DK Shivakumar Dinner Politics | ಸಿದ್ದು ಬೆನ್ನಲ್ಲೇ ಡಿಕೆಶಿ ಶಕ್ತಿ ಪ್ರದರ್ಶನ? 40 ನಾಯಕರು ಭಾಗಿ

DK Shivakumar Dinner Politics: ರಾಜ್ಯ ರಾಜಕೀಯದಲ್ಲಿ ಡಿನ್ನರ್‌ ಮೀಟಿಂಗ್‌ ಪಾಲಿಟಿಕ್ಸ್‌ ಭಾರೀ ಸದ್ದು ಮಾಡ್ತಿದೆ. ಚಳಿಗಾಲದ ಅಧಿವೇಶನ ಒಂದ್ಕಡೆಯಾದ್ರೆ, ಮತ್ತೊಂದೆಡೆ ಮೀಟಿಂಗ್‌ಗಳಲ್ಲಿ ನಾಯಕರೆಲ್ಲಾ ಬ್ಯುಸಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನವಷ್ಟೇ ಸಿದ್ದರಾಮಯ್ಯ-ಯತೀಂದ್ರ, ಡಿಕೆ ಶಿವಕುಮಾರ್‌-ಕೆಲ ನಾಯಕರು ಪ್ರತ್ಯೇಕವಾಗಿ ಮೀಟಿಂಗ್‌ ಮಾಡಿದ್ರು. ಇದು ಇಷ್ಟಕ್ಕೆ ಮುಗಿದಿಲ್ಲ. ನಿನ್ನೆ ರಾತ್ರಿಯೂ ಕೂಡ ಡಿನ್ನರ್‌ ಪಾಲಿಟಿಕ್ಸ್‌ ಮುಂದುವರೆದಿದೆ.

ಇನ್ನು, ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ನಿವಾಸದಲ್ಲಿ, ಸಿದ್ದರಾಮಯ್ಯ ಭೋಜನ ಕೂಟ ಇಟ್ಟುಕೊಂಡಿದ್ರು. ನಿನ್ನೆ ಗುರುವಾರ ಹಲವು ನಾಯಕರ ಜೊತೆ ಡಿಕೆಶಿ ತಡರಾತ್ರಿ ಡಿನ್ನರ್‌ ಸಭೆ ನಡೆಸಿದ್ದಾರೆ. ಆಪ್ತ ಗಣಿ ಉದ್ಯಮಿ ದೊಡ್ಡಣ್ಣವರ್ ಫಾರ್ಮ್‌ ಹೌಸ್‌ನಲ್ಲಿ, ಆಪ್ತ ಸಚಿವರು, ಶಾಸಕರ ಜೊತೆ ಸಭೆ ನಡೆಸಿದ್ದಾರೆ. ಡಿಕೆ ಸುರೇಶ್‌ ಈ ಡಿನ್ನರ್‌ ವ್ಯವಸ್ಥೆ ಮಾಡಿದ್ದರು.

ಡಿಕೆಶಿ ಔತಣಕೂಟದಲ್ಲಿ 10, 20, ಮೂವತ್ತೂ ಅಲ್ಲ. ಬರೋಬ್ಬರಿ 40ಕ್ಕೂ ಹೆಚ್ಚು ನಾಯಕರು ಭಾಗಿಯಾಗಿದ್ದರು ಎನ್ನಲಾಗಿದೆ. ಎಂ.ಸಿ ಸುಧಾಕರ್, ಮಂಕಾಳ ವೈದ್ಯ, ಕೆ.ಎಚ್. ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಎಂಎಲ್‌ಸಿ ಚೆನ್ನರಾಜ್ ಹಟ್ಟಿಹೊಳಿ, ಬಾಬಾಸಾಹೇಬ್ ಪಾಟೀಲ್, ಶಿವರಾಂ ಹೆಬ್ಬಾರ್, ಸಿ.ಪಿ ಯೋಗೇಶ್ವರ್, ಶ್ರೀನಿವಾಸ್ ಮಾನೆ, ಎನ್‌ಎ ಹ್ಯಾರೀಸ್, ಇಕ್ಬಾಲ್ ಹುಸೇನ್, ಗಣೇಶ್ ಹುಕ್ಕೇರಿ, ಎಸ್ ಟಿ ಸೋಮಶೇಖರ್, ಎಂಎಲ್‌ಸಿ ರವಿ, ಸೇರಿ 40ಕ್ಕೂ ಹೆಚ್ಚು ಶಾಸಕರು, ಸಚಿವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಔತಣಕೂಟದಲ್ಲಿ ಯತೀಂದ್ರಗೆ ನೋಟೀಸ್ ಕೊಡಿ ಎಂದು ಕೆಲ ಶಾಸಕರು, ಡಿಕೆಶಿಗೆ ಒತ್ತಡ ಹಾಕಿದ್ದಾರಂತೆ. ಈ ವೇಳೆ ಎಲ್ಲದ್ದಕ್ಕೂ ಸರಿಯಾಗಿ ಉತ್ತರ ಕೊಡುತ್ತೇನೆ. ಕಾಯಿರಿ ಎಂದು ಡಿಕೆಶಿ ತಿಳಿಸಿದ್ದಾರೆ ಎನ್ನಲಾಗಿದೆ.

About The Author