Wednesday, December 3, 2025

Latest Posts

“ಹಳ್ಳಿಯಿಂದ ಕೋಳಿ ತೆಗೆದುಕೊಂಡು ಬಾ ಎಂದು ಹೇಳಿದ್ದೆ”

- Advertisement -

ಬೆಂಗಳೂರಿನಲ್ಲಿ ವರ್ಜಿನಲ್‌ ಸಿಗೋದಿಲ್ಲ. ಹೀಗಾಗಿ ಹಳ್ಳಿಯಿಂದ ನಾಟಿ ಕೋಳಿ ತರುವಂತೆ ನಾನೇ ಅವರಿಗೆ ಹೇಳಿದ್ದು. ಹೀಗಂತ ಡಿಕೆಶಿ ಮನೆಯಲ್ಲಿ ಬ್ರೇಕ್‌ಫಾಸ್ಟ್‌ ಬಳಿಕ ಸಿದ್ದರಾಮಯ್ಯ ನಗುತ್ತಲೇ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

ಡಿ.ಕೆ. ಶಿವಕುಮಾರ್‌ ಮನೆಯಲ್ಲಿ ನಾನ್‌ವೆಜ್‌. ನಮ್ಮ ಮನೆಯಲ್ಲಿ ಬರೀ ವೆಜ್‌. ಇವರು ವೆಜಿಟೇರಿಯನ್. ನಾನು ನಾನ್‌ವೆಜಿಟೇರಿಯನ್.‌ ಆದರೂ ನಾನು ನಾನ್‌ವೆಜ್‌ ಮಾಡಿಸಿರಲಿಲ್ಲ. ಹಳ್ಳಿಯಿಂದ ಕೋಳಿ ತೆಗೆದುಕೊಂಡು ಬಾ ಎಂದು ಹೇಳಿದ್ದೆ ನಗುತ್ತಾ ಸಿದ್ದರಾಮಯ್ಯ ಹೇಳಿದ್ರು.

ಇನ್ನು, ಡಿಸೆಂಬರ್‌ 8ರಂದು ಅಸೆಂಬ್ಲಿ ಶುರುವಾಗಿ, 2 ವಾರ ನಡೆಯಲಿದೆ. ಅಲ್ಲಿ ನಮ್ಮ ಸ್ಟ್ರ್ಯಾಟಜಿ ಹೇಗಿರಬೇಕೆಂಬ ಬಗ್ಗೆ ಚರ್ಚೆ ಮಾಡಿದ್ದೇವೆ.
ಬಿಜೆಪಿ, ಜೆಡಿಎಸ್‌ನವರು ಯಾವುದೇ ವಿಚಾರ ಪ್ರಸ್ತಾಪ ಮಾಡಿದ್ರೂ ಎದುರಿಸುತ್ತೇವೆ. ಕಬ್ಬು, ಮೆಕ್ಕೆಜೋಳ ವಿಚಾರಗಳೂ ಸೇರಿದಂತೆ, ರಾಜ್ಯದ ರೈತರು, ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ರು.

- Advertisement -

Latest Posts

Don't Miss