DK – ಪ್ರಿಯಾಂಕ್ 3 ಭೇಟಿಗಳು : ಸಿಎಂ ಕುರ್ಚಿಗೆ ಸೀಕ್ರೆಟ್ ಪ್ಲ್ಯಾನ್

ರಾಜ್ಯದ ರಾಜಕೀಯ ವಾತಾವರಣದಲ್ಲಿ ಸಿಎಂ ಕುರ್ಚಿ ಪೈಪೋಟಿ ವಿಷಯ ಮೇಲ್ನೋಟಕ್ಕೆ ತಣ್ಣಗಾಗಿದೆ ಎಂದು ತೋರುತ್ತಿದ್ದರೂ… ಒಳಗೊಳಗೆ ದೊಡ್ಡ ರಾಜಕೀಯ ಚಟುವಟಿಕೆ ನಡೆಯುತ್ತಿದೆ ಎಂಬ ಚರ್ಚೆಗಳು ಮತ್ತೆ ಜೋರಾಗಿವೆ.

ಈ ಬಗ್ಗೆ ಅನುಮಾನ ಹೆಚ್ಚಿಸುವಂತೆ, ನಿನ್ನೆ ದೆಹಲಿಯಲ್ಲಿ ಏಕಾಏಕಿ ನಡೆದ ರಹಸ್ಯ ಸಭೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವಾರು ಪ್ರಮುಖ ನಾಯಕರು ಭಾಗವಹಿಸಿದ್ದು ರಾಜಕೀಯ ವಲಯದಲ್ಲಿ ಪ್ರಶ್ನೆಗಳನ್ನು ಎಬ್ಬಿಸಿದೆ.

ಇನ್ನೊಂದು ಕಡೆ, ಬೆಂಗಳೂರಿನ ಸದಾಶಿವನಗರದಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ ಘಟನೆ ಮತ್ತಷ್ಟು ಸಂಚಲನ ಸೃಷ್ಟಿಸಿದೆ. ಗಮನಿಸಬೇಕಾದ ವಿಷಯ ಏನೆಂದರೆ — ಕೇವಲ ಮೂರು ದಿನಗಳಲ್ಲಿ ಮೂರು ಬಾರಿ ಈ ಇಬ್ಬರು ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದಾರೆ. ಇಂದಿನ ಭೇಟಿಯಲ್ಲಿ ದೆಹಲಿಯ ರಹಸ್ಯ ಸಭೆಯಿಂದ ಯಾವುದಾದರೂ ವಿಶೇಷ ಸಂದೇಶ ಬಂದಿದೆಯೇ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಬಿರುಸಿನಿಂದ ಚರ್ಚೆಗೆ ಗ್ರಾಸವಾಗಿದೆ.

ಪದೇಪದೇ ನಡೆಯುತ್ತಿರುವ ಡಿಕೆಶಿ–ಪ್ರಿಯಾಂಕ್ ಭೇಟಿಗಳು, ಸಿಎಂ ಸ್ಥಾನ ಪೈಪೋಟಿ ಮತ್ತೆ ಬಿಸಿಯಾಗುತ್ತಿರುವ ಸೂಚನೆ ಎಂದು ರಾಜಕೀಯ ವೀಕ್ಷಕರು ವಿಶ್ಲೇಷಿಸುತ್ತಿದ್ದಾರೆ. ಆದರೆ ಇಂದಿನ ಮಾತುಕತೆಯಲ್ಲಿ ಏನೆಲ್ಲ ವಿಚಾರಗಳು ಚರ್ಚೆಯಾದವು ಎಂಬುದು ಪೂರ್ಣ ರಹಸ್ಯವೇ ಸತ್ಯ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author