ಕಾಂಗ್ರೆಸ್ ಪಾಳಯದಲ್ಲಿ ಪವರ್–ಶೇರಿಂಗ್ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲೇ, ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಮಾರ್ಮಿಕ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕುಣಿಗಲ್ ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದಲ್ಲಿ ಡಿಕೆ ಶಿವಕುಮಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಯತ್ನ ಮಾಡ್ತಾ ಇದ್ದೀವಿ… ಒಂದಲ್ಲೊಂದು ದಿನ ಗೆಲ್ಲಲೇಬೇಕು. ಕ್ರೀಡೆಯಲ್ಲಿ ಹೀಗೇ, ರಾಜಕೀಯದಲ್ಲೂ ಸೋಲು–ಗೆಲುವು ಸಹಜ. ಗೆದ್ದಿದ್ದೇವೆ ಎಂದು ಅಹಂಕಾರ ಬೇಡ, ಸೋತಿದ್ದೇವೆ ಎಂದು ಪ್ರಯತ್ನ ಬಿಡೋದೂ ಬೇಡ ಎಂದು ಹೇಳಿದರು. ಭಾಷಣಕ್ಕೂ ಮುನ್ನ, ಶಾಸಕ ಡಾ. ರಂಗನಾಥ್ ಬೌಲಿಂಗ್ ಗೆ ಸುರೇಶ್ ಬೌಂಡರಿ ಬಾರಿಸಿದ ಕ್ಷಣವು ಕಾರ್ಯಕ್ರಮದಲ್ಲಿ ಕುತೂಹಲ ಮೂಡಿಸಿತು.
ವೇದಿಕೆ ಮೇಲೆ ಇದ್ದ ಗಣ್ಯರು ಡಿ.ಕೆ. ಸುರೇಶ್ ಅವರ ಈ ಮಾತಿಗೆ ನಸು ನಗೆಯೊಂದಿಗೆ ಪ್ರತಿಕ್ರಿಯಿಸಿದರು. ಅವರು ಮುಂದುವರಿದು, ಎಲ್ಲಾ ಕಾರ್ಯಗಳಲ್ಲಿ ಸೋಲು–ಗೆಲುವು ಅವಿಭಾಜ್ಯ. ಕ್ರೀಡಾಪಟುಗಳಂತೆ ನಿರಂತರ ಪ್ರಯತ್ನ ಮುಖ್ಯ. ನಿಮ್ಮ ಆಶೀರ್ವಾದದಿಂದ ನನ್ನ ಪ್ರಯತ್ನವೂ ಮುಂದುವರಿಯುತ್ತದೆ ಎಂದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




