ರಾಯಚೂರ ಜಿಲ್ಲೆಯ ದೇವದುರ್ಗ ತಾಲೂಕಿನ ಕಾಗಿನೆಲೆ ಕನಕ ಗುರು ಪೀಠ ತಿಂಥನಿ ಬ್ರಿಡ್ಜ್ ನಲ್ಲಿ ನಡೆದಿರುವ ಪೂರ್ವ ಭಾವಿ ಸಭೆಯಲ್ಲಿ ಮಾಜಿ ಶಾಸಕ ಕೆ ವಿರೂಪಾಕ್ಷಪ್ಪ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ನಮ್ಮ ಟ್ರಸ್ಟ್ ನ ಹಣೆಬರಹ ಹೇಗಾಗಿದೆ ಅಂದ್ರೆ 92 ರ ಸಂದರ್ಭದಲ್ಲಿ ಟ್ರಸ್ಟ್ ರಚನೆ ಮಾಡಲಾಗಿತ್ತು. ಹಿರಿಯ ಸ್ವಾಮಿಗಳು ಬೀರೇಂದ್ರ K ಮತ್ತು ದ್ವಾರಕನಂದ ಸ್ವಾಮಿಗಳು ಇರೋವರೆಗೆ ವ್ಯವಸ್ಥಿತವಾಗಿ ನಡೆದಿತ್ತು ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಪ್ರವೇಶದಿಂದಾಗಿ ಟ್ರಸ್ಟ್ ಸಭೆ ನಡೆಸಲಾರದಂತ ಪರಿಸ್ಥಿತಿಯಾಗಿ ಸುಮಾರು 20 ವರ್ಷಗಳವರೆಗೆ ನಿಷ್ಕ್ರಿಯವಾಯಿತು. ಅದಾದ ನಂತರ ಎರಡು ಮೂರು ತಿಂಗಳ ಹಿಂದೆ ಮತ್ತೊಂದು ಟ್ರಸ್ಟ್ ರಚನೆಯಾಗಿದೆ. ನನಗೂ ವಯಸ್ಸಾಗಿದೆ. ಸಮಾಜದ ಕೆಲಸ ಮಾಡ್ಬೇಕಾದ್ರೆ ಆ ಟ್ರಸ್ಟ್ ಮೆಂಬರೆ ಆಗ್ಬೇಕು… ಯಾವ ತರ ಅಧಿಕಾರ ಇರ್ಬೇಕು… ಅನ್ನೋದ ಪ್ರಶ್ನೆ ಅಲ್ಲಾ. ಸಮಾಜದ ಕೆಲಸ ಮಾಡಲಿಕ್ಕೆ ಸಾಕಷ್ಟು ಅವಕಾಶಗಳಿರತ್ತೆ.
ಸಮಾಜದ ಕೆಲಸ ನಾವು ಮುಂದೆವರೆಸುಕೊಂಡು ಹೋಗ್ತೇವೆ. ಆ ಟ್ರಸ್ಟ್ ನಲ್ಲಿ ನನ್ನನ್ನ ತೆಗೆದುಕೊಳ್ತಾರೋ, ಬಿಡ್ತಾರೋ ನಾನು ಕೇಳೋಕ್ಕೆ ಹೋಗೋದಿಲ್ಲ. ಯಾರನ್ನು ಕೂಡ ನನ್ನನ್ನ ಟ್ರಸ್ಟ್ ನಲ್ಲಿ ತಗೊಳ್ಳಿ ಅಂತ ನಾನು ಕೇಳೋದು ಇಲ್ಲಾ ಅಂತ ತಮ್ಮ ಆಕ್ರೋಶ ವನ್ನು ಹೊರಹಾಕಿದ್ದಾರೆ.
ವರದಿ : ಲಾವಣ್ಯ ಅನಿಗೋಳ




