ಇಸ್ರೋ ಶಕ್ತಿಗೆ ಜಗತ್ತೆ ಬೆರಗು: ಬಾಹ್ಯಾಕಾಶದಿಂದ 4G/5G!

ಅಮೆರಿಕದ AST ಸ್ಪೇಸ್ ಮೊಬೈಲ್ ಕಂಪನಿಗೆ ಸೇರಿದ ಬ್ಲೂಬರ್ಡ್ ಬ್ಲಾಕ್–2 ಉಪಗ್ರಹವನ್ನು ಇಸ್ರೋ ತನ್ನ ಬಲಿಷ್ಠ ಬಹುಪ್ರಚಲಿತ ‘ಬಾಹುಬಲಿ’ ರಾಕೆಟ್ ಅಂತ ಪ್ರಖ್ಯಾತಿ ಪಡೆದಿರುವ LVM3–M6 ಮೂಲಕ ಬುಧವಾರ ಯಶಸ್ವಿಯಾಗಿ ಕೆಳಕಕ್ಷೆಗೆ ಸೇರಿಸಿದೆ. ಇದು ಇಸ್ರೋ ಇದುವರೆಗೆ ಭಾರತದಿಂದ ಉಡಾಯಿಸಿದ ಅತಿ ಭಾರದ ಉಪಗ್ರಹ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

ಬುಧವಾರ ಬೆಳಿಗ್ಗೆ 9.55ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ರಾಕೆಟ್ ಗಗನಕ್ಕೇರಿದ್ದು, ಕೇವಲ 15 ನಿಮಿಷಗಳಲ್ಲಿ 6,100 ಕೆಜಿ ತೂಕದ ಉಪಗ್ರಹವನ್ನು ನಿರ್ದಿಷ್ಟ ಕಕ್ಷೆಯಲ್ಲಿ ಅಚ್ಚುಕಟ್ಟಾಗಿ ನಿಯೋಜಿಸಿತು. ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

43.5 ಮೀಟರ್ ಉದ್ದ, 6.4 ಲಕ್ಷ ಕೆಜಿ ತೂಕದ L- 23-2 ( 2), 518 8. ಎತ್ತರದ ಕೆಳಹಂತದ ಕಕ್ಷೆಗೆ 10000 ಕೆಜಿ ತೂಕದ ಉಪಗ್ರಹ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದ್ದು, ಬುಧವಾರ ಇದು ಅಮೆರಿಕದ 6100 ಕೆಜಿ ತೂಕದ ಉಪಗ್ರಹವನ್ನು ಯಶ ಸ್ವಿಯಾಗಿ ಕಕ್ಷೆ ಸೇರಿಸಿತು. ಇದು ಭಾರತದ ನೆಲದಿಂದ ಇದು ವರೆಗೆ ಹಾರಿಬಿಟ್ಟ ಅತಿ ಭಾರದ ಉಪಗ್ರಹವಾಗಿದೆ. ಈ ಹಿಂದೆ 4400 ಕೆಜಿ ತೂಕದ ಉಪಗ್ರಹವೇ ಇಸ್ರೋ ಹಾರಿಬಿಟ್ಟ ಅತಿ ಭಾರದ ಉಪಗ್ರಹವಾಗಿತ್ತು.

ಭಾರತದ ಭವಿಷ್ಯದ ಮಾನವ ಸಹಿತ ಗಗನಯಾನಕ್ಕೆ ಇದೇ ರಾಕೆಟ್ ಬಳಸಲು ಉದ್ದೇಶಿಸಿದೆ. ಹಿರಿಮೆಉಪಗ್ರಹದಿಂದಲೇ ನೇರವಾಗಿ ಮೊಬೈಲ್‌ಗೆ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುವ ಸಲುವಾಗಿ ಅಮೆರಿಕದ ಎಎಸ್‌ಟಿ ಸ್ಪೇಸ್‌ ಮೊಬೈಲ್ ಹಲವು ಉಪಗ್ರಹಗಳನ್ನು ಹಾರಿಬಿಡಲು ನಿರ್ಧರಿಸಿದ್ದು, ಅದರ ಭಾಗವಾಗಿ ಇದೀಗ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ ಹಾರಿಬಿಡಲಾಗಿದೆ.

ಇದರಿಂದ ವಿಶ್ವದ ಯಾವುದೇ ಮೂಲೆಗೆ ಬೇಕಾದರು 4G/5G ಬ್ಯಾಂಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಯಾವುದೇ ಅಡೆತಡೆಯಿಲ್ಲದೆಯೇ ನೀಡಬಹುದಾಗಿದೆ. ಈ ಉಡ್ಡಯನದೊಂದಿಗೆ ಭಾರತ ಇದುವರೆಗೆ 34 ದೇಶಗಳ 434 ಉಪಗ್ರಹಗಳನ್ನು ಹಾರಿಬಿಟ್ಟಂತಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author