BJP ಸೋಲಿನ ಹಿಂದಿನ ಸತ್ಯ ಬಿಚ್ಚಿಟ್ಟ ಯತ್ನಾಳ್!

ಬಿಜೆಪಿ ಕಡಿಮೆ ಕ್ಷೇತ್ರ ಗೆಲ್ಲಲು ಗ್ಯಾರಂಟಿ ಕಾರಣ ಅಲ್ಲ ಅಂತ ಹೇಳಿ ಯತ್ನಾಳ್ ಸತ್ಯ ಬಿಚ್ಚಿಟ್ಟಿದ್ದಾರೆ. ಬಿಜಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬಿಜೆಪಿ ಕಡಿಮೆ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳು ಮಾತ್ರ ಕಾರಣವೆಂದು ಹೇಳುವುದು ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಆಡಳಿತ ವೈಫಲ್ಯ, ಹಿಂದೂ ಕಾರ್ಯಕರ್ತರ ನಿರ್ಲಕ್ಷ್ಯ ಮತ್ತು ಗಂಭೀರ ಘಟನೆಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡದಿರುವುದು ಪ್ರಮುಖ ಕಾರಣಗಳು ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿದ ಯತ್ನಾಳ್, ಪರೇಶ್ ಮೇಸ್ತ ಹತ್ಯೆ ಸೇರಿದಂತೆ ಮೈಸೂರು, ಶಿವಮೊಗ್ಗಗಳಲ್ಲಿ ನಡೆದ ಹಿಂದೂ ಕಾರ್ಯಕರ್ತರ ಮೇಲಿನ ದಾಳಿ–ಕೊಲೆ ಪ್ರಕರಣಗಳಲ್ಲಿ ಸರ್ಕಾರ ಮತ್ತು ಪಕ್ಷದ ನಾಯಕತ್ವ ಸೂಕ್ತ ಹಾಗೂ ಕಠಿಣ ಕ್ರಮ ತೆಗೆದುಕೊಳ್ಳದಿರುವುದರಿಂದ ಹಿಂದೂ ಕಾರ್ಯಕರ್ತರು ಬಿಜೆಪಿ ವಿರುದ್ಧ ಕೋಪಗೊಂಡರು ಎಂದು ಹೇಳಿದರು.

ಈ ಅಸಮಾಧಾನದಿಂದ ಹಲವಾರು ಕಾರ್ಯಕರ್ತರು ಪಕ್ಷದಿಂದ ದೂರ ಸರಿದಿದ್ದು, ಅದರ ಪರಿಣಾಮವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ದೊರೆಯಿತು. ಇದುವೇ ಕಾಂಗ್ರೆಸ್‌ ಪಕ್ಷಕ್ಕೆ ಲಾಭ ನೀಡಿದ ಪ್ರಮುಖ ಕಾರಣ ಎಂದು ಅವರು ವಿಶ್ಲೇಷಿಸಿದರು.

ಅದೇ ವೇಳೆ, ವಿಜಯೇಂದ್ರರ ನಿರಂತರ ಪ್ರಚಾರ ಮತ್ತು ‘ಜನರು ನಮ್ಮ ಮಾತಿನಂತೆ ಮತ ಹಾಕುತ್ತಾರೆ’ ಎಂಬ ಅತಿವಿಶ್ವಾಸವೂ ಪಕ್ಷಕ್ಕೆ ಹಿನ್ನಡೆ ತಂದಿತ್ತೆಂದು ಯತ್ನಾಳ್ ಹೇಳಿದರು. ಜನರು ಯಾರೂ ಹೇಳಿದಂತೆ ಮತ ಹಾಕುವುದಿಲ್ಲ. ನೆಲದ ಸತ್ಯವನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಕಾರ್ಯನೀತಿಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.

ಒಟ್ಟಾರೆ, ಸೋಲಿನ ಕಾರಣವನ್ನು ಹೊರಗಿನ ಅಂಶಕ್ಕೆ ನೀಡುವ ಬದಲು ಪಕ್ಷದ ಒಳಗಿನ ದೋಷಗಳನ್ನು ಒಪ್ಪಿಕೊಳ್ಳಿ ಸರಿಪಡಿಸಬೇಕು ಎಂದು ಯತ್ನಾಳ್ ಕಟುವಾಗಿ ಹೇಳಿದ್ದಾರೆ. ಈ ಬಗ್ಗೆ ನೀವೇನಂತೀರಿ ಕಾಮೆಂಟ್ ಮಾಡಿ ತಿಳಿಸಿ.

ವರದಿ : ಲಾವಣ್ಯ ಅನಿಗೋಳ

About The Author