Thursday, December 4, 2025

Latest Posts

ಭಾರತಕ್ಕೆ ಬರುವ ‘ಪುಟಿನ್’ಗೆ ಲ್ಯಾಬ್ ಟೆಸ್ಟ್ ಆದ್ಮೇಲೆ ಆಹಾರ!

- Advertisement -

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು 2 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ. ದೆಹಲಿಯಲ್ಲಿ ಅವರಿಗಾಗಿ ಅತಿ ಕಠಿಣ 5 ಪದರದ ಭದ್ರತಾ ವಲಯವನ್ನು ಸಿದ್ಧಪಡಿಸಲಾಗಿದೆ. ರಷ್ಯಾ ಅಧ್ಯಕ್ಷೀಯ ಭದ್ರತಾ ಸೇವೆ , ಭಾರತದ NSG ಕಮಾಂಡೋಗಳು, ಸೈಪರ್ ಪಡೆ, ಡ್ರೋನ್‌ಗಳು, ಜಾಮರ್‌ಗಳು ಮತ್ತು ಎಐ ಆಧಾರಿತ ಮೇಲ್ವಿಚಾರಣೆಯ ಸಂಯೋಜನೆ ಮೂಲಕ ಈ ಭದ್ರತಾ ವ್ಯವಸ್ಥೆ ನಿರ್ಮಿಸಲಾಗಿದೆ.

ಪುಟಿನ್ ಅವರ ಆಗಮನಕ್ಕೂ ಮುನ್ನವೇ ರಷ್ಯಾದಿಂದ ಸುಮಾರು 50 ಮಂದಿ ಉನ್ನತ ಭದ್ರತಾ ಸಿಬ್ಬಂದಿ ದೆಹಲಿಗೆ ತಲುಪಿದ್ದಾರೆ. ಪುಟಿನ್ ಅವರು ದೆಹಲಿಯಲ್ಲಿ ಯಾವ ಸ್ಥಳದಲ್ಲಿ ತಂಗಲಿದ್ದಾರೆ ಎಂಬ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗಿದೆ. ಪುಟಿನ್ ಸಂಚರಿಸುವ ಔರಸ್ ಸೆನಾಟ್ ಎಂಬ ಶಸ್ತ್ರಸಜ್ಜಿತ ಐಷಾರಾಮಿ ಕಾರು ಮಾಸ್ಕೋದಿಂದಲೇ ಭಾರತಕ್ಕೆ ತರಲಾಗುತ್ತದೆ. ಕಾರು ಟೈರ್ ಪಂಕ್ಚರ್ ಆದರೂ ಸರಾಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಸ್ಪೆಪರ್‌ಗಳು, ಡೋನ್, ಜಾಮರ್, ಎಐ ಮೇಲ್ವಿಚಾರಣೆ, ಮುಖ ಚಹರೆ ಗುರುತಿಸಬಲ್ಲ ಕ್ಯಾಮೆರಾಗಳನ್ನ ನಿಯೋಜಿಸಲಾಗಿದೆ. ರಷ್ಯಾದ ಅಧ್ಯಕ್ಷೀಯ ಭದ್ರತಾ ಸೇವೆ ಸಿಬ್ಬಂದಿ, ಭಾರತದ NSG ಕಮಾಂಡೋ ಭದ್ರತೆಯಿರುತ್ತದೆ. ಪುಟನ್ ಬೆಂಗಾವಲು ಪಡೆ ಹಾದುಹೋಗುವ ಪ್ರತಿಯೊಂದು ಮಾರ್ಗವನ್ನೂ ಪರಿಶೀಲಿಸಲಾಗುತ್ತಿದೆ. ಬೆಂಗಾವಲು ಪಡೆಯ ಮೇಲೆ ಸದಾ ಕಣ್ಣಿಡಲು ವಿಶೇಷ ಡೋನ್ ಗಳನ್ನು ಬಳಸಲಾಗುತ್ತಿದ್ದು, ಭದ್ರತೆಗಾಗಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿ ಮೂಲಕ ಕಣ್ಣಾವಲು ನಡೆಸಲಾಗುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಪುಟಿನ್ ಇದ್ದ ಸಂದರ್ಭದಲ್ಲಿ ಮಾತ್ರ ಭಾರತೀಯ ಕಮಾಂಡೋಗಳು ಒಳಪದರದ ಭದ್ರತೆಯಲ್ಲೂ ಸೇರ್ಪಡೆಯಾಗಲಿದ್ದಾರೆ. ಪುಟಿನ್ ಅವರಿಗೆ ನೀಡುವ ಎಲ್ಲಾ ಆಹಾರವನ್ನು ಮೊದಲು ವಿಶೇಷ ಲ್ಯಾಬ್‌ನಲ್ಲಿ ಪರೀಕ್ಷಿಸಿದ ನಂತರ ಮಾತ್ರ ವಿತರಿಸಲಾಗುತ್ತದೆ. ಅಲ್ಲದೆ, ಅವರ ಮಲ ಹಾಗೂ ಮೂತ್ರ ಮಾದರಿಗಳನ್ನು ಕೂಡ ರಷ್ಯಾಕ್ಕೆ ಹಿಂತಿರುಗಿಸುವ ಪದ್ಧತಿಯನ್ನು ಈ ವರ್ಷವೂ ಅನುಸರಿಸಲಾಗುತ್ತಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss