ಅಹಿಂದ ಸಮೀಕರಣಕ್ಕೆ ‘ಹೊಸ ನಾಯಕ’

ಬೆಳಗಾವಿಯಿಂದ ಕಾಂಗ್ರೆಸ್ ರಾಜಕಾರಣಕ್ಕೆ ಮತ್ತೆ ಒಂದು ಹಳೆಯ ಹೊಸ ಮೆನು ಸರ್ವ್ ಆಗಿದೆ. ಹೆಸರು ಡಿನ್ನರ್… ಆದರೆ ಅರ್ಥ ಪವರ್… ಪ್ಲೇಟ್‌ನಲ್ಲಿ ಆಹಾರ ಇದ್ದರೂ, ಒಳಗಿರುವುದು ಕುರ್ಚಿಯ ಲೆಕ್ಕಾಚಾರ. ಬೆಳಗಾವಿಯಲ್ಲಿ ನಡೆಯುತ್ತಿರುವುದು ಕೇವಲ ಔತಣಕೂಟಗಳ ಸರಣಿ ಅಲ್ಲ… ಅದು ಕಾಂಗ್ರೆಸ್ ಒಳರಾಜಕಾರಣದ ತೀವ್ರ ಕಂಪನ. ಡಿನ್ನರ್ ಮೀಟಿಂಗ್, ಬ್ರೇಕ್‌ಫಾಸ್ಟ್ ಸಭೆಗಳ ಹಿಂದೆ ಮರೆಮಾಡಿರುವುದು ಮುಖ್ಯಮಂತ್ರಿ ಕುರ್ಚಿಯ ಲೆಕ್ಕಾಚಾರ. ಒಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಶಿಬಿರದ ಚಲನವಲನ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಬಣದ ತಂತ್ರಗಾರಿಕೆ.

ಇದೀಗ ಇವರ ಮಧ್ಯೆ ಮೂರನೇ ವ್ಯಕ್ತಿ ಸಚಿವ ಸತೀಶ್ ಜಾರಕಿಹೊಳಿ ಅವರ ಎಸ್‌ಸಿ/ಎಸ್‌ಟಿ ಶಾಸಕರ ಪ್ರತ್ಯೇಕ ಡಿನ್ನರ್ ಕೂಟ. ಇವೆಲ್ಲವೂ ಒಂದೇ ಪ್ರಶ್ನೆಗೆ ದಾರಿ ಮಾಡಿಕೊಡುತ್ತಿವೆ. ಅಹಿಂದ ಸಮೀಕರಣ, ದಲಿತ–ಆದಿವಾಸಿ ಒಗ್ಗಟ್ಟು, ಸಿಎಂ ರೇಸ್‌ನ ಹೊಸ ಹೆಸರುಗಳು… ಬೆಳಗಾವಿಯಲ್ಲಿ ಬಡಿದಾಡುತ್ತಿರುವುದು ರಾಜಕೀಯ ತಂತ್ರಗಳ ಹೊಟ್ಟೆಕಿಚ್ಚು. ಈ ಡಿನ್ನರ್ ಪಾಲಿಟಿಕ್ಸ್ ಬೆಂಗಳೂರು ರಾಜಕಾರಣದ ತಾಪಮಾನವನ್ನು ಎಷ್ಟು ಹೆಚ್ಚಿಸಲಿದೆ ಎಂಬುದೇ ಈಗ ದೊಡ್ಡ ಕುತೂಹಲ. ಹಾಗಾದ್ರೆ ಇದರ ಹಿಂದಿರುವ ಅಸಲಿ ಕಹಾನಿ ಏನು? ಅನ್ನೋದನ್ನ ಈ ವಿಎಡೊದಲ್ಲಿ ನೋಡ್ತಾ ಹೋಗೋಣ.

ಕಾಂಗ್ರೆಸ್‌ನಲ್ಲಿ ಈಗ ನಾಯಕತ್ವ ಬದಲಾವಣೆ ಮಾತು ಜೋರಾಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಒಳಗಡೆ ಮೌನ ಯುದ್ಧ ನಡೆಯುತ್ತಿದೆ. ಅದೇ ಸಮಯದಲ್ಲಿ ರಾಜ್ಯ ರಾಜಕಾರಣವನ್ನು ಕುದಿಸುವಂತೆ ಡಿನ್ನರ್ ಮೀಟಿಂಗ್, ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಿವೆ. ಮೊದಲು ಡಿಸಿಎಂ ಡಿಕೆ ಶಿವಕುಮಾರ್ ಅವರ ಡಿನ್ನರ್ ಪಾರ್ಟಿ. ನಂತರ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್. ಮತ್ತೆ ಡಿಕೆಶಿ ಮನೆಯಲ್ಲಿ ಮತ್ತೊಂದು ಬ್ರೇಕ್‌ಫಾಸ್ಟ್. ಇಷ್ಟಕ್ಕೆಲ್ಲ ಅರ್ಥ ಏನು? ಇದು ಕೇವಲ ಸ್ನೇಹದ ಊಟವೇ… ಅಥವಾ ಕುರ್ಚಿಗಾಗಿ ನಡೆಯುತ್ತಿರುವ ಗುಪ್ತ ಸಂಧಾನವೇ? ಯಾಕೆ ಮತ್ತೆ ಈ ವಿಚಾರ ಬರ್ತಾಯಿದೆ ಅಂದ್ರೆ ಈಗ ಈ ಎಲ್ಲಾ ಊಹೆಗಳಿಗೆ ಮತ್ತಷ್ಟು ಬೆಂಕಿ ಹಚ್ಚಿರುವುದು ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರತ್ಯೇಕ ಡಿನ್ನರ್ ಮೀಟಿಂಗ್.

ಯಸ್ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಎಸ್‌ಸಿ/ಎಸ್‌ಟಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗಾಗಿ ಆಯೋಜಿಸಿದ ಈ ಭೋಜನ ಕೂಟ ಸಾಧಾರಣ ಸಾಮಾಜಿಕ ಕಾರ್ಯಕ್ರಮವಾ?… ಅಲ್ಲ… ರಾಜಕೀಯ ವಲಯದಲ್ಲಿ ಇದು “ಸಾಧಾರಣ ಡಿನ್ನರ್ ಅಲ್ಲ” ಎಂಬ ಅನುಮಾನ ಗಟ್ಟಿಯಾಗಿ ಕೇಳಿಬರುತ್ತಿದೆ. ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದೇ ವೇಳೆ ಬ್ರೇಕ್​ ಫಾಸ್ಟ್​ ಮೀಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ. ಕಳೆದ ಕೆಲ ದಿನದ ಹಿಂದೆ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್​ ಫಾಸ್ಟ್​ ಮೀಟಿಂಗ್​ ಆಯೋಜನೆ ಮಾಡಲಾಗಿತ್ತು.

ಡಿಸಿಎಂ ಡಿ.ಕೆ ಶಿವಕುಮಾರ್​​ ಬ್ರೇಕ್​ ಫಾಸ್ಟ್​ ಮೀಟಿಂಗ್​ಗೆ ಆಗಮಿಸಿದ್ದರು. ನಂತರ ಮತ್ತೆ ​ಡಿಕೆಶಿ ನಿವಾಸದಲ್ಲಿ ಬ್ರೇಕ್​ ಫಾಸ್ಟ್​ ಮೀಟಿಂಗ್ ನಡೆದಿದೆ. ಇಷ್ಟೆಲ್ಲ ಕುರ್ಚಿ ಗುದ್ದಾಟದ ನಡುವೆ ಸಿದ್ದರಾಮಯ್ಯ ಮತ್ತು ಡಿಕೆಶಿ ಈ ರೀತಿಯಾಗಿ ಮೀಟಿಂಗ್ ಮಾಡಿದ್ದೂ ಕುತೂಹಲ ಕೆರಳಿಸಿದೆ. ಇಬ್ಬರ ನಡುವೆ ನಡೆದ ಅಸಲಿ ಮಾತುಕತೆ ಏನಿರಬಹುದು ಅಂತ ಜನರ ತಲೆಗೆ ಹುಳು ಬಿಟ್ಟಂತಾಗಿದೆ. ರಾಜ್ಯದಲ್ಲಿ ಪದೇ ಪದೇ ಡಿನ್ನರ್ ಮೀಟಿಂಗ್ ಗಳು, ಬ್ರೇಕ್ ಫಾಸ್ಟ್ ಮೀಟಿಂಗ್ ಗಳು ನಡೀತಾನೆಯಿವೆ. ಈ ನಡುವೆ ಮಂಗಳವಾರ ರಾತ್ರಿ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಈ ಡಿನ್ನರ್ ಮೀಟಿಂಗ್‌ಗೆ ಎಸ್‌ಸಿ/ಎಸ್‌ಟಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಆಹ್ವಾನ ನೀಡಲಾಗಿತ್ತು.

ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಮತ್ತೆ ಜೀವ ಪಡೆಯುತ್ತಿರುವ ಈ ಸಮಯದಲ್ಲಿ, ಈ ಔತಣಕೂಟಕ್ಕೆ ವಿಶೇಷ ಮಹತ್ವ ಸಿಕ್ಕಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ವಿವಿಧ ಬಣಗಳು ಚಟುವಟಿಕೆಯಾಗುತ್ತಿರುವ ಹೊತ್ತಲ್ಲೇ, ಸತೀಶ್ ಜಾರಕಿಹೊಳಿ ಈ ರೀತಿಯ ಪ್ರತ್ಯೇಕ ಸಭೆ ಆಯೋಜಿಸಿರುವುದು ‘ಇದೊಂದು ಸರಳ ಭೋಜನ ಕೂಟ ಅಲ್ಲ’ ಎಂಬ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ತಮ್ಮ ಆಪ್ತರೊಬ್ಬರ ಮೂಲಕ ಶಾಸಕರಿಗೆ ಡಿನ್ನರ್ ಪಾರ್ಟಿ ಹಮ್ಮಿಕೊಂಡಿದ್ದರು. ಆ ಔತಣಕೂಟದಲ್ಲಿ ಡಿಕೆಶಿ ಕ್ಯಾಂಪ್‌ಗೆ ಸೇರಿದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಭಾಗವಹಿಸಿದ ಶಾಸಕರು, “ಇದು ರಾಜಕೀಯ ಸಭೆಯಲ್ಲ, ಕೇವಲ ಆಪ್ತರ ಆಹ್ವಾನಕ್ಕೆ ಸ್ಪಂದಿಸಿ ಬಂದಿದ್ದೇವೆ” ಎಂದು ಸ್ಪಷ್ಟನೆ ನೀಡಿದ್ದರು. ಆದರೂ, ಸಿದ್ದರಾಮಯ್ಯ ಬಣದ ಶಾಸಕರು ಆ ಡಿನ್ನರ್ ಮೀಟಿಂಗ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ ಎಂಬ ವಿಚಾರವೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಸಿದ್ಧರಾಮಯ್ಯ ನಾಯಕ. ಎರಡು ಬಾರಿ ಮುಖ್ಯಮಂತ್ರಿ ಆಗಿರುವ ಅವರು ಅಹಿಂದ ಬ್ಯಾಕ್‌ಬೋನ್ ಎಂಬ ದೊಡ್ಡ ಸಾಮಾಜಿಕ ಸಮೀಕರಣವನ್ನು ಕೈಯಲ್ಲಿ ಹಿಡಿದಿರುವರು. ಅವರ ಶೈಲಿ—ನೆಲಮಟ್ಟದಲ್ಲಿ ಜನರನ್ನೇ ಮಾತನಾಡಿಸುವುದು ಇದು ಜನರಿಗೆ ಇಷ್ಟವಾಗತ್ತೆ. ಅವರ ಬೆಂಬಲಿಗರ ವಾದ ಇಷ್ಟೇ ಸದ್ಯದ ಸರ್ಕಾರ ಉತ್ತಮ ಆಡಳಿತ ಕೊಡುತ್ತಿದ್ದರೆ, ಮಧ್ಯದಲ್ಲಿ ಬದಲಾವಣೆ ಯಾಕೆ? ಚುನಾವಣಾ ಸೆಟಪ್ ಗೆ stability ಬೇಕು. ಜನರಿಗೆ ಸರ್ಕಾರ steady ಇರಬೇಕು.

ಆದರೆ, ಇನ್ನೊಂದು ಕಡೆ ಡಿಕೆ ಶಿವಕುಮಾರ್. ಸಂಘಟನೆ, ಹಣಕಾಸು, ಪ್ರಭಾವ, ಗಟ್ಟಿಯಾದ ಒಕ್ಕಲಿಗ ನೆಲ—ಇವೆಲ್ಲವನ್ನು ತಮ್ಮತ್ತ ಸೆಳೆದಿರುವ ರಾಜಕೀಯ ಮೇತ್ರಿ ಡಿಕೆಶಿ. ಕಾಂಗ್ರೆಸ್ ಪಕ್ಷದ ಸಮಯದಲ್ಲಿ KPCC ಅಧ್ಯಕ್ಷರಾಗಿ ಅವರು ಮಾಡಿದ ಕೆಲಸವನ್ನು ಪಕ್ಷದೊಳಗೆ ಯಾರೂ ನಕಾರ ಮಾಡಲು ಸಾಧ್ಯವಿಲ್ಲ. “ಬಲದ ಹಣೆಬರಹ” ಎಲ್ಲರೂ ಅವರತ್ತ ಒಂದೊಂದು ಕಾರ್ಡ್‌ ಹಿಡಿದು ನಿಂತಿದ್ದಾರೆ.

DK ಬಣದ ವಾದ ಏನಂದ್ರೆ ನಾವು ತ್ಯಾಗ ಮಾಡಿದ್ದೇವೆ, ನಾವು ಶ್ರಮ ಪಟ್ಟಿದ್ದೇವೆ, ನಮಗಿರುವ ಬೆಂಬಲದಿಂದ ಕಾಂಗ್ರೆಸ್ ಮತ್ತೆ ಬದುಕಿದೆ. ಹೀಗಾಗಿ DK CM ಸ್ಥಾನಕ್ಕೆ ಅರ್ಹರು. DK CM ಆಗ್ಬೇಕು ಅನ್ನೋ ಘೋಷಣೆ ಕೇಳಿಸುತ್ತಿರುವುದು ಕೇವಲ ಸಾಂದರ್ಭಿಕ ಉತ್ಸಾಹವಲ್ಲ. ಅದು ಸಂಘಟನೆ ಒಳಗಿನ ಶಕ್ತಿಯ ಪ್ರದರ್ಶನ.

ಈ ಹಿನ್ನೆಲೆಯಲ್ಲಿ ಎರಡು ಸಲ ನಡೆದ ಬ್ರೇಕ್‌ಫಾಸ್ಟ್ ರಾಜಕಾರಣ ಹೆಚ್ಚು ಸುದ್ದಿಗೆ ಕಾರಣವಾಯಿತು. ಈಗ ಮತ್ತೆ ಬೆಳಗಾವಿಯಲ್ಲಿ ನಡೆದಿರುವಂತಹ ಈ ಡಿನ್ನರ್ ಮೀಟಿಂಗ್ ನಾನು ಇದೀನಿ ಇಲ್ಲಿ ಸ್ವಲ್ಫ ನೋಡಿ ಅಂತ 3 ನೇ ಆಯ್ಕೆಯನ್ನ ತಳ್ತಾ ಇದ್ಯಾ? ಅನ್ನೋದು ಪ್ರಶ್ನಾರ್ಥಕವಾಗಿದೆ. ಇಲ್ಲಿ ಬಲಾಬಲ ಅಲ್ಲ ಜನ ಬಲ ಬೇಕು. ಹಾಗಾಗಿ ಸಚಿವ ಸತೀಶ ಜಾರಕಿಹೊಳಿ ಎಸ್‌ಸಿ/ಎಸ್‌ಟಿ ಶಾಸಕರ ವಿಶ್ವಾಸ ಗಳಿಸಲು ಈ ರೀತಿಯ ಔತಣಕೂಟ ಏರ್ಪಡಿಸಿದ್ರಾ ಅನ್ನೋ ಕುತೂಹಲ ಹೆಚ್ಚಾಗಿದೆ.

ಇದೇ ಹಿನ್ನಲೆಯಲ್ಲಿ ಇದೀಗ ಸತೀಶ್ ಜಾರಕಿಹೊಳಿ ಹಮ್ಮಿಕೊಂಡಿರುವ ಎಸ್‌ಸಿ/ಎಸ್‌ಟಿ ಶಾಸಕರ ಪ್ರತ್ಯೇಕ ಡಿನ್ನರ್ ಮೀಟಿಂಗ್ ಇನ್ನಷ್ಟು ರಾಜಕೀಯ ಅರ್ಥಗಳನ್ನು ಹುಟ್ಟುಹಾಕುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ರೇಸ್‌ನಲ್ಲಿ ಸತೀಶ್ ಜಾರಕಿಹೊಳಿ ಹೆಸರು ಈಗಾಗಲೇ ಚರ್ಚೆಯಲ್ಲಿದೆ. ನಾಯಕತ್ವ ಬದಲಾವಣೆ ಸದ್ದು ಆರಂಭವಾದಾಗಿನಿಂದಲೇ ಅವರು ಕೂಡಾ ಸಿಎಂ ರೇಸ್‌ನಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಿರುವಾಗಲೇ ಎಸ್‌ಸಿ/ಎಸ್‌ಟಿ ಶಾಸಕರ ವಿಶ್ವಾಸ ಗಳಿಸಲು ಈ ರೀತಿಯ ಔತಣಕೂಟ ಏರ್ಪಡಿಸಲಾಗಿದೆ ಎಂಬ ವಾದ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಈ ಹಿಂದೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಪರವಾಗಿ ಮಾತನಾಡಿದ್ದದ್ದು ಕಾಂಗ್ರೆಸ್‌ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ‘ಅಹಿಂದ ನಾಯಕತ್ವ ವಹಿಸಲು ಸತೀಶ್ ಜಾರಕಿಹೊಳಿ ಸೂಕ್ತ ವ್ಯಕ್ತಿ’ ಎಂಬ ಯತೀಂದ್ರ ಅವರ ಹೇಳಿಕೆ, ಸತೀಶ್ ಅವರ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿತ್ತು. ಇದೀಗ ಎಸ್‌ಸಿ/ಎಸ್‌ಟಿ ಶಾಸಕರಿಗೆ ಪ್ರತ್ಯೇಕ ಡಿನ್ನರ್ ಕೂಟ ಹಮ್ಮಿಕೊಂಡಿರುವುದು, ಆ ಅಹಿಂದ ಸಮೀಕರಣದ ಭಾಗವೇ ಎಂಬ ಪ್ರಶ್ನೆಯೂ ಸಹ ಎದ್ದಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ನಡೆಯುವ ಯಾವುದೇ ಸಂದರ್ಭದಲ್ಲೂ ಎಸ್‌ಸಿ/ಎಸ್‌ಟಿ ಶಾಸಕರ ಬೆಂಬಲ ಅತ್ಯಂತ ನಿರ್ಣಾಯಕವಾಗಿರುತ್ತದೆ. ಅದಕ್ಕಾಗಿಯೇ ಈ ವರ್ಗದ ಶಾಸಕರ ವಿಶ್ವಾಸ ಗಳಿಸುವ ಪ್ರಯತ್ನಗಳು ಇದೀಗ ಜೋರಾಗಿವೆ ಎನ್ನಲಾಗುತ್ತಿದೆ. ಸತೀಶ್ ಜಾರಕಿಹೊಳಿ ಅವರ ಈ ನಡೆ, ದಲಿತ ಮತ್ತು ಆದಿವಾಸಿ ನಾಯಕತ್ವದ ಒಗ್ಗಟ್ಟಿನ ಸಂದೇಶ ನೀಡುವ ಪ್ರಯತ್ನವೇ? ಅಥವಾ ಭವಿಷ್ಯದ ರಾಜಕೀಯ ಹೆಜ್ಜೆಗಳಿಗೆ ನೆಲ ಸಿದ್ಧಪಡಿಸುವ ತಂತ್ರವೇ? ಎಂಬ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತಿವೆ.

ಒಟ್ಟಿನಲ್ಲಿ, ಕಾಂಗ್ರೆಸ್‌ನಲ್ಲಿ ಈಗ ಡಿನ್ನರ್ ಮೀಟಿಂಗ್, ಬ್ರೇಕ್‌ಫಾಸ್ಟ್ ಮೀಟಿಂಗ್‌ಗಳು ಕೇವಲ ಆಹಾರದ ವಿಷಯವಾಗಿಲ್ಲ. ಅವು ರಾಜಕೀಯ ಸಂದೇಶ, ಬಲ ಪ್ರದರ್ಶನ ಮತ್ತು ಭವಿಷ್ಯದ ನಾಯಕತ್ವ ಸಮೀಕರಣಗಳ ಸಂಕೇತವಾಗಿ ಪರಿಗಣಿಸಲಾಗುತ್ತಿದೆ. ನಾಯಕತ್ವ ಬದಲಾವಣೆ ಗದ್ದಲ ತೀವ್ರಗೊಳ್ಳುತ್ತಿರುವಂತೆ, ಇಂತಹ ಔತಣಕೂಟಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಕಾಂಗ್ರೆಸ್‌ ಒಳರಾಜಕಾರಣದ ತೀವ್ರತೆಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ಮುಂದಿನ ದಿನಗಳಲ್ಲಿ ಈ ಡಿನ್ನರ್ ರಾಜಕೀಯ ಯಾವ ತಿರುವು ಪಡೆಯಲಿದೆ? ಸತೀಶ್ ಜಾರಕಿಹೊಳಿ ಅವರ ಈ ನಡೆ ಕಾಂಗ್ರೆಸ್‌ನ ಒಳಸಮೀಕರಣದಲ್ಲಿ ಯಾವ ಪರಿಣಾಮ ಬೀರುತ್ತದೆ? ಎಸ್‌ಸಿ/ಎಸ್‌ಟಿ ಶಾಸಕರ ಒಗ್ಗಟ್ಟು ಯಾವ ದಿಕ್ಕಿನಲ್ಲಿ ಸಾಗಲಿದೆ? ಎಂಬ ಪ್ರಶ್ನೆಗಳ ಉತ್ತರಗಳು ರಾಜಕೀಯ ವಲಯದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಬೆಳಗಾವಿಯಲ್ಲಿ ಆರಂಭವಾದ ಈ ಡಿನ್ನರ್ ಪಾಲಿಟಿಕ್ಸ್, ಬೆಂಗಳೂರಿನ ರಾಜಕೀಯ ಗದ್ದಲಕ್ಕೆ ಎಷ್ಟು ತಾಪಮಾನ ಹೆಚ್ಚಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಒಂದೆಡೆ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಜೀವ ಪಡೆದಿವೆ. ಮತ್ತೊಂದೆಡೆ ಮುಖ್ಯಮಂತ್ರಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಕೂಡ ರೇಸ್‌ನಲ್ಲಿ ಕೇಳಿಬರುತ್ತಿದೆ. ಅಂತಹ ಸಂದರ್ಭದಲ್ಲಿ ಎಸ್‌ಸಿ/ಎಸ್‌ಟಿ ಶಾಸಕರನ್ನು ಪ್ರತ್ಯೇಕವಾಗಿ ಸೇರಿಸಿ ಭೋಜನಕೂಟ ನಡೆಸಿರುವುದು ಯಾವುದರ ಸೂಚನೆ? ಎಂಬಂತಾಗಿದೆ. ಇದು ಎಸ್‌ಸಿ/ಎಸ್‌ಟಿ ಶಾಸಕರ ವಿಶ್ವಾಸ ಗಳಿಸುವ ಪ್ರಯತ್ನವಾ? ಅಥವಾ ಅಹಿಂದ ಸಮೀಕರಣಕ್ಕೆ ಹೊಸ ರೂಪ ನೀಡುವ ತಂತ್ರವೇ? ಅಥವಾ ಮುಂದಿನ ದಿನಗಳ ರಾಜಕೀಯ ಹೆಜ್ಜೆಗಳಿಗೆ ನೆಲ ಸಿದ್ಧಪಡಿಸುವ ಮುಂಚೂಣಿ ಯತ್ನವೇ? ಅನ್ನೋದು ಗೊತ್ತಾಗ್ತಿಲ್ಲ.

ಇದಕ್ಕೂ ಮೊದಲು ಯತೀಂದ್ರ ಸಿದ್ದರಾಮಯ್ಯ ಅವರು ಅಹಿಂದ ನಾಯಕತ್ವಕ್ಕೆ ಸತೀಶ್ ಜಾರಕಿಹೊಳಿ ಸೂಕ್ತ ವ್ಯಕ್ತಿ ಎಂದು ಹೇಳಿದ್ದ ಮಾತು ಇಂದಿಗೂ ಕಾಂಗ್ರೆಸ್ ವಲಯದಲ್ಲಿ ಚರ್ಚೆಯಲ್ಲಿದೆ. ಅದೇ ಹಿನ್ನೆಲೆ ನೋಡಿದರೆ, ಈ ಡಿನ್ನರ್ ಮೀಟಿಂಗ್ ಇನ್ನಷ್ಟು ರಾಜಕೀಯ ಅರ್ಥಗಳನ್ನು ಹೊತ್ತುಕೊಂಡಂತಿದೆ. ಹಾಗಾದ್ರೆ ರಾಜಕೀಯ ವಿಶ್ಲೇಷಕರು ಹೇಳುವುದೇನು? ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ನಡೆಯಬೇಕಾದರೆ ಎಸ್‌ಸಿ/ಎಸ್‌ಟಿ ಶಾಸಕರ ಬೆಂಬಲವೇ ನಿರ್ಣಾಯಕ. ಹೀಗಿರುವಾಗಲೇ ಈ ವರ್ಗದ ಶಾಸಕರನ್ನು ಒಗ್ಗೂಡಿಸುವ ಪ್ರಯತ್ನಗಳು ಜೋರಾಗಿವೆ.

ಒಟ್ಟಿನಲ್ಲಿ, ಇಂದು ಕಾಂಗ್ರೆಸ್‌ನಲ್ಲಿ ಡಿನ್ನರ್ ಮತ್ತು ಬ್ರೇಕ್‌ಫಾಸ್ಟ್‌ಗಳು ಹಸಿವು ತಣಿಸುವ ಕಾರ್ಯಕ್ರಮಗಳಲ್ಲ. ಅವು ಶಕ್ತಿ ಪ್ರದರ್ಶನ. ರಾಜಕೀಯ ಸಂದೇಶ. ಭವಿಷ್ಯದ ನಾಯಕತ್ವದ ಸೂಚಕಗಳು. ಬೆಳಗಾವಿಯಲ್ಲಿ ನಡೆದ ಈ ಡಿನ್ನರ್ ಪಾಲಿಟಿಕ್ಸ್ ಬೆಂಗಳೂರು ರಾಜಕಾರಣದ ತಾಪಮಾನವನ್ನು ಎಷ್ಟು ಹೆಚ್ಚಿಸಲಿದೆ? ಸತೀಶ್ ಜಾರಕಿಹೊಳಿ ಅವರ ಈ ನಡೆ ಕಾಂಗ್ರೆಸ್ ಒಳಸಮೀಕರಣವನ್ನ ಯಾವ ದಿಕ್ಕಿಗೆ ಕೊಂಡೊಯ್ಯಲಿದೆ? ಎಸ್‌ಸಿ/ಎಸ್‌ಟಿ ಶಾಸಕರ ಒಗ್ಗಟ್ಟು ಯಾರ ಪರ ನಿಲ್ಲಲಿದೆ? ಈ ಎಲ್ಲಾ ಪ್ರಶ್ನೆಗಳ ಉತ್ತರಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ರಾಜಕಾರಣದ ದಿಕ್ಕನ್ನೇ ನಿರ್ಧರಿಸಲಿವೆ. ಇದು ಕೇವಲ ಡಿನ್ನರ್ ಅಲ್ಲ… ಇದು ರಾಜಕೀಯದ ಡೀಪ್ ಡಿಶ್ ಡ್ರಾಮಾ.

ವರದಿ : ಲಾವಣ್ಯ ಅನಿಗೋಳ

About The Author