ಕನ್ನಡ ಬಿಗ್‌ಬಾಸ್ 12 ಈಗ 9ನೇ ವಾರಕ್ಕೆ ಬಂದಿದ್ದು, ಸ್ಪರ್ಧಿಗಳಲ್ಲಿ ಹೊಸ ಹೊಸ ಡ್ರಾಮಾ ಶುರುವಾಗಿದೆ. ಪ್ರತಿೊಬ್ಬರೂ ಈಗ ಟ್ರೋಫಿ ಕಡೆ ಕಣ್ಣು ಹಾಕಿದ್ದಾರೆ, ಅದಕ್ಕೆ ತಕ್ಕಂತೆ ಆಟವೂ ಬದಲಾಗ್ತಿದೆ. ಜೊತೆಯಾಗಿದ್ದವರ ಮಧ್ಯೆ ಕೂಡ ಈಗ ಮನಸ್ತಾಪಗಳು ಸ್ಪಷ್ಟವಾಗಿ ಕಾಣಿಸುತ್ತಿವೆ.
ಈ ವಾರದ ನಾಮಿನೇಷನ್ ಟಾಸ್ಕ್ ಅಲ್ವಾ—ಬೆನ್ನಿಗೆ ಅರ್ಧ ವೃತ್ತದ ಹಲಗೆ ಕಟ್ಟಿರುವುದು, ಅದಕ್ಕೆ ಚೂರಿ ಹಾಕಿ ಯಾರನ್ನು ನಾಮಿನೇಟ್ ಮಾಡಬೇಕು ಅಂತ ನಿರ್ಧರಿಸಲು. ಇಲ್ಲಿ ರಕ್ಷಿತಾ ಶೆಟ್ಟಿ ಫುಲ್ ಎನರ್ಜಿ.“ಜನರು ನನ್ನನ್ನ ಸೇವ್ ಮಾಡ್ತಾರೆ” ಎಂದು ಆತ್ಮವಿಶ್ವಾಸದಿಂದ ನಾಮಿನೇಷನ್ ಮಾಡ್ತಾರೆ. ಏಳನೇ ವಾರ ಕಿಚ್ಚ ಸುದೀಪ್ ಅವರಿಂದ ಮೊದಲಿಗರಾಗಿ ಸೇವ್ ಆಗಿದ್ದ ಅನುಭವವೇ ಈ ಕಾನ್ಫಿಡೆನ್ಸ್ ಎಂದು ಹೇಳಬಹುದು.
ಗಿಲ್ಲಿ ನಟರನ್ನು ನಾಮಿನೇಟ್ ಮಾಡುವಾಗ, ರಕ್ಷಿತಾ ತಮ್ಮ ಹಲಗೆಯಲ್ಲಿರುವ ಚೂರಿ ತೆಗೆದುಕೊಳ್ಳದೆ, ಮಾಳು ಅವರ ಬಳಿಯ ಚೂರಿ ಯೂಸ್ ಮಾಡುತ್ತಾರೆ—basically ಮಾಳು ಸೇಫ್ ಆಗಲಿ ಅಂತ. ಇದನ್ನು ನೋಡಿದ ಗಿಲ್ಲಿ ನಟ straight ಮಾತೇ, ನಿನ್ನ ಹಲಗೆಯಲ್ಲಿ 5 ಚೂರಿಗಳಿವೆ, ಮೊದಲು ನೀನು safe ಆಗೋದು ಮುಖ್ಯ. ಇದು ಫ್ಯಾಮಿಲಿ ಅಲ್ಲ, ನಿನ್ನ ಆಟ ನೀನೇ ಆಡಬೇಕು. ಇದಕ್ಕೆ ರಕ್ಷಿತಾ ಕೂಡ ತಕ್ಷಣ, “ಜನರು ನನಗೆ ಸಪೋರ್ಟ್ ಮಾಡ್ತಾರೆ” ಅಂತ ತಮ್ಮ ನಂಬಿಕೆ ಹೇಳುತ್ತಾರೆ.
ಮತ್ತೆ ಸ್ಟ್ಯಾಂಡಿಂಗ್ ವಿಚಾರದಲ್ಲಿ ಮತ್ತೊಂದು issue—ಮಾಳು ಅವರನ್ನು 11ನೇ ಸ್ಥಾನಕ್ಕೆ ಹಾಕಿದ್ದಕ್ಕೆ ರಕ್ಷಿತಾ ಕೋಪ. “ನನ್ನನ್ನು ನಾಲ್ಕನೇ ಸ್ಥಾನಕ್ಕೆ ಏಕೆ?” ಎನ್ನುವುದನ್ನು ಕೇಳೋದರ ಬದಲು, ಮಾಳು ಮತ್ತು ಗಿಲ್ಲಿ ನಟರನ್ನು ಕಂಪೇರ್ ಮಾಡಿ, ಧನುಷ್‌ರನ್ನು ಪ್ರಶ್ನೆ ಮಾಡುತ್ತಾರೆ. ಇದರ ಜೊತೆಗೆ ನಾಮಿನೇಷನ್ ಟಾಸ್ಕ್ ನಲ್ಲಿ ಕಾವ್ಯಾ ಜೊತೆ ಕೂಡ ರಕ್ಷಿತಾ ಮಾತಿನ ಜಗಳ ನಡೆಸಿದ್ದು, ಮನೆಯಲ್ಲಿ tension ಮತ್ತಷ್ಟು ಹೆಚ್ಚಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

