ಡಿ.ಕೆ.ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಸಂತೋಷ ಅಂದ್ರೆ ಸದ್ಯ ವಾತಾವರಣ ತಿಳಿಯಾಗಿದೆ. ಕೆಲವರು ಕ್ರಿಯೇಟ್ ಮಾಡಿದ್ರು. ಈಗ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ. ಕೆಲವರಿಗೆ ಸಿದ್ದರಾಯ್ಯನವರು ಕಂಟಿನ್ಯೂ ಆಗಬೇಕೆಂಬುದು ಇದೆ. ಇನ್ನೂ ಕೆಲವರಿಗೆ ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂಬುದು ಇದೆ. ಇನ್ನೂ ಕೆಲವರಿಗೆ ನಾನು ಮುಖ್ಯಮಂತ್ರಿಯಾಗಬೇಕು ಎಂಬುದಿದೆ.
ಜನರ ಆಸೆಗಳನ್ನು ತಪ್ಪೆಂದು ಹೇಳಲು ಆಗುವುದಿಲ್ಲ. ಇದೆಲ್ಲಾ ನಮಗೆ ಮುಖ್ಯ ಆಗುವುದಿಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಮುಖ್ಯ ಆಗುತ್ತೆ. ಹೈಕಮಾಂಡ್ ತೀರ್ಮಾನವೇ ಅಂತಿಮ. ಸದ್ಯಕ್ಕೆ, ಅವರಿಬ್ಬರೇ ತಿಂಡಿ ತಿನ್ನುತ್ತಿದ್ದಾರೆ. ನಮ್ಮನ್ನೂ ತಿಂಡಿ ತಿನ್ನುವುದಕ್ಕೆ ಕರೆದ್ರೆ ನಾವೂ ಹೋಗುತ್ತೇವೆ ಎಂದು ಪರಮೇಶ್ವರ್ ಹೇಳಿದ್ರು.
ಇನ್ನು, ನೀವೂ ಬ್ರೇಕ್‌ಫಾಸ್ಟ್ ಮೀಟಿಂಗ್ ಕರೀತಿರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ, ಎಲ್ಲವೂ ಒಳ್ಳೆಯದಾಗೋದಾದ್ರೆ ಅದನ್ನೂ ಮಾಡೋಣ. ಯಾಕೆ ಆಗಬಾರದು. ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇನೆ ಎಂದು ಪರಂ ಹೇಳಿದ್ರು.

