ದೊಡ್ಮನೆಯಿಂದ ಪ್ರಭಲ ಸ್ಪರ್ದಿಯೇ ಔಟ್ ! ಬಿಗ್ ಟ್ವಿಸ್ಟ್ ಕೊಟ್ಟ ಜನತೆ !

ಬಿಗ್ ಬಾಸ್ ಮನೆಯಿಂದ ಈ ವಾರ ಯಾರ್ ಹೊರಗೆ ಬರ್ತಾರೆ ಅನ್ನೋ ಪ್ರಶ್ನೆಗೆ ಇದಾಗಲೇ ಉತ್ತರ ಸಿಗತೊಡಗಿದೆ, ಕಳೆದ ವಾರದಂತೆಯೇ ಈ ವಾರ ಕೂಡ ಶಾಕಿಂಗ್ ಎಲಿಮಿನೇಷನ್(Elimination) ಆಗಿದೆ ಅಂದ್ರೆ ತಪ್ಪಾಗೊದಿಲ್ಲ, ಯಾಕಂದ್ರೆ ಕಳೆದ ವಾರ ಮಾಳು , ಜಾನ್ವಿ(jahnavi) ಇಬ್ಬರ ಪೈಕಿ ಹೊರಗೆ ಬರೋದು ಮಾಳು ಅಂತ ನಾವೆಲ್ಲರೂ ತಿಳಿದಿದ್ದೆವು , ಆದ್ರೆ ಆ ನಿರೀಕ್ಷೆ ಸುಳ್ಳಾಗಿ ಪ್ರಭಲ ಕಂಟೆಸ್ಟೆಂಟ್(Contestent) ಆಗಿದ್ದ ಜಾನ್ವಿ ಅವರೇ ದೊಡ್ಮನೆಯಿಂದ ಹೊರಗೆ ಬಂದ್ರು ..

ಅದಾದ ಮೇಲೆ ದೃವಂತ್ ನನ್ನನ್ನು ಮನೆಯಿಂದ ಕಳಿಸಿ ಅಂತ ಮನವಿ ಮಾಡ್ಕೊಂಡು , ಈ ವಾರ ತಾವೇ ಮನೆಯಿಂದ ಹೊರಗೆ ಹೋಗೋದು ಅಂತ ಮೆಂಟಲಿ ತಯಾರಾಗಿದ್ರು , ಆದ್ರೆ ನೆನ್ನೆಯ ಸಂಚಿಕೆಯಲ್ಲಿ ಅವರೇ ಮೊದಲು ಸೇವ್ ಆಗಿ , ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ರು, ಜನತೆಯ ನಿರ್ಧಾರವೇ ಅಂತಿಮ ಅಂತ ದೃವಂತ್ ಮನೆಯಲ್ಲೇ ಉಳಿಯೋ ಹಾಗಾಗಿದೆ..

ಇನ್ನು ನಾಮಿನೇಷನ್ ಅಲ್ಲಿರೋದು ಕಾವ್ಯ , ರಕ್ಷಿತಾ , ಮಾಳು , ರಾಶಿಕಾ , ಸ್ಪಂದನ , ಸೂರಜ್ ಹಾಗು ಅಭಿಷೇಕ್(Abhishek), ಜನತೆಯ ವೋಟಿಂಗ್ ಆಧಾರದ ಮೇಲೆ ಈ ವಾರ ಅಭಿಷೇಕ್ ಎಲ್ಲರಿಗಿಂತ ಕಡಿಮೆ ವೋಟ್ಸ್ ಪಡೆದು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ, ಹೌದು ಅಭಿಷೇಕ್ ಹೊರಗೆ ಬಂದಿದ್ದಾರೆ ಅನ್ನೋದು ಒಂದು ರೀತಿಯ ಶಾಕಿಂಗ್ ಸತ್ಯವೇ ಸರಿ, ಆದರೆ ಜನತೆಯ ನಿರೀಕ್ಷೆಯನ್ನು ತಲುಪುವಲ್ಲಿ ಅಭಿಷೇಕ್ ಎಲ್ಲೊ ಹಿಂದುಳಿದಿದ್ದರೂ ಅನಿಸುತ್ತದೆ…

ವರದಿ : ಗಾಯತ್ರಿ ನಾಗರಾಜ್

 

About The Author