ಕೆಂಪೇಗೌಡ ಏರ್‌ಪೋರ್ಟ್ ಬಳಿ ಇರುವ ರಾಮೇಶ್ವರಂ ಕೆಫೆಯ ಊಟದಲ್ಲಿ ಹುಳ ಪತ್ತೆಯಾಗಿದ್ದ ಪ್ರಕರಣ ಸಂಬಂಧ, ಕೆಫೆ ಮಾಲೀಕ ದಿವ್ಯಾ, ರಾಘವೇಂದ್ರ ರಾವ್ ಮತ್ತು ಮ್ಯಾನೇಜರ್ ಸುಮಂತ್ ವಿರುದ್ಧ FIR ದಾಖಲಾಗಿದ್ದು, ಆರೋಪಕ್ಕೊಳಗಾದವರು ಸುಳ್ಳು ದೂರು ನೀಡಿದರೆಂದು ಪ್ರಕರಣ ದಾಖಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಕೆಫೆಯ ಊಟದಲ್ಲಿ ಹುಳ ಪತ್ತೆಯಾಗಿದ್ದು, ಕೆಲವು ಯುವಕರು ಈ ಘಟನೆ ವಿಡಿಯೋ ಮಾಡಿಕೊಂಡಿದ್ದರು. ಈ ಸಮಯದಲ್ಲಿ ಕೆಫೆಗೆ ಹಣಕ್ಕೆ ಬೇಡಿಕೆಯೊಂದಿಗೆ ಕರೆ ಬಂದಿರುವುದಾಗಿ ಮಾಲೀಕರು ಆರೋಪಿಸಿದ್ದರು. ಬಳಿಕ ಮಾಲೀಕರು ಯುವಕರ ಮೇಲೆ ಬ್ಲ್ಯಾಕ್‌ಮೇಲ್ ನಡೆಸಿದ ಎಂದು ಆರೋಪಿಸಿ ದೂರು ನೀಡಿದ್ದರು.
ಆದರೆ ತನಿಖೆಯಲ್ಲಿ, ಯುವಕರು ಬ್ಲ್ಯಾಕ್‌ಮೇಲ್ ನಡೆಸದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ, ಯುವಕರು ತನ್ನ ಮೇಲೆ ಸುಳ್ಳು ಆಪಾದನೆ ಮಾಡಿದ ಪ್ರಕರಣದ ವಿರುದ್ಧ ಏರ್‌ಪೋರ್ಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದರಿಂದ, ಕೇಸ್ ಸಂಬಂಧ ಮಾಲೀಕರು ಮತ್ತು ಮ್ಯಾನೇಜರ್ ವಿರುದ್ಧ FIR ದಾಖಲಾಗಿದ್ದು, ಪೊಲೀಸ್ ತನಿಖೆ ಪ್ರಗತಿಯಲ್ಲಿ ಇದೆ. ಈ ಪ್ರಕರಣದ ತನಿಖೆ ಏರ್‌ಪೋರ್ಟ್ ಠಾಣಾ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಮುಂದಿನ ಹಂತದಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ವರದಿ : ಲಾವಣ್ಯ ಅನಿಗೋಳ

