ಮ್ಯೂಚುವಲ್ ಫಂಡ್ ಶುಲ್ಕಗಳ ಸತ್ಯ! ರೆಗ್ಯುಲರ್ vs ಡೈರೆಕ್ಟ್ !

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ ಕೇವಲ ಹಣ ಹಾಕುವುದಷ್ಟೇ ಅಲ್ಲ, ಕೆಲವು ಶುಲ್ಕಗಳನ್ನೂ ತೆರಬೇಕಾಗುತ್ತದೆ. ಎಕ್ಸಿಟ್ ಲೋಡ್, ಟ್ರಾನ್ಸಾಕ್ಷನ್ ಚಾರ್ಜ್, ಎಕ್ಸ್‌ಪೆನ್ಸ್ ರೇಶಿಯೋ, ಸ್ವಿಚ್ ಪ್ರೈಸ್ ಮೊದಲಾದ ಶುಲ್ಕಗಳು ಸ್ಕೀಮ್‌ಗಳ ಪ್ರಕಾರ ಬದಲಾಗುತ್ತವೆ. ಹಿಂದಿನ ದಿನಗಳಲ್ಲಿ ಇದ್ದ ಎಂಟ್ರಿ ಲೋಡ್‌ನ್ನು ಸೆಬಿ ಈಗ ತೆಗೆದುಹಾಕಿದೆ.

ಎಕ್ಸಿಟ್ ಲೋಡ್ ಎಂದರೆ, ನೀವು ಹೂಡಿಕೆಯ ನಿರ್ದಿಷ್ಟ ಅವಧಿ ಮುಗಿಯುವ ಮೊದಲು ಹಣ ಹಿಂಪಡೆಯುವಾಗ ವಿಧಿಸುವ ಶುಲ್ಕ. ಸಾಮಾನ್ಯವಾಗಿ ಇದು ಒಂದು ವರ್ಷದ ಅವಧಿಗೆ ಅನ್ವಯಿಸುತ್ತದೆ. ಉದಾಹರಣೆಗೆ 1% ಎಕ್ಸಿಟ್ ಲೋಡ್ ಇದ್ದರೆ, ₹1 ಲಕ್ಷ ಹೂಡಿಕೆ ಮಾಡಿದವರು ಅವಧಿ ಮುಗಿಯುವ ಮೊದಲು ಹಣ ತೆಗೆದುಕೊಂಡರೆ ₹1,000 ಕಡಿತವಾಗುತ್ತದೆ. ಟ್ರಾನ್ಸಾಕ್ಷನ್ ಚಾರ್ಜ್‌ಗಳು ₹10,000 ಕ್ಕಿಂತ ಹೆಚ್ಚಿನ ಹೂಡಿಕೆಗೆ ಮಾತ್ರ ಅನ್ವಯವಾಗುತ್ತವೆ.

ಎಕ್ಸ್‌ಪೆನ್ಸ್ ರೇಶಿಯೋ ಮ್ಯುಚುವಲ್ ಫಂಡ್‌ನ ಅತ್ಯಂತ ಪ್ರಮುಖ ಶುಲ್ಕ. ಫಂಡ್ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್, ಸರ್ವಿಸ್ ಫೀ, ಡಿಸ್ಟ್ರಿಬ್ಯೂಶನ್ ಮೊದಲಾದ ಎಲ್ಲಾ ವೆಚ್ಚಗಳನ್ನು ಸೇರಿಸಿ ವಾರ್ಷಿಕವಾಗಿ ಈ ಶುಲ್ಕವನ್ನು ಎನ್‌ಎವಿಯೊಳಗೇ ಕಡಿತ ಮಾಡಲಾಗುತ್ತದೆ. ಫಂಡ್‌ ಗಾತ್ರ ಹೆಚ್ಚಾದಂತೆ ಎಕ್ಸ್‌ಪೆನ್ಸ್ ರೇಶಿಯೋ ಕಡಿಮೆಯಾಗುತ್ತದೆ. ಶೇ 2.25 ವರೆಗೂ ಇರಬಹುದಾದರೂ, ಸೆಬಿ ಗಾತ್ರದ ಮೇಲೆ ಮಿತಿ ನಿಗದಿ ಮಾಡಿದೆ.

ಒಂದು ಫಂಡ್‌ಗೆ ಡೈರೆಕ್ಟ್ ಪ್ಲಾನ್ ಮತ್ತು ರೆಗ್ಯುಲರ್ ಪ್ಲಾನ್ ಎರಡೂ ಲಭ್ಯ. ಡೈರೆಕ್ಟ್ ಪ್ಲಾನ್‌ನಲ್ಲಿ ಮಧ್ಯವರ್ತಿಗಳಿಲ್ಲದ ಕಾರಣ ಎಕ್ಸ್‌ಪೆನ್ಸ್ ರೇಶಿಯೋ ಕಡಿಮೆ. ಆದರೆ ರೆಗ್ಯುಲರ್ ಪ್ಲಾನ್‌ನಲ್ಲಿ ಕಮಿಷನ್‌ಗಳ ಕಾರಣ ಶುಲ್ಕ ಹೆಚ್ಚು. ಆದ್ದರಿಂದ ಡೈರೆಕ್ಟ್ ಪ್ಲಾನ್ 12% ರಿಟರ್ನ್ಸ್ ಕೊಟ್ಟರೆ, ಅದೇ ರೆಗ್ಯುಲರ್ ಪ್ಲಾನ್ ಸುಮಾರು 11% ರಿಟರ್ನ್ಸ್ ನೀಡಬಹುದು…

ವರದಿ : ಗಾಯತ್ರಿ ನಾಗರಾಜ್

About The Author