Thursday, December 4, 2025

Latest Posts

ರಾಜ್ಯಕ್ಕೆ ಕೇಂದ್ರದಿಂದ ಕೋಟ್ಯಂತರ ನೆರವು : ಸಹಕಾರ ಸಂಘಕ್ಕೆ ಅತಿದೊಡ್ಡ ಅನುದಾನ

- Advertisement -

ಕರ್ನಾಟಕದಲ್ಲಿನ ಸಹಕಾರ ಸಂಘಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಬೆಂಬಲ ದೊರೆಯಲಿದೆ. ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಒಟ್ಟು 4,164.95 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಬುಧವಾರ ತಿಳಿಸಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ರಾಜ್ಯಸಭಾ ಕಲಾಪದಲ್ಲಿ ಲಿಖಿತ ಉತ್ತರ ನೀಡಿದ ಅವರು, ನವೆಂಬರ್ 25ರವರೆಗೆ ದೇಶದಾದ್ಯಂತ ಇರುವ ಸಹಕಾರಿ ಸಂಘಗಳ ಬಲವರ್ಧನೆಗಾಗಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ಒಟ್ಟು 4,67,455.66 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೇ ಕರ್ನಾಟಕಕ್ಕೆ 4,164.95 ಕೋಟಿ ರೂ. ವಂಚಿಸಲಾಗಿದೆ ಎಂದು ಹೇಳಿದ್ದಾರೆ.

ಎನ್‌ಸಿಡಿಸಿ ನೀಡಿದ ದತ್ತಾಂಶಗಳ ಪ್ರಕಾರ, ಕರ್ನಾಟಕದಲ್ಲಿ 46,798 ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 2.38 ಕೋಟಿ ಸದಸ್ಯರು ಸೇರಿಕೊಂಡಿದ್ದಾರೆ. ಸಕ್ಕರೆ, ಹಾಲು ಉತ್ಪಾದನೆ, ಕೃಷಿ, ಮಹಿಳಾ ಮತ್ತು ಸೇವಾ ಸಹಕಾರ ಸಂಘಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ಸಂಘಗಳು ಕೆಲಸ ಮಾಡುತ್ತಿವೆ.

2021ರಲ್ಲಿ ಸಹಕಾರ ಸಚಿವಾಲಯ ರಚನೆಯಾದ ನಂತರದಿಂದಲೇ, ‘ಸಹಕಾರದಿಂದ ಸಮೃದ್ಧಿ’ ಎಂಬ ಘೋಷಣೆಯಡಿಯಲ್ಲಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಡೇರಿ, ಸಕ್ಕರೆ ಮತ್ತು ಕೃಷಿ ಸಹಕಾರಿ ಸಂಘಗಳ ಸಾಮರ್ಥ್ಯವೃದ್ಧಿಗೆ ಹಣಕಾಸು ನೆರವು, ಮೂಲಸೌಕರ್ಯ ಸುಧಾರಣೆ ಮತ್ತು ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ. ಕರ್ನಾಟಕಕ್ಕೆ ನೀಡಿರುವ ಈ ನಿಧಿ, ರಾಜ್ಯದ ಸಹಕಾರಿ ಸಂಸ್ಥೆಗಳ ವಿಸ್ತರಣೆ, ಸುಧಾರಣೆ ಮತ್ತು ಸದಸ್ಯರ ಆರ್ಥಿಕ ಸ್ಥಿರತೆ ಹೆಚ್ಚಿಸುವ ಕಾರ್ಯಕ್ಕೆ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ನಂಬಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss