ನೀರು ಜೀವಕ್ಕೆ ಆಧಾರವಾಗಿದ್ದು, ಪಂಚಭೂತಗಳಲ್ಲಿ ಒಂದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ನೀರನ್ನು ಕೇವಲ ನೈಸರ್ಗಿಕ ಸಂಪನ್ಮೂಲವಲ್ಲ, ದೈವ ಸ್ವರೂಪ ಹಾಗೂ ಅಮೃತವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಆಚರಣೆಗಳು, ಶುಭಕಾರ್ಯಗಳು, ಗೃಹಪ್ರವೇಶದಿಂದ ಹಿಡಿದು ಹುಟ್ಟು–ಸಾವುಗಳವರೆಗೆ ನೀರಿಗೆ ವಿಶೇಷ ಮಹತ್ವವಿದೆ. ನಮ್ಮ ದೇಹದಲ್ಲೂ ನೀರಿನ ಅಂಶ ಹೆಚ್ಚಿರುವುದರಿಂದ, ನೀರಿಲ್ಲದೆ ಬದುಕು ಅಸಾಧ್ಯ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ..
ನೀರನ್ನು ಅತಿಯಾಗಿ ಬಳಸುವುದು ಅಥವಾ ವ್ಯರ್ಥ ಮಾಡುವುದರಿಂದ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ವಿಶೇಷವಾಗಿ ಸ್ನಾನಕ್ಕೆ ಅತಿಯಾದ ಸಮಯ ತೆಗೆದುಕೊಳ್ಳುವುದು, ಅನಗತ್ಯವಾಗಿ ನೀರನ್ನು ಹರಿಸುವುದು ಮನೆಗೆ ದಾರಿದ್ರ್ಯವನ್ನು ಆಹ್ವಾನಿಸುತ್ತದೆ ಎಂದು ಪುರಾಣಗಳು ಮತ್ತು ಹಿರಿಯರ ಅನುಭವಗಳು ಹೇಳುತ್ತವೆ. ಸ್ತ್ರೀ–ಪುರುಷ ಭೇದವಿಲ್ಲದೆ ಯಾರೇ ಅತಿಯಾಗಿ ನೀರನ್ನು ಬಳಸಿದರೂ ಅದರ ಪರಿಣಾಮ ಎದುರಾಗಬಹುದು ಎಂದು ಶಾಸ್ತ್ರಜ್ಞರು ಹೇಳುತ್ತಾರೆ..
ಆದ್ದರಿಂದ ನೀರಿನ ಬಳಕೆಯಲ್ಲಿ ಮಿತತ್ವ ಮತ್ತು ಹಿತತ್ವ ಅತ್ಯವಶ್ಯ. ನೀರನ್ನು ಕುಡಿಯುವಾಗಲೂ ನಿಧಾನವಾಗಿ, ಅಮೃತವೆಂದು ಭಾವಿಸಿ ಕುಡಿಯಬೇಕು. ಸಾಧ್ಯವಾದರೆ “ಅಮೃತೋಪಸ್ತ ಪರನಮಸಿ” ಎಂಬ ಮಂತ್ರವನ್ನು ಸ್ಮರಿಸುವುದು ಉತ್ತಮ. ನೀರನ್ನು ದೈವ ಸಮಾನವಾಗಿ ಗೌರವಿಸಿ, ವ್ಯರ್ಥ ಮಾಡದೇ ಬಳಸಿದರೆ ಮನೆಗೆ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ದೊರೆಯುತ್ತದೆ. ಈ ಅರಿವನ್ನು ಮುಂದಿನ ಪೀಳಿಗೆಗೂ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ…..
ವರದಿ : ಗಾಯತ್ರಿ ನಾಗರಾಜ್




