ನಮಗೆ ನ್ಯಾಯ ಸಿಕ್ಕಿಲ್ಲ ಅಂತ ಅದೆಷ್ಟೋ ಜನ ಪ್ರತಿನಿತ್ಯ ಕೋರ್ಟ್ ಗೆ ಅಲೆದಾಡುತ್ತಾರೆ,ಕೆಲವರಿಗಂತು ವಕೀಲರನ್ನು ಇಟ್ಟು ತಮ್ಮ ಕೇಸ್ ನಡೆಸುವುದಕ್ಕಾಗದೆ ಇರುವುದನ್ನು ಸಹ ನೋಡಿದ್ದೇವೆ.ಆದರೆ ಇದೀಗ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಂ.ಎಸ್ ರಾಮಯ್ಯ ಕಾನೂನು ಮಹಾವಿದ್ಯಾಲಯದ ವತಿಯಿಂದ ನ್ಯಾಯ ರಥವನ್ನು ಲೋಕಾರ್ಪಣೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿ ಕೊಟ್ಟಿದೆ.
ಹಾಗಿದ್ರೆ ಏನಿದು? ಇದು ನ್ಯಾಯ ರಥ ವಾಹನ. ಈ ನ್ಯಾಯ ರಥ ವಾಹನ ಉಚಿತವಾಗಿ ಕಾನೂನು ಸೇವೆ ಪಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಂ.ಎಸ್ ರಾಮಯ್ಯ ಕಾನೂನು ಮಹಾವಿದ್ಯಾಲಯದ ವತಿಯಿಂದ ಈ ನ್ಯಾಯ ರಥ ವಾಹನವನ್ನು ಲೋಕಾರ್ಪಣೆ ಮಾಡಲಾಯಿತು.
ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಧೀಶರಾದ ಶ್ರಿಯುತ ವಿಭು ಬಕ್ರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಸೇವೆಗಳ ಪ್ರಾಧಿಕಾರದ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಶ್ರೀಮತಿ ಅನು ಶಿವರಾಮನ್ ಅವರು ನ್ಯಾಯ ರಥಕ್ಕೆ ಹಸಿರು ನಿಶಾನೆ ತೋರಿಸಿ ರಥಕ್ಕೆ ಚಾಲನೆ ನೀಡಿದ್ರು.
ಇನ್ನೂ ನ್ಯಾಯ ರಥ ಹೇಗೆ ಕಾರ್ಯನಿರ್ವಹಿಸುತ್ತೆ ಮತ್ತು ನ್ಯಾಯ ರಥದ ಸದುಪಯೋಗ ಯಾರು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗುಳು ಹೆಚ್. ಶಶಿಧರ್ ಭಟ್ ಇವರು ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ರು. ಎಂ.ಎಸ್ ರಾಮಯ್ಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಉಮಾ ಮಹೇಶ್ ಮಾತನಾಡಿ ನ್ಯಾಯ ರಥ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸುತ್ತೆ ಹಾಗೂ ಕಾನೂನಿನ ವಿದ್ಯಾರ್ಥಿಗಳು ಕೂಡಾ ನ್ಯಾಯ ರಥದ ಸದುಪಯೋಗ ಪಡಿಸಿಕೊಳ್ಳಬಹು ಅಂತ ಎಂ.ಎಸ್ ರಾಮಯ್ಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಉಮಾ ಮಹೇಶ್ ಮಾತನಾಡಿದ್ರು.
ಒಟ್ಟಾರೆಯಾಗಿ ಜನಸಾಮಾನ್ಯರಿಗೆ ತತ್ಕಾಲದಲ್ಲಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ನ್ಯಾಯ ರಥ ವಾಹನ ಚಾಲನೆ ಕಾರ್ಯಕ್ರಮದಲ್ಲಿ ಹೈ ಕೋರ್ಟ್ ನ ವಕೀಲರು ಹಾಗೂ ಎಂ.ಎಸ್ ರಾಮಯ್ಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರು,ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಮಾಡಿಕೊಟ್ಟರು.




