Wednesday, December 3, 2025

Latest Posts

ಧಾರವಾಡ ಚಲೋ ಕರೆ ಎಫೆಕ್ಟ್: ಕೋಚಿಂಗ್ ಸೆಂಟರ್‌ ಬಂದ್!

- Advertisement -

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನೇಕ ವಿದ್ಯಾರ್ಥಿ ಸಂಘಟನೆಗಳು ಕರೆ ನೀಡಿದ್ದ ಧಾರವಾಡ ಚಲೋ ಹಿನ್ನಲೆಯಲ್ಲಿ, ಧಾರವಾಡದಲ್ಲಿ ಕೋಚಿಂಗ್ ಸೆಂಟರಗಳನ್ನು ಪೊಲೀಸರು ಬಂದ ಮಾಡಿಸಿದರು.

ಸರ್ಕಾರಿ ಖಾಲಿ ಹೆದ್ದೆ ನೇಮಕಾತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಇಂದು ಧಾರವಾಡ ಚಲೋ‌ಗೆ ಕರೆ ನೀಡಿದವು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಕಳೆದ ದಿನವೇ ಪ್ರತಿಭಟನೆ ಮೆರವಣಿಗೆಗೆ ಅನುಮತಿ ನಿರಾಕರಿಸಿದರು.

ಈ ಹಿನ್ನಲೆಯಲ್ಲಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡದ ಹಿನ್ನಲೆ ಪೊಲೀಸರಿಗೇ ಸೆಡ್ಡು ಹೊಡೆದು ಪ್ರತಿಭಟನೆ ನಡೆಸಿದ ನೂರಾರು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಪ್ರತಿಭಟನಾಕಾರರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರ ಜತೆಗೆ ಧಾರವಾಡದ ಸಪ್ತಾಪುರ, ಶ್ರೀನಗರ, ಜಯನಗರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಹೆಚ್ಚಾಗಿದ್ದು, ಪ್ರತಿಭಟನೆ ಹಿನ್ನೆಲೆ ಆ ಕೇಂದ್ರಗಳನ್ನು ಪೊಲೀಸರು ಬಂದ್ ಮಾಡಿಸಿದರು.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss