Friday, December 5, 2025

Latest Posts

ಕಾಂಗ್ರೆಸ್‌ನಿಂದ ರಾಹುಲ್‌ ಉಚ್ಛಾಟನೆ : ಈ ಹಿಂದೆ ನಡೆದ ಒಳಕಥೆ ಏನು?

- Advertisement -

ಕೇರಳದ ಕಾಂಗ್ರೆಸ್ ರಾಜಕೀಯದಲ್ಲಿ ಭಾರೀ ಭೂಕಂಪ.. ಲೈಂಗಿಕ ದೌರ್ಜನ್ಯ ಸೇರಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರನ್ನು ಕಾಂಗ್ರೆಸ್ ಪಕ್ಷವೇ ಹೊರದೂಡಿದೆ. ತಿರುವನಂತಪುರಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ರಾಹುಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕೆಲವೇ ಕ್ಷಣಗಳಲ್ಲಿ ರಾಜ್ಯ ಕಾಂಗ್ರೆಸ್ ಘಟಕ ತುರ್ತು ನಿರ್ಧಾರ ತೆಗೆದುಕೊಂಡಿದೆ. ಈಗಾಗಲೇ ಅಮಾನತುಗೊಂಡಿದ್ದ ರಾಹುಲ್, ಈ ಬಾರಿ ನೇರವಾಗಿ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಚಾಟನೆಗೆ ಒಳಗಾಗಿದ್ದಾರೆ.

ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸನ್ನಿ ಜೋಸೆಫ್ ಹೇಳುವಂತೆ, ಶಾಸಕರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳು, ಹೊಸದಾಗಿ ಬಂದಿರುವ ದೂರುಗಳು ಮತ್ತು ಮುಂದಿನ ಚುನಾವಣೆಯ ಮೇಲೆ ಬೀಳಬಹುದಾದ ನೇರ ಪರಿಣಾಮ ಬೀಳಬಹುದು. ಈ ನಿರ್ಧಾರಕ್ಕೂ ಮುನ್ನ ಹೈಕಮಾಂಡ್‌ನೊಂದಿಗೆ ವಿಶೇಷ ಸಭೆ ನಡೆಸಲಾಗಿದ್ದು, ಹೈಕಮಾಂಡ್ ಕೂಡ ಶಾಸಕನನ್ನು ಉಳಿಸುವುದು ಪಕ್ಷದ ವರ್ಚಸ್ಸಿಗೆ ಹೊಡೆತ ಎಂದು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ.

ಪಕ್ಷದ ಹಿರಿಯ ನಾಯಕರು ಇನ್ನೂ ಮುಂದಾಗಿ, ಪ್ರಕರಣಗಳ ಗಂಭೀರತೆಯನ್ನು ಉಲ್ಲೇಖಿಸಿ, ರಾಹುಲ್ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳದಿದ್ದರೆ ಜನರಲ್ಲಿ ತಪ್ಪು ಸಂದೇಶ ಹೋಗುತ್ತದೆ ಎಂದು ಒತ್ತಾಯಿಸಿದ್ದರು. ಅಂತಿಮವಾಗಿ ಪಕ್ಷದ ಭವಿಷ್ಯ, ಸಾರ್ವಜನಿಕ ವಿಶ್ವಾಸ ಮತ್ತು ಮುಂಬರುವ ಚುನಾವಣೆಯನ್ನು ಪರಿಗಣಿಸಿ ಉಚ್ಚಾಟನೆಗಾಗಿ ಹೈಕಮಾಂಡ್ ಹಸಿರು ನಿಶಾನೆ ತೋರಿದಂತಾಗಿದೆ. ಪಾಲಕ್ಕಾಡ್ ಶಾಸಕ ರಾಹುಲ್ ವಿರುದ್ಧ ಈಗಾಗಲೇ ಎರಡು ಎಫ್‌ಐಆರ್‌ಗಳು ದಾಖಲಾಗಿವೆ.

ಮೊದಲ ಪ್ರಕರಣದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಗರ್ಭಪಾತಕ್ಕೆ ಒತ್ತಾಯಿಸಿದ ಆರೋಪವಿದ್ದು, ಎರಡನೇ ದೂರು 2023ರಲ್ಲಿ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದೆ. ಆ ದೂರು ಇ-ಮೇಲ್ ಮೂಲಕ ದಾಖಲಾಗಿರುವುದಾಗಿ ತನಿಖಾ ಅಧಿಕಾರಿಗಳು ಹೇಳಿದ್ದಾರೆ. ಈ ಬೆಳವಣಿಗೆಗಳ ನಡುವೆ, ಕೇರಳ ಕಾಂಗ್ರೆಸ್‌ಗೆ ಇದು ದೊಡ್ಡ ರಾಜಕೀಯ ಚಿನ್ನದಸಿಂಹಾಸನ—ಒಂದು ಬದಿ ಕಾನೂನು ಹೋರಾಟ, ಇನ್ನೂ ಒಂದು ಬದಿ ಪಕ್ಷದ ಶಿಷ್ಟಾಚಾರ ಮತ್ತು ಚುನಾವಣಾ ಚಿಂತೆಗಳ ನಡುವೆ ಬಿರುಕುಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss