ಗ್ರಾಮ ಅಭಿವೃದ್ಧಿ ಸಭೆಯಲ್ಲಿ ಶಾಸಕರ ತೀವ್ರ ಅಸಮಾಧಾನ!

ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ ವಿಳಂಬ ಹಾಗೂ ಬೇಜಾವಾಬ್ದಾರಿ ಪಿಡಿಓ, ವಾಲಿಕರ ಮತ್ತು ಶಾಲಾ ಶಿಕ್ಷಕರ ಕೆಲಸದ ಕುರಿತಾಗಿ ಅಸಮಾಧಾನ ತೋರಿದರು.

ಮಲ್ಲನಾಯಕನಕೊಪ್ಪ, ಮೂಗಬಸರಿಕಟ್ಟಿ, ಸಿಂಗಾಪೂರ್ ಸೇರಿದಂತೆ ಹಲವು ಗ್ರಾಮಗಳಲ್ಲಿ ನಡೆದ ಸಭೆಗಳಲ್ಲಿ ಶಾಸಕ ಯಾಸೀರ ಖಾನ್ ಪಠಾಣ್ ಪೂಜೆ ನೆರವೇರಿಸಿ ಕಾಮಗಾರಿ ಚಾಲನೆ ನೀಡಿದರು. ನಾಲ್ಕು ಗ್ರಾಮಗಳ ಕುಂದುಕೊರತೆಗಳ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳು ಉಂಟಾಗಿದ್ದವು. ಶಾಸಕರು ಗ್ರಾಮಸ್ಥರ ಮನವೊಲಿಸಿ ಶಾಲಾ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ ಮತ್ತು ಪಿಡಿಓನಿಗೆ ಬೇಜಾವಾಬ್ದಾರಿ ಕಾರ್ಯಾಚರಣೆ ಬಗ್ಗೆ ವಾರ್ನ್ ಮಾಡಿದ್ದಾರೆ. ಮೂಗಬಸರಿಕಟ್ಟಿ ಗ್ರಾಮಸ್ಥರು ಸಹ ಶಾಸಕರ ಎದುರೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಮಾಹಿತಿಯ ಪ್ರಕಾರ, ಈ ಸಭೆಗಳು ಗ್ರಾಮ ಅಭಿವೃದ್ಧಿ ಕಾಮಗಾರಿಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ಮತ್ತು ಅಧಿಕಾರಿಗಳ ಜವಾಬ್ದಾರಿತ್ವಕ್ಕೆ ಒತ್ತಾಯಿಸಲು ಆಯೋಜಿಸಲ್ಪಟ್ಟವು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author