ಜಾನ್ವಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಸಂದರ್ಶನಗಳಲ್ಲಿ ಬಿಸಿಯಾಗ್ಬಿಟ್ಟಿದಾರೆ, ಅದ್ರಲ್ಲೂ ಗಿಲ್ಲಿ ವಿರುದ್ಧ ನೆಗೆಟಿವಿಟಿಯನ್ನ ಸ್ಪ್ರೆಡ್ ಮಾಡೋದ್ರಲ್ಲಿ ಸ್ವಲ್ಪ ಜಾಸ್ತಿನೇ ಬಿಸಿಯಾಗಿದ್ದಾರೆ, ಇದು ಸಾಕಷ್ಟು ಜನರ ಅಭಿಪ್ರಾಯ ..
ಗಿಲ್ಲಿ ಬಿಗ್ ಬಾಸ್ ಶೊಗೋಸ್ಕರ ತನ್ನ ವ್ಯಕ್ತಿತ್ವವನ್ನ ಚೇಂಜ್ ಮಾಡ್ಕೊಂಡಿದಾನೆ, ಅವ್ನು ಡ್ರಾಮಾ ಮಾಡ್ತಿದ್ದಾನೆ ಅನ್ನೋ ರೀತಿಯಾಗಿ ಜಾನ್ವಿಯವ್ರು ತಮ್ಮ ಸಾಕಷ್ಟು ಸಂದರ್ಶನಗಳಲ್ಲಿ ಹೇಳ್ಕೊಂಡಿದಾರೆ., ಗಿಲ್ಲಿ ಬಗ್ಗೆ ಒಂಚೂರ್ ಪಾಸಿಟಿವ್ ಆಗಿ ಏನಾದ್ರು ಹೇಳಿ ಅಂತ ಕೇಳ್ದಾಗ, ಗಿಲ್ಲಿ ಹೆಂಗೆ ಅಂತ ನೀವ್ ಕೇಳುದ್ರೆ ಬರಿ ಕಾಮಿಡಿ ಮಾಡ್ತಾನೆ ಅಂತ ಹೇಳಬಹುದೇ ಹೊರತು ಅದನ್ನ ಬಿಟ್ರೆ ಅವ್ನ್ ಬಗ್ಗೆ ಪಾಸಿಟಿವ್ ಅಂತ ಏನು ಹೇಳಕ್ಕಾಗಲ್ಲ,ಅವ್ನ ಕಾಮಿಡಿ ಸೆನ್ಸ್ ತುಂಬ ಚನ್ನಾಗಿದೆ, ರೋಸ್ಟ್ ಮಾಡೋವಾಗ ಚನ್ನಾಗ್ ಮಾಡ್ತಾನೆ ಅಂತಲೂ ಹೇಳಿದ್ದಾರೆ.
ಆದ್ರೆ ಅವ್ನು ತುಂಬಾ ಕಿಲಾಡಿ ಮನೆಯಲ್ಲಿ ಯಾವ್ದಾದ್ರು ಕೆಲಸವನ್ನ ಚನ್ನಾಗ್ಮಾಡುದ್ರೆ ಎಲ್ಲಿ ಮತ್ತೆ ನಂಗೆ ಹೇಳ್ತಾರೋ ಅಂತ ಯಾವ್ ಕೆಲಸವನ್ನೂ ಚನ್ನಾಗ್ ಮಾಡ್ತಿರ್ಲಿಲ್ಲ, ಗಿಲ್ಲಿ ಒಬ್ರನ್ನ ಕಾಲ್ ಎಳೆದು ಕುಗ್ಗಿಸಿ ನಮ್ಮನ್ನ ಕೆಟ್ಟವರನ್ನಾಗಿ ಮಾಡ್ತಾನೆ , ಆದ್ರೆ ಅವ್ನ ತಪ್ಪು ಯಾರ್ಗೂ ಗೊತ್ತಾಗಲ್ಲ ಅಂತ, ಗಿಲ್ಲಿ ಮುಖವಾಡ ಹಾಕ್ಕೊಂಡಿದಾನೆ, ಗಿಲ್ಲಿ ಇಷ್ಟೊಂದು ಆಕ್ಟಿವ್ ಅಲ್ಲ , ಅವ್ನು ಸೈಲೆಂಟ್ ಆದ್ರೆ ಬಿಗ್ ಬಾಸಲ್ಲಿ ಹೆಚ್ಚು ಕಾಣುಸ್ಕೊಬೇಕು ಅಂತ ಹೈಪರ್ ಆಕ್ಟಿವ್ ಆಗಿದ್ದಾನೆ, ಆದ್ರೂ ಈ ಸಲ ಬಿಗ್ ಬಾಸ್ ಗೆಲ್ಲೋದು ಗಿಲ್ಲಿನೇ , ಯಾಕಂದ್ರೆ ಅವನ ಮಂಡ್ಯ ಭಾಷೆ, ಅವನ ಕಾಮಿಡಿಯನ್ನ ಜನ ಎಂಜಾಯ್ ಮಾಡ್ತಿದ್ದಾರೆ , ಅವನ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡ್ತಿರೋವ್ರು ಎಲ್ ನೋಡುದ್ರೂ ಗಿಲ್ಲಿ ಕಂಟೆಂಟ್ಸ್ ಬರೋಹಾಗೆ ವರ್ಕ್ ಮಾಡ್ತಿದ್ದಾರೆ, ಹಾಗಾಗಿ ಗಿಲ್ಲಿ ಗೆಲ್ಲೋದು ಪಕ್ಕ ಅಂತಿದ್ದಾರೆ…..
ವರದಿ : ಗಾಯತ್ರಿ ಗುಬ್ಬಿ

