ಥಿರತೆ ಮತ್ತು ಸ್ಥಳೀಯ ಬೇಡಿಕೆಯ ಏರಿಕೆ ಇದಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ಪರಿಣಿತರು ತಿಳಿಸಿದ್ದಾರೆ.

ದೈನಂದಿನ ಬಳಕೆಯ ಆಭರಣಗಳಿಗೆ ಹೆಚ್ಚಾಗಿ ಬಳಸುವ 22 ಕ್ಯಾರೆಟ್ ಚಿನ್ನದ ದರದಲ್ಲಿ ಇಂದು ಪ್ರತಿ ಗ್ರಾಂಗೆ 125 ರೂ. ಏರಿಕೆಯಾಗಿದೆ. ನಿನ್ನೆ ಕೂಡ 65 ರೂ. ಏರಿಕೆಯಾಗಿತ್ತು. ಈ ಮೂಲಕ ಒಟ್ಟಾರೆ 190 ರೂ. ಹೆಚ್ಚಾಗಿದ್ದು ಪ್ರತಿ ಗ್ರಾಂ ಚಿನ್ನದ ಬೆಲೆ 11,900 ರೂ.ಗಳಿಗೆ ತಲುಪಿದೆ.

ಗ್ರಾಹಕರು 10 ಗ್ರಾಂ ಆಭರಣ ಖರೀದಿಸಲು ಇಂದು ಅಂದಾಜು 1,19,00 ರೂ. ವೆಚ್ಚ ಮಾಡಬೇಕಾಗುತ್ತದೆ. ಗಮನಿಸಿ ಇದರಲ್ಲಿ ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್ ಸೇರಿರುವುದಿಲ್ಲ. ಹೀಗಾಗಿ ಅಂತಿಮ ಖರೀದಿ ದರ ಇನ್ನೂ ಹೆಚ್ಚಾಗುತ್ತದೆ.

ಇನ್ನು ಹೂಡಿಕೆದಾರರು ಹೆಚ್ಚು ಇಷ್ಟಪಡುವ 24 ಕ್ಯಾರೆಟ್ ಶುದ್ಧ ಚಿನ್ನದ ದರದಲ್ಲೂ ಇಂದು ಭಾರೀ ಏರಿಕೆ ಕಂಡುಬಂದಿದೆ. ಪ್ರತಿ ಗ್ರಾಂಗೆ 136 ರೂ. ಹೆಚ್ಚಳವಾಗಿದ್ದು, ನೂತನ ದರ 12,982 ರೂ. ಆಗಿದೆ. ಇದರ ಪ್ರಕಾರ, 10 ಗ್ರಾಂ ಅಪರಂಜಿ ಚಿನ್ನದ ಬೆಲೆ 1,29,820 ರೂ.ಗೆ ತಲುಪಿದೆ.

ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ ಕಂಡು ಬಂದಿದ್ದು, ಒಂದೇ ದಿನ 9,000 ರೂ. ಹೆಚ್ಚಾಗಿದೆ. ಈ ಮೂಲಕ ಕೆಜಿ ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ 1.85 ಲಕ್ಷ ರೂ.ಗೆ ತಲುಪಿದೆ. ಕಳೆದ 5 ದಿನಗಳಲ್ಲಿ ಸಿಲ್ವರ್‌ ದರದಲ್ಲಿ 22 ಸಾವಿರ ರೂ. ಏರಿಕೆ ಕಂಡುಬಂದಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss