‘ಶಿವ-ವಿಷ್ಣು’ ಹೆಸರಿಂದಲೇ ಸಿದ್ದು ಜನ್ಮನಾಮ

ಸಿದ್ದ ಅಂದರೆ ಶಿವ, ರಾಮ ಅಂದರೆ ವಿಷ್ಣು ಶಿವ ಮತ್ತು ವಿಷ್ಣು ಹೆಸರಿನಿಂದಲೇ ನನ್ನ ಜನ್ಮನಾಮ ಸಿದ್ದ ರಾಮ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನನ್ನ ಹೆಸರಲ್ಲಿ ಶಿವನೂ ಇದ್ದಾನೆ, ವಿಷ್ಣುನೂ ಇದ್ದಾನೆ. ದೇವರು ಹಾಗೂ ಧರ್ಮಗಳು ದ್ವೇಷ ಹುಟ್ಟು ಹಾಕುವ ಕೆಲಸ ಮಾಡಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಧರ್ಮವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ದೇಶದಲ್ಲಿ ಶಿಕ್ಷಿತರಲ್ಲೇ ಹೆಚ್ಚಾಗಿ ಜಾತಿ ವ್ಯವಸ್ಥೆ ಕಾಣುತ್ತಿದ್ದೇವೆ. ಬಸವಣ್ಣನವರ ವಚನ ಹೇಳುತ್ತ ಜಾತಿ ಕೇಳುವ ಜನರು ನಮ್ಮ ಮುಂದೆ ಇದ್ದಾರೆ.

ಬಸವಣ್ಣನವರ ನಾಡಿನಲ್ಲಿ ಹುಟ್ಟಿ ನಾವು ಜಾತಿ ಆಚರಣೆ ಮಾಡು ತಿರುವುದು ದುರ್ದೈವ. ಸಮಾ ನತೆ ಸಮಾಜ ನಿರ್ಮಾಣ ಮಾಡ ಲು ವೈಜ್ಞಾನಿಕ ಮನೋಭಾವ ಅಗತ್ಯ, ಜಾತೀಯತೆ ಹೋಗಲಾಡಿಸಲು ಮೌಡ್ಯತೆ ಬಿಡಬೇಕು. ಮನುಷ್ಯ ಸಮಾಜ ನಿರ್ಮಾಣಕ್ಕೆ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಬೇಕು. ಶೈಕ್ಷಣಿಕ ಅವಧಿಯಲ್ಲೇ ಕಂದಾಚಾರ, ಮೌಡ್ಯತೆ ನಂಬದೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author