Thursday, December 4, 2025

Latest Posts

ಮೈಸೂರಿಗೆ ಮೆಗಾ ಅಪ್‌ಗ್ರೇಡ್! 4 KSRTC ಹೊಸ ಡಿಪೋ

- Advertisement -

ಮೈಸೂರಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಕೆಎಸ್‌ಆರ್‌ಟಿಸಿ ನಾಲ್ಕು ಹೊಸ ಬಸ್ ಡಿಪೋಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ. ‘ಗ್ರೇಟರ್ ಮೈಸೂರು’ ಘೋಷಣೆ ಮತ್ತು ಹೊರವರ್ತುಲ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ, ನಗರದ ನಾಲ್ಕು ದಿಕ್ಕುಗಳಲ್ಲಿ ತಲಾ ಎಂಟು ಎಕರೆ ಜಾಗವನ್ನು ಕೋರಲಾಗಿದೆ.

ಪ್ರಸ್ತುತ ಇರುವ ಹಿಂಕಾಳ್, ಕುವೆಂಪುನಗರ ಮತ್ತು ಸತ್ತಗಳ್ಳಿ ಡಿಪೋಗಳ ಜೊತೆಗೆ, ಹುಣಸೂರು, ಟಿ. ನರಸೀಪುರ, ನಂಜನಗೂಡು ಮತ್ತು ಎಚ್.ಡಿ. ಕೋಟೆ ಮಾರ್ಗಗಳಲ್ಲಿ ಹೊಸ ಡಿಪೋಗಳನ್ನು ನಿರ್ಮಿಸಲು ಯೋಜನೆ ಇದೆ. ಜೊತೆಗೆ, ಪ್ರತ್ಯೇಕ ನಗರ ಬಸ್ ಟರ್ಮಿನಲ್‌ಗಾಗಿ ಸಹ ಪ್ರಸ್ತಾವನೆ ಸಲ್ಲಿಸಲಾಗಿದೆ.

ನಗರ ಬಸ್ ನಿಲ್ದಾಣಗಳು ಸಾಮರ್ಥ್ಯ ಮೀರಿರುವ ಕಾರಣ, ಹೊಸ ಡಿಪೋಗಳು ಮತ್ತು ಟರ್ಮಿನಲ್ ಪ್ರಯಾಣಿಕರ ಒತ್ತಡ ಕಡಿಮೆ ಮಾಡಿ, ಮಾರ್ಗ ಸೇವೆ ಸುಧಾರಿಸಲಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ 100 ಎಲೆಕ್ಟ್ರಿಕ್ ಬಸ್‌ಗಳು ಸೇರಲಿರುವುದರಿಂದ, ಮೈಸೂರು ವಿಭಾಗದ ಒಟ್ಟು ಬಸ್‌ಗಳ ಸಂಖ್ಯೆ ಶೀಘ್ರದಲ್ಲೇ 617ಕ್ಕೆ ಏರಲಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss