Wednesday, December 3, 2025

Latest Posts

ನಾವೆಲ್ಲಾ ಒಂದಾಗಲು ಕಾಲ ಬಂದಿದೆ: ಮರಾಠ ಸಮಾಜಕ್ಕೆ ಲಾಡ್ ಕರೆ!

- Advertisement -

ಬೀದರ್‌ನಲ್ಲಿ ನಡೆದ ಸ್ವಾಭಿಮಾನಿ ಮರಾಠ ಸಮಾವೇಶದಲ್ಲಿ, ಮರಾಠ ಸಮುದಾಯದ ಒಗ್ಗಟ್ಟು, ಪ್ರಗತಿ ಮತ್ತು ಶೈಕ್ಷಣಿಕ ಶಕ್ತಿಕರಣದ ಬಗ್ಗೆ, ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ದಿಟ್ಟ ಸಂದೇಶ ನೀಡಿದ್ದಾರೆ. ಸಮಾಜವನ್ನು ಗಟ್ಟಿಗೊಳಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿ, ಮರಾಠ ಸಮಾಜದ ಬಂಧುಗಳು ಸಂಕಷ್ಟದಲ್ಲಿದ್ದಾರೆ. ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎಂದು ಕರೆ ಕೊಟ್ಟಿದ್ದಾರೆ.

ಬೀದರ್‌ಗೆ ಹಲವು ಬಾರಿ ಬಂದಿದ್ದೆ. ಸಮಾಜದ ಸಂಘಟನೆ ಮತ್ತು ಒಗ್ಗಟ್ಟಿನ ಅಗತ್ಯವನ್ನು ಯಾವಾಗಲೂ ಒತ್ತಿ ಹೇಳಿದ್ದೆವು. ಸಮಾಜದ ಮುಖಂಡರ ಶ್ರಮಕ್ಕೆ ಧನ್ಯವಾದಗಳು. ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳು ಜಾತ್ಯಾತೀತತೆಯ ಬದುಕು ತೋರಿಸುತ್ತವೆ. ಶಿವಾಜಿ ಮಹಾರಾಜರು ಮೊಘಲರ ವಿರುದ್ಧ ಹೋರಾಡಿದರು. ಮುಸ್ಲಿಮರ ವಿರುದ್ಧವಲ್ಲ ಎಂದು ಸಂತೋಷ್‌ ಲಾಡ್‌ ಹೇಳಿದ್ರು.

ಸಮಾಜದ ಶಿಕ್ಷಣ ಮತ್ತು ಸುಧಾರಣೆಯಲ್ಲಿ ಮರಾಠ ರಾಜರ ಬೃಹತ್ ಪಾತ್ರವನ್ನು ಸ್ಮರಿಸಿದ ಸಂತೋಷ್‌ ಲಾಡ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಲಂಡನ್‌ನಲ್ಲಿ ಉನ್ನತ ಅಧ್ಯಯನ ಮಾಡಲು ಸಹಾಯ ಮಾಡಿದವರು‌, ಗಾಯಕ್ವಾಡ್ ಮತ್ತು ಶಾಹು ಮಹಾರಾಜರು ರಾಜ್ಯದ ಬೇರೆ ಬೇರೆ ಭಾಗಗಳಿಗೆ ಭೇಟಿ ನೀಡಿದಾಗ ಮರಾಠ ಸಮಾಜದ ಬಂಧುಗಳ ಸಂಕಷ್ಟ ಕಣ್ಣಿಗೆ ಬೀಳುತ್ತದೆ. ನಾನು ಮರಾಠ ಸಮಾಜದಲ್ಲಿ ಹುಟ್ಟಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ ಅಂತಾ ಸಂತೋಷ್‌ ಲಾಡ್‌ ಹೇಳಿದ್ರು.

ಸಮಾಜದ ಶೈಕ್ಷಣಿಕ ಮತ್ತು ಆರ್ಥಿಕ ಬಲವೇ ಅಭಿವೃದ್ಧಿಯ ಅಡಿಪಾಯ. ನಾವು ಒಂದಾಗಿ ಜೀಜಾಬಾಯಿ ಟ್ರಸ್ಟ್‌ ಆರಂಭಿಸೋಣ. ಪ್ರತಿ ತಿಂಗಳು ಬರಲು ನಾನು ಸಿದ್ಧನಿದ್ದೇನೆ. ಸಂಪೂರ್ಣ ಸಹಾಯ ಮಾಡುತ್ತೇನೆ.
ರಾಜಕೀಯದ ಬದಲು ಸಮಾಜ ಸೇವೆಯೇ ನನ್ನ ಮೊದಲ ಗುರಿ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಬಲವಾಗಿದ್ದಾಗ ರಾಜಕೀಯ ಬರುತ್ತದೆ.

ಇಂದು ಸಮಾಜಕ್ಕಾಗಿ ಕೆಲಸ ಮಾಡುವ ಪ್ರಮಾಣ ಮಾಡೋಣ. ಬೀದರ್ ಜಿಲ್ಲೆಯಲ್ಲಿನ ಮರಾಠ ಬಂಧುಗಳು ಲಕ್ಷಾಂತರ ಸಂಖ್ಯೆಯಲ್ಲಿ ಇದ್ದರೂ, ಎಲ್ಲಾ ಸಮಾಜದೊಂದಿಗೆ ಸಾಮರಸ್ಯದಿಂದ ಬಾಳುವ ಅಗತ್ಯವಿದೆ. ಶಿವಾಜಿ, ಶಾಹು, ಗಾಯಕ್ವಾಡ್ ಮಹಾರಾಜರ ಮಾರ್ಗವನ್ನು ಅನುಸರಿಸೋಣ ಎಂದು ಸಂತೋಷ್‌ ಲಾಡ್‌ ಕರೆ ಕೊಟ್ಟಿದ್ದಾರೆ.

ಟ್ರಸ್ಟ್‌ ಮುಖಾಂತರ ಬಸವಣ್ಣ ಮತ್ತು ಅಂಬೇಡ್ಕರ್‌ ಅವರ ವಿಚಾರಗಳನ್ನು ಹೊಸ ಪೀಳಿಗೆಗೆ ತಲುಪಿಸುವ ಯೋಜನೆ ಇದೆ. ಬಡ ಬಂಧುಗಳನ್ನು ಹುಡುಕಿ ಓದಿಸಿ, ಸಹಾಯ ಮಾಡುವುದು ನಮ್ಮ ಮೊದಲ ಉದ್ದೇಶ. ನಾನು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ್ದೇನೆ. 4 ಬಾರಿ ಶಾಸಕ, ಸಚಿವ. ದೇವರು ಕೊಟ್ಟ ಶಕ್ತಿ ಇರುವವರೆಗೆ ಶೋಷಿತರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸಂತೋಷ್‌ ಲಾಡ್‌ ಹೇಳಿದ್ರು.

ಸಮಾವೇಶದ ಯಶಸ್ಸು ಶಕ್ತಿ ನೀಡಿದೆ. ಜೀಜಾಬಾಯಿ ಟ್ರಸ್ಟ್‌ ಉತ್ತರ ಕರ್ನಾಟಕದಲ್ಲಿ ನಂಬರ್‌ 1 ಆಗಲು ಸಹಾಯ ಮಾಡುತ್ತೇವೆ. ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಯುವಕರು ಒಂದಾಗಬೇಕು. ಛತ್ರಪತಿ ಶಿವಾಜಿ ಮಹಾರಾಜರ ವಿಚಾರಗಳನ್ನು ಓದಿರಿ, ಚಿಂತಿಸಿರಿ. ನಾನು ಮರಾಠ ಎಂಬ ಭಾವನೆಯೊಂದೇ ನಮ್ಮನ್ನು ಇಲ್ಲಿ ಸೇರಿಸಿದೆ ಎಂದು ಸಂತೋಷ್‌ ಲಾಡ್‌ ಕರೆ ಕೊಟ್ಟಿದ್ದಾರೆ.

ಇನ್ನು, ಸಮಾವೇಶಕ್ಕೂ ಮುನ್ನ ಬೀದರ್‌ನ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜದ ಬಂಧುಗಳು ಭಾರಿ ಸಂಖ್ಯೆಯಲ್ಲಿ ಸೇರಿದ್ರು. ಸಚಿವ ಲಾಡ್‌ ಅವರಿಗೆ ಅದ್ದೂರಿ ಸ್ವಾಗತ ಕೋರಿದ್ರು. ನಂತರ ಶಿವಾಜಿ ಮಹಾರಾಜರ ಪ್ರತಿಮೆಗೆ ಲಾಡ್‌ ಮಾಲಾರ್ಪಣೆ  ಮಾಡಿದ್ರು

- Advertisement -

Latest Posts

Don't Miss