ಭಾರತದಲ್ಲಿ ಅತ್ಯಂತ ನಿರೀಕ್ಷೆಯ ಚಿತ್ರ ಎನ್ನಿಸಿಕೊಂಡಿರುವ ಯಶ್ ಅಭಿನಯದ ‘ಟಾಕ್ಸಿಕ್’(Toxic) ಈಗ ಮತ್ತೊಮ್ಮೆ ದೊಡ್ಡ ಸುದ್ದಿ ಮಾಡಿದೆ. ಸಾಕಷ್ಟು ಸಮಯ, ಶ್ರಮ ಮತ್ತು ಭಾರಿ ತಂಡದೊಂದಿಗೆ ಯಶ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರೀಕರಣದ ಅಪ್‌ಡೇಟ್‌ಗಳನ್ನು ಒಂದು ಮಟ್ಟಿಗೆ ರಹಸ್ಯವಾಗಿಟ್ಟಿದ್ದ ಚಿತ್ರತಂಡ, ಬಿಡುಗಡೆಯ ಹಾದಿಯಲ್ಲಿ ಒಂದರ ನಂತರ ಒಂದು ಸರ್ಪ್ರೈಸ್‌ಗಳನ್ನು ನೀಡುತ್ತಿದೆ.
ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಬಹುಷಃ ಯಶ್ ಆಗಿರಬಹುದಾದ ವ್ಯಕ್ತಿ ರಕ್ತದಿಂದ ತುಂಬಿರುವ ಬಾತ್‌ಟಬ್‌ನಲ್ಲಿ ಕುಳಿತಿರುವ ದೃಶ್ಯ ಗಾಢ, ಕ್ರೂರ ಮತ್ತು ವೈಲೆಂಟ್ ಟೋನ್‌ಗೆ ಸೂಚನೆ ಕೊಡುತ್ತಿದೆ. ಬಾತ್‌ಟಬ್‌ನ ಅಂಚುಗಳಲ್ಲಿ ಹರಿಯುತ್ತಿರುವ ರಕ್ತ, ಮಿನುಗುವ ಲೈಟ್‌ಗಳು , all together ಪೋಸ್ಟರ್‌ಗೆ ಹಾಲಿವುಡ್ ಮಟ್ಟದ ಇಂಟೆನ್ಸಿಟಿ ಕೊಡುತ್ತವೆ…
ಪೋಸ್ಟರ್ ಹಂಚಿಕೊಂಡ ಯಶ್(Yash), “ಕಾಲ್ಪನಿಕ ಕಥೆ ಬಿಡುಗಡೆ ಆಗಲು 100 ದಿನ ಬಾಕಿ ಇದೆ” KTV ಎಂದು ಬರೆದಿದ್ದು ಅಭಿಮಾನಿಗಳಲ್ಲಿ ಜೋಷ್ ಹೆಚ್ಚಿಸಿದೆ. ಮುಖ ತೋರಿಸದೇ ಕೇವಲ ಬೆನ್ನಿನ ಟ್ಯಾಟೂ ಮೂಲಕ ಕುತೂಹಲ ಹುಟ್ಟಿಸಿರುವ ಪೋಸ್ಟರ್ ಚಿತ್ರದ ಮಿಸ್ಟರಿ ಮತ್ತು ಡಾರ್ಕ್ ಥೀಮ್‌ನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ…
ಗೀತು ಮೋಹನ್‌ದಾಸ್ ನಿರ್ದೇಶನದ ಈ ಭಾರೀ ಬಜೆಟ್ ಚಿತ್ರಕ್ಕೆ ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಇದು ಕರ್ಣಾಟಕದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ಕಿಯಾರಾ ಅಡ್ವಾಣಿ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಮಾರ್ಚ್ 19ರಂದು ಪ್ರೇಕ್ಷಕರ ಮುಂದೆ ಬರಲಿದೆ….
ವರದಿ : ಗಾಯತ್ರಿ ನಾಗರಾಜ್




