ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಸಿನೆಮಾ ತಾರೆಯರ ಫೋಟೋಗಳನ್ನು ದುರ್ಬಳಕೆ ಮಾಡಲಾಗುತ್ತಿರುವುದು ಚರ್ಚೆಗೆ ನಾಂದಿ ನೀಡಿದೆ. ಈ ಆನ್‌ಲೈನ್ ಕಿರಿಕಿರಿ ಹಲವಾರು ತಾರೆಯರಿಗೆ ತಲೆನೋವುಂಟುಮಾಡಿದೆ. ಹಲವರು ಧ್ವನಿ ಎತ್ತಿ, ಪ್ರಕರಣ ದಾಖಲಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಾಲಿ, ಬಾಲಿವುಡ್ ನಟಿ ಸೋನಾಕ್ಷಿ ಈ ಬಗ್ಗೆ ‘ಇದರ ನಿಯಂತ್ರಣಕ್ಕಾಗಿ ದೇಶದಲ್ಲಿ ಪ್ರತ್ಯೇಕ ಕಠಿಣ ಕಾನೂನು ರಚನೆಯಾಗಬೇಕು’ ಎಂದು ಆಗ್ರಹಿಸಿದ್ದರು. ಈ ಮಧ್ಯೆ, ಬಹುಭಾಷಾ ನಟಿ ಶ್ರೀಲೀಲಾ ಕೂಡ ಆನ್‌ಲೈನ್ ಕಿರಿಕಿರಿಗೆ ಬೇಸತ್ತಿದ್ದಾರೆ.
ಪ್ರತಿಯೊಬ್ಬರಿಗೂ ಕೈಮುಗಿದು ಕೇಳಿಕೊಳ್ಳುತ್ತೇನೆ. ಕೃತಕ ಬುದ್ಧಿಮತ್ತೆಯಿಂದ ಉಂಟಾಗುತ್ತಿರುವ ಗೊಂದಲಕ್ಕೆ ಆಸ್ಪದ ನೀಡಬೇಡಿ. ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕೂ, ದುರ್ಬಳಕೆ ಮಾಡಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸವಿದೆ. ಮುಂದುವರಿದ ತಂತ್ರಜ್ಞಾನವನ್ನು ಬಳಸಿಕೊಂಡು ಜೀವನವನ್ನು ಸುಲಭಗೊಳಿಸಬೇಕೇ, ಗೊಂದಲಗಳನ್ನು ಸೃಷ್ಟಿಸಬೇಕಲ್ಲ.
ನನಗೆ ಗೊತ್ತಾಗದಂತೆ ಜಾಲತಾಣದಲ್ಲಿ ತೇಜೋವಧೆ ಮಾಡುವ ಮೂಲಕ ನನ್ನನ್ನು ಕುಂದಿಸುವ ಕೆಲಸ ನಡೆಯುತ್ತಿದೆ. ಸಂಬಂಧಪಟ್ಟವರು ಆನ್‌ಲೈನ್ ಕಿರಿಕಿರಿ ಬಗ್ಗೆ ಬೇಸರಪಟ್ಟಿದ್ದಾರೆ. ಈ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಶ್ರೀಲೀಲಾ ಹೇಳಿದ್ದಾರೆ.
ಅಗತ್ಯ ಕ್ರಮ ಕೈಗೊಂಡು ಆನ್‌ಲೈನ್ ದುರ್ಬಳಕೆಯನ್ನು ನಿಯಂತ್ರಿಸಲು ಕಾನೂನು ರೂಪಿಸುವ ಅಗತ್ಯ ಬಗ್ಗೆ ಇಂದು ಮತ್ತೆ ಒತ್ತಾಯ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ




