ಬೆಂಗಳೂರು ‘ಪಿಂಕ್’ ಲೈನ್‌ಗೆ ಚಾಲಕ ರಹಿತ ಮೆಟ್ರೋ!

ನಮ್ಮ ಮೆಟ್ರೋದ ಬಹು ನಿರೀಕ್ಷಿತ ಯೋಜನೆಗಳಲ್ಲೊಂದಾದ ಪಿಂಕ್​​ ಲೈನ್​​ನಲ್ಲಿ ಸಂಚಾರ ಮಾಡಲಿರುವ ಚಾಲಕ ರಹಿತ ಮೊದಲ ರೈಲನ್ನು BMRCL ಬಿಡುಗಡೆ ಮಾಡಿದೆ. ಈ ರೈಲು ಡಿಸೆಂಬರ್ 15 ಅಥವಾ 16ಕ್ಕೆ ಕೊತ್ತನೂರು ಡಿಪೋ ತಲುಪಲಿದೆ. ಒಟ್ಟು 23 ಚಾಲಕರಹಿತ ರೈಲುಗಳಿಗೆ ಆರ್ಡರ್​ ನೀಡಲಾಗಿದ್ದು, 2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

ಪಿಂಕ್​​ ಲೈನ್​​ ಮೆಟ್ರೋ ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸಂಪರ್ಕ ಕಲ್ಪಿಸಲಿದ್ದು, 21 ಕಿಲೋ ಮೀಟರ್​​ ವಿಸ್ತೀರ್ಣ ಹೊಂದಿದೆ. 12 ಅಂಡರ್ ಗ್ರೌಂಡ್, 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಸೇರಿ 18 ನಿಲ್ದಾಣಗಳು ಈ ಮಾರ್ಗದಲ್ಲಿವೆ. 2026 ಮೇನಲ್ಲಿ ಕಾಳೇನ ಅಗ್ರಹಾರ ಟು ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್ ಓಪನ್ ಮಾಡಲು BMRCL ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. BEML​​ನಿಂದ ಐದು ರೈಲುಗಳು ಆಗಮಿಸುತ್ತಿದ್ದಂತೆ, ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.

ಪಿಂಕ್‌ ಲೈನ್​​ಗಾಗಿ ಒಟ್ಟು 23 ಚಾಲಕರಹಿತ ರೈಲುಗಳನ್ನು BEML ​​ಗೆ ಆರ್ಡರ್ ನೀಡಲಾಗಿದೆ. ಈ ಬಗ್ಗೆ BEML ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದೆ. ” ಮೇಕ್ ಇನ್ ಇಂಡಿಯಾ ಮೊಬಿಲಿಟಿಗೆ ಹೆಮ್ಮೆಯ ಕ್ಷಣ! ಬೆಂಗಳೂರಿನ ಮುಂಬರುವ ಹಂತ-2, 2A ಮತ್ತು 2B ಕಾರಿಡಾರ್‌ಗಳಿಗಾಗಿ ಅಭಿವೃದ್ಧಿಪಡಿಸಲಾದ ತನ್ನ ಅತ್ಯಾಧುನಿಕ ಚಾಲಕರಹಿತ ಮೆಟ್ರೋ ರೈಲು ಸೆಟ್ ನ ಮೂಲ ಮಾದರಿಯನ್ನು BEML ಲಿಮಿಟೆಡ್ ಇಂದು ಬಿಡುಗಡೆ ಮಾಡಿದೆ ಎಂದು ತಿಳಿಸಿದೆ.

ಈಗಾಗಲೇ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಗುಲಾಬಿ ಮತ್ತು ನೀಲಿ ಮಾರ್ಗಗಳಿಗಾಗಿ ಬಿಇಎಂಎಲ್ ಸಿದ್ಧಪಡಿಸಿದ ಹೊಸ ಚಾಲಕರಹಿತ ರೈಲು ಮಾದರಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 318 ಮೆಟ್ರೋ ಕಾರುಗಳನ್ನು ಪೂರೈಸುವ ಈ ಯೋಜನೆಯು 15 ವರ್ಷಗಳ ನಿರ್ವಹಣೆಯನ್ನು ಒಳಗೊಂಡಿದೆ. ಗುಲಾಬಿ ಮಾರ್ಗವು 2026ರ ಮೇ ವೇಳೆಗೆ, ನೀಲಿ ಮಾರ್ಗವು 2026ರ ಡಿಸೆಂಬರ್‌ಗೆ ಆರಂಭವಾಗುವ ನಿರೀಕ್ಷೆಯಿದೆ.

ವರದಿ : ಲಾವಣ್ಯ ಅನಿಗೋಳ

About The Author