ದಾವಣಗೆರೆಯ ಮಲ್ಲಶೆಟ್ಟಿಹಳ್ಳಿಯಲ್ಲಿ ನಡೆದ ಹೃದಯವಿದ್ರಾವಕ ದುರಂತ… ರಾಟ್‌ವೀಲರ್ ನಾಯಿಗಳ ಭೀಕರ ದಾಳಿಗೆ 38 ವರ್ಷದ ಅನಿತಾ ಬಲಿಯಾದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ನಾಯಿಗಳು ಎಳೆದಾಡಿ ಕಚ್ಚಿದ ಪರಿಣಾಮ ರಕ್ತಸಿಕ್ತ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಬೆಂಗಳೂರಿಗೆ ಸಾಗಿಸುವ ಮಾರ್ಗದಲ್ಲಿ ಶಿರಾ ಬಳಿ ಅವರು ಕೊನೆಯುಸಿರೆಳೆದರು. ಐದು ವರ್ಷಗಳ ಹಿಂದೆ ಪತಿ ಸಾವು, ಈಗ ತಾಯಿ ಕೂಡ ಇಲ್ಲ… ಮೂವರು ಮುದ್ದು ಮಕ್ಕಳು ಸಂಪೂರ್ಣ ಅನಾಥರಾಗಿದ್ದಾರೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕಣ್ಣೀರಲ್ಲಿ, ಈ ಕ್ರೂರಿ ನಾಯಿಗಳನ್ನು ಬಿಟ್ಟು ಹೋದವರಲ್ಲಿ ಮನುಷ್ಯತ್ವ ಎಲ್ಲಿದೆ? ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಸರ್ಕಾರ ತಕ್ಷಣ ನೆರವಿಗೆ ಬರಬೇಕೆಂಬ ಮನವಿ ಗಟ್ಟಿಯಾಗಿ ಕೇಳಿಬರುತ್ತಿದೆ.




