GPS ಟ್ರ್ಯಾಕರ್‌ ಸಹಾಯದಿಂದ PG ಕಳ್ಳತನದ ರಹಸ್ಯ ಬಯಲು

ಪಿಜಿ ಕೊಠಡಿಗೆ ನುಗ್ಗಿ ಲ್ಯಾಪ್‌ಟಾಪ್, ಎರಡು ಮೊಬೈಲ್ ಫೋನ್, ಏರ್‌ಪಾಡ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳು ಸೇರಿ ಸುಮಾರು 2.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದ ತಮಿಳುನಾಡು ಮೂಲದ ರಾಘವ್ (24) ಅವರನ್ನು ಬೆಂಗಳೂರು ನಗರದ ಆಡುಗೋಡಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಕ್ಕಸಂದ್ರದ ಪಿಜಿಯಲ್ಲಿ ಫೈನಾನ್ಸ್ ಮ್ಯಾನೇಜರ್ ಚಂದ್ರಶೇಖರ್ ರೆಡ್ಡಿ ಮತ್ತು ಖಾಸಗಿ ಕಂಪನಿ ಉದ್ಯೋಗಿ ಭರತ್ ಇಬ್ಬರು ಒಂದೇ ಕೊಠಡಿಯಲ್ಲಿ ನೆಲೆಸಿದ್ದರು. ಡಿ.12ರಂದು ಬೆಳಿಗ್ಗೆ 6.45 ರ ವೇಳೆಗೆ ಚಂದ್ರಶೇಖರ್ ಜಿಮ್‌ಗೆ ತೆರಳಿದ್ದರು. ಕೊಠಡಿಯಲ್ಲಿ ನಿದ್ದೆ ಮಾಡುತ್ತಿದ್ದ ಭರತ್ ಅವರ ಎಲೆಕ್ಟ್ರಾನಿಕ್ ವಸ್ತುಗಳನ್ನು ರಾಘವ್ ಕದ್ದಿದ್ದಾನೆ. ಮೂರೇ ನಿಮಿಷದಲ್ಲಿ ಕಳ್ಳತನ ಸಂಭವಿಸಿತ್ತು.

ಕಳ್ಳತನಗೊಂಡ ಏರ್‌ಪಾಡ್‌ನಲ್ಲಿ GPS ಟ್ರ್ಯಾಕರ್ ಅಳವಡಿಸಲಾಗಿದ್ದಿದ್ದು, ಭರತ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಅದರಿಂದ ಆರೋಪಿ ನಗರದಲ್ಲಿಯೇ ಬಾಡಿಗೆ ಮನೆಯಲ್ಲಿದ್ದ ತಮಿಳುನಾಡು ಲೊಕೇಶನ್ ಪತ್ತೆಯಾದದ್ದು. ರಾಮನಗರಂನ ಕಟ್ಟಡ ಬಳಿ ಪೊಲೀಸರು ತಂಡ ರಾಘವ್ ಅವರನ್ನು ಬಂಧಿಸಿ, ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಘವ್ ಕಳೆದ ಕೆಲವು ದಿನಗಳಲ್ಲಿ ಮಡಿವಾಳ ಪಿಜಿಯೊಂದರಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನೂ ವಶಪಡಿಸಿಕೊಂಡಿದ್ದಾರೆ. ತನಿಖೆಯಲ್ಲಿ ತಿಳಿಯುತ್ತಿದ್ದು, ಆರೋಪಿ ತಮ್ಮ ಅಣ್ಣನ ಸಲಹೆ ಮೇರೆಗೆ ಕಳ್ಳತನ ಮಾಡುತ್ತಿದ್ದ. ಅವರ ಅಣ್ಣ ಅವರು ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದನೂ ತಿಳಿದು ಬಂದಿದೆ.

ತಂತ್ರಜ್ಞಾನದ ಸಹಾಯದಿಂದ, 11 ಗಂಟೆಗಳಲ್ಲಿಯೇ ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರು ನಾಗರಿಕರಿಗೆ ಎಚ್ಚರಿಕೆ ನೀಡುತ್ತಾ, ತಮ್ಮ ವಸ್ತುಗಳಿಗೆ GPS, ಟ್ರ್ಯಾಕಿಂಗ್ ಸಾಧನಗಳು ಬಳಸಲು ಶಿಫಾರಸು ಮಾಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

About The Author