ಎಕ್ಸ್‌ಟೆಂಡ್ ಆಗುತ್ತಾ BBK12 ? ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ !

‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಯಾವಾಗ? ಎಂಬ ಪ್ರಶ್ನೆ ಈಗ ವೀಕ್ಷಕರಲ್ಲಿ ಜೋರಾಗಿದೆ. ಕೆಲ ವರದಿಗಳ ಪ್ರಕಾರ, ಜನವರಿ 17 ಹಾಗೂ 18ರಂದು ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆ ಇದೆ. ಶೋ ಆರಂಭವಾಗಿ ಈಗಾಗಲೇ 11 ವಾರಗಳು ಪೂರ್ಣಗೊಂಡಿದ್ದು, 12ನೇ ವಾರ ಚಾಲ್ತಿಯಲ್ಲಿದೆ.

ಸದ್ಯ ‘ಬಿಗ್ ಬಾಸ್’ ಮನೆಯಲ್ಲಿ ಒಟ್ಟು 13 ಮಂದಿ ಇದ್ದಾರೆ. ಫಿನಾಲೆ ವಾರಕ್ಕೆ ಕೇವಲ 6 ಮಂದಿ ಪ್ರವೇಶಿಸುವುದಾದರೆ, ಉಳಿದ 7 ಮಂದಿ ಕೇವಲ ಮೂರು ವಾರಗಳಲ್ಲಿ ಹೊರಬರಬೇಕಾಗುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ ಇಷ್ಟೊಂದು ಎಲಿಮಿನೇಷನ್‌ ಸಾಧ್ಯವೇ? ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ.

ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ “ಕೆಲವೇ ವಾರಗಳಲ್ಲಿ ಫಿನಾಲೆ ಬರುತ್ತದೆ” ಎಂದು ಹೇಳಿದ್ದು ಈ ಚರ್ಚೆಗೆ ಇನ್ನಷ್ಟು ಫ್ಯುಯೆಲ್ ತುಂಬಿದೆ. ಆದರೆ ಈ ಬಾರಿ ಥೀಮ್‌ ‘ಎಕ್ಸ್‌ಪೆಕ್ಟ್ ದಿ ಅನ್‌ಎಕ್ಸ್‌ಪೆಕ್ಟೆಡ್’ ಆಗಿರುವುದರಿಂದ, ಶೋ ಎರಡು ವಾರಗಳಷ್ಟು ಎಕ್ಸ್‌ಟೆಂಡ್ ಆಗುವ ಸಾಧ್ಯತೆಯನ್ನೂ ತಳ್ಳಿಹಾಕಲು ಆಗುವುದಿಲ್ಲ.

ಆಟ ಅಂತಿಮ ಹಂತ ತಲುಪುತ್ತಿರುವಾಗಲೇ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿಯನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಿರುವುದು ಹೊಸ ಟ್ವಿಸ್ಟ್ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಚ್ಚರಿ ತಿರುವುಗಳು ಎದುರಾಗುವ ಸಾಧ್ಯತೆ ಇದೆ. ಇದರೊಂದಿಗೆ ಆಟ ಇನ್ನಷ್ಟು ಕುತೂಹಲಕಾರಿಯಾಗುತ್ತಿದೆ.

ಮತ್ತೊಂದೆಡೆ, ‘ಬಿಗ್ ಬಾಸ್ ಕನ್ನಡ 12’ಗೆ ಉತ್ತಮ ಟಿಆರ್‌ಪಿ ಲಭಿಸುತ್ತಿದ್ದು, ವೀಕೆಂಡ್‌ ಎಪಿಸೋಡ್‌ಗಳಿಗೆ ಡಬಲ್ ಡಿಜಿಟ್‌ ರೇಟಿಂಗ್‌ ಸಿಗುತ್ತಿದೆ. ಈ ಕಾರಣದಿಂದಲೂ ಶೋ ಎಕ್ಸ್‌ಟೆಂಡ್ ಆಗುತ್ತಾ? ಅಥವಾ ನಿಗದಿತ ಸಮಯದಲ್ಲೇ ಫಿನಾಲೆ ನಡೆಯುತ್ತಾ? ಎಂಬುದನ್ನು ಕಾದುನೋಡಬೇಕಿದೆ….. ನಿಮಗೆ ಶೋ extend ಆಗ್ಬೇಕಾ ಅಥವಾ , ೧೦೦ ದಿನಕ್ಕೆ ಮುಗುದ್ರೆ ಒಳ್ಳೇದು ಅನ್ಸುತ್ತಾ ? ಕಾಮೆಂಟ್ ಮಾಡಿ…

ವರದಿ : ಗಾಯತ್ರಿ ನಾಗರಾಜ್

About The Author